ಮೈಸೂರು: ಮುಡಾ ವಿಸರ್ಜನೆ, ಎಂಡಿಎ ಜಾರಿಗೆ-ಸರ್ಕಾರ ಆದೇಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು (ಮುಡಾ) ಶುಕ್ರವಾರ ವಿಸರ್ಜಿಸಲಾಗಿದ್ದು, ಹೊಸದಾಗಿ ರಚಿಸಲಾಗಿದ್ದ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಜಾರಿಗೆ ಬಂದಿದೆ

Follow Us

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು (ಮುಡಾ) ಶುಕ್ರವಾರ ವಿಸರ್ಜಿಸಲಾಗಿದ್ದು, ಹೊಸದಾಗಿ ರಚಿಸಲಾಗಿದ್ದ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಜಾರಿಗೆ ಬಂದಿದೆ ಎಂದು ಆಯುಕ್ತ ಎ.ಎನ್‌.ರಘುಂದನ್‌ ತಿಳಿಸಿದ್ದಾರೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವಿಧೇಯಕಕ್ಕೆ ರಾಜ್ಯಪಾಲರ ಅನುಮೋದನೆ ದೊರೆತಿದ್ದು, ಕರ್ನಾಟಕ ರಾಜ್ಯಪತ್ರದಲ್ಲಿಯೂ ಪ್ರಕಟವಾಗಿದೆ. ಹೀಗಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದ ಉಪಬಂಧಗಳು ಮೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮುಡಾ ಹಿನ್ನೆಲೆ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯನ್ನು (ಸಿಐಟಿಪಬಿ) ರಚಿಸಿದ್ದರು. ನಂತರ ಜನತಾದಳ ಸರ್ಕಾರ ಅದನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಿ ಬದಲಿಸಿತ್ತು. ಇದೀಗ ಅದು ರದ್ದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಜಾರಿಗೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ನೀಡಿದ ನಂತರ ಮುಡಾ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ಲೋಕಾಯುಕ್ತ ತನಿಖೆ, ಇ,ಡಿ. ತನಿಖೆ ಎಲ್ಲಾ ನಡೆದಿದ್ದವು.

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು (ಮುಡಾ) ಶುಕ್ರವಾರ ವಿಸರ್ಜಿಸಲಾಗಿದ್ದು, ಹೊಸದಾಗಿ ರಚಿಸಲಾಗಿದ್ದ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಜಾರಿಗೆ ಬಂದಿದೆ ಎಂದು ಆಯುಕ್ತ ಎ.ಎನ್‌.ರಘುಂದನ್‌ ತಿಳಿಸಿದ್ದಾರೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವಿಧೇಯಕಕ್ಕೆ ರಾಜ್ಯಪಾಲರ ಅನುಮೋದನೆ ದೊರೆತಿದ್ದು, ಕರ್ನಾಟಕ ರಾಜ್ಯಪತ್ರದಲ್ಲಿಯೂ ಪ್ರಕಟವಾಗಿದೆ. ಹೀಗಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದ ಉಪಬಂಧಗಳು ಮೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮುಡಾ ಹಿನ್ನೆಲೆ:

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯನ್ನು (ಸಿಐಟಿಪಬಿ) ರಚಿಸಿದ್ದರು. ನಂತರ ಜನತಾದಳ ಸರ್ಕಾರ ಅದನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಿ ಬದಲಿಸಿತ್ತು. ಇದೀಗ ಅದು ರದ್ದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಜಾರಿಗೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ನೀಡಿದ ನಂತರ ಮುಡಾ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ಲೋಕಾಯುಕ್ತ ತನಿಖೆ, ಇ,ಡಿ. ತನಿಖೆ ಎಲ್ಲಾ ನಡೆದಿದ್ದವು.

Read more Articles on