-ಕಡೂರಿನಲ್ಲಿ ಟ್ಯಾಕ್ಸಿ ನಿಲ್ದಾಣ ಲೋಕಾರ್ಪಣೆ ಮಾಡಿದ ಶಾಸಕ ಕೆಎಸ್.ಆನಂದ
ಕನ್ನಡಪ್ರಭ ವಾರ್ತೆ ಕಡೂರು
ಜರ್ಮನ್ ಶೀಟ್ ಟ್ಯಾಕ್ಸಿ ನಿಲ್ದಾಣದ ನಿರ್ಮಾಣಕ್ಕೆ 35ಲಕ್ಷ ರೂ. ಅನುದಾನ ನೀಡಿ ಗಮನ ಸೆಳೆಯುವಂತೆ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಅವರು ಕಡೂರು ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ನೂತನ ಟ್ಯಾಕ್ಸಿ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.
ಕಡೂರಿನಲ್ಲೂ ಪುಡ್ ಕೋರ್ಟ್ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಚಾಲಕರಿಗೆ ನಿವೇಶನಕ್ಕಾಗಿ ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಶಾಸಕರೊಂದಿಗೆ ಸಮಾಲೋಚಿಸಿ ಜಾಗ ಖರೀದಿಸಿ ನಿವೇಶನ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
50 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಪಟ್ಟಣಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಅಗತ್ಯವಿದ್ದು 43 ಕೋಟಿ ರೂ. ಗಳಲ್ಲಿ ಟ್ಯಾಂಕರ್ ನಿರ್ಮಾಣ ಈಗಾಗಲೇ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಪುರಸಭಾ ಸದಸ್ಯ ತೋಟದ ಮನೆ ಮೋಹನ್ ಮಾತನಾಡಿ, ಒಗ್ಗಟ್ಟಾಗಿ ಶಾಸಕರನ್ನು ಗೆಲ್ಲಿಸಿದ್ದೇವೆ. ಆದರೆ, ಕೆಲವರು ಅವರನ್ನು ಸೋಲಿಸುವ ತಂತ್ರ ಮಾಡಿದರು ಎಂದು ಆರೋಪಿಸಿದರು. ಚಾಲಕರಿಗೆ ನಿವೇಶನ ನೀಡಿಕೆ ಸಂಬಂಧ ಶಾಸಕರು ಹಾಗೂ ಪುರಸಭೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಪುರಸಭೆ ಸದಸ್ಯರು ಮನು ಮರಗುದ್ದಿ, ಸೈಯದ್ ಯಾಸೀನ್, ಉಮೇಶ್, ಜ್ಯೋತಿ ಆನಂದ್, ಸಂಘದ ಪ್ರ. ಕಾ. ರಾಕೇಶ್ ಎಂ. ಟಿ ಮತ್ತು ಕೆ ಆರ್ ಐ ಡಿ ಎಲ್ ಇಂಜಿನಿಯರ್ ಅನಿತಾ, ಸಿಬ್ಬಂದಿ ಗಿರೀಶ್, ಮಂಜುನಾಥ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಫೋಟೊ:ಶಾಸಕ ಕೆಎಸ್.ಆನಂದ್ ಅವರು ಕಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಇರುವ ಟ್ಯಾಕ್ಸಿ ನಿಲ್ದಾಣವನ್ನು ಉದ್ಘಾಟಿಸಿದರು.
24 ಕೆಕೆಡಿಯು1.