ಶಿವಮೊಗ್ಗದ ನವೀಕೃತ ಬೃಹತ್ ಶೋರೂಂ ಆರಂಭ

KannadaprabhaNewsNetwork |  
Published : Apr 30, 2026, 01:30 AM IST
ಪೋಟೊ: 29ಎಸ್‌ಎಂಜಿಕೆಪಿ08ಶಿವಮೊಗ್ಗದ ಜೈಲ್ ಸರ್ಕಲ್ ಸಮೀಪದ ಕುವೆಂಪು ರಸ್ತೆಯಲ್ಲಿ ದ ಒರಿಜಿನಲ್ ಆಭರಣ ಜ್ಯುವೆಲರ್ಸ್ ಉಡುಪಿ ಸಂಸ್ಥೆಯ  ನವೀಕೃತ ಬೃಹತ್ ಶೋರೂಂ ಅನ್ನು ನಟಿ ಅಂಕಿತ ಅಮರ್, ಶ್ರೇಷ್ಠ ಭಂಡಾರಿ ಅನಾವರಣಗೊಳಿಸಿದರು. | Kannada Prabha

ಸಾರಾಂಶ

ಪ್ರತಿಷ್ಠಿತ ಚಿನ್ನಾಭರಣ ಮಳಿಗೆ, ವಿಶ್ವಾಸ, ಕುಶಲತೆ ಮತ್ತು ಚಿರ ಸೌಂದರ್ಯಕ್ಕೆ ಹೆಸರುವಾಸಿಯಾದ ಉಡುಪಿಯ ದ ಒರಿಜಿನಲ್ ಆಭರಣ ಜ್ಯುವೆಲರ್ಸ್ ಸಂಸ್ಥೆಯ ಶಿವಮೊಗ್ಗದ ನವೀಕರಣಗೊಂಡ ಬೃಹತ್ ಮಳಿಗೆ ಶಿವಮೊಗ್ಗದ ಜೈಲ್ ಸರ್ಕಲ್ ಸಮೀಪದ ಕುವೆಂಪು ರಸ್ತೆಯಲ್ಲಿ ಬುಧವಾರ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರತಿಷ್ಠಿತ ಚಿನ್ನಾಭರಣ ಮಳಿಗೆ, ವಿಶ್ವಾಸ, ಕುಶಲತೆ ಮತ್ತು ಚಿರ ಸೌಂದರ್ಯಕ್ಕೆ ಹೆಸರುವಾಸಿಯಾದ ಉಡುಪಿಯ ದ ಒರಿಜಿನಲ್ ಆಭರಣ ಜ್ಯುವೆಲರ್ಸ್ ಸಂಸ್ಥೆಯ ಶಿವಮೊಗ್ಗದ ನವೀಕರಣಗೊಂಡ ಬೃಹತ್ ಮಳಿಗೆ ಶಿವಮೊಗ್ಗದ ಜೈಲ್ ಸರ್ಕಲ್ ಸಮೀಪದ ಕುವೆಂಪು ರಸ್ತೆಯಲ್ಲಿ ಬುಧವಾರ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.

ವಿನೂತನ ಶೋರೂಂನ ಉದ್ಘಾಟನೆ ಅತ್ಯಂತ ವಿಜೃಂಭಣೆಯಿಂದ ನೆರವೇರಿಸುವ ಮೂಲಕ ಒಂದು ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಸಂದರ್ಭ ಗ್ರಾಹಕರು, ಹಿತೈಷಿಗಳು ಮತ್ತು ಸ್ಥಳೀಯರು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಉದ್ಘಾಟನಾ ಸಮಾರಂಭವು ಅಪಾರ ಅಭಿಮಾನಿಗಳ ಸಮಕ್ಷಮದಲ್ಲಿ ಗಣ್ಯ ಅತಿಥಿಗಳ ಅಮೃತಹಸ್ತದಿಂದ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಂಕಿತ ಅಮರ್, ಶ್ರೇಷ್ಠ ಭಂಡಾರಿ, ವಂದನಾ ಶಾನ, ಗೀತಾ ಪೈ, ಗಜರದೇವಿ ಜಾದವ್, ಶೈಲಶ್ರೀ ಕಾಮತ್, ರಂಗಲಕ್ಷ್ಮೀ ಸುಬ್ರಮಣ್ಯಮ್ ಹಾಜರಿದ್ದರು. ಈ ವಿಶಿಷ್ಟ ಚಿನ್ನ ಮತ್ತು ವಜ್ರದ ಆಭರಣಗಳ ಸಂಗ್ರಹದ ಅನಾವರಣ ಸಮಾರಂಭವು ನೆರೆದ ಜನಸ್ತೋಮದ ಕಣ್ಮನ ಸೆಳೆಯಿತು.

ಚಿನ್ನದ ಆಭರಣಗಳ ವಿಭಾಗದ ಶುಭಾರಂಭ ಮತ್ತು ಜ್ಯುವೆಲರ್ಸ್ ಕಲೆಕ್ಷನ್‍ಯನ್ನು ಭಾಸ್ಕರ್ ಜಿ. ಕಾಮತ್, ರೋಹಿಣಿ ಜಗದೀಶ್ ಪೈ ಹಾಗೂ ಮ್ರುದುಲ ರಂಜನ್ ಪೈ ಅನಾವರಣಗೊಳಿಸಿದರು. ಬೆಳ್ಳಿಯ ಆಭರಣಗಳ ವಿಭಾಗದ ಶುಭರಂಭ ಮತ್ತು ಜ್ಯುವೆಲರ್ಸ್‍ಯನ್ನು ಕಲೆಕ್ಷನ್‍ನ ಅಶ್ವತ್ ನಾರಾಯಣ್ ಅನಾವರಣಗೊಳಿಸಿದರು. ವಜ್ರದ ಆಭರಣಗಳ ವಿಭಾಗದ ಶುಭಾರಂಭ, ಜ್ಯುವೆಲರ್ಸ್ ಕಲೆಕ್ಷನ್‍ನ ನಟಿ ಅಂಕಿತ ಅಮರ್, ಶ್ರೇಷ್ಠ ಭಂಡಾರಿ ಅನಾವರಣಗೊಳಿಸಿದರು.

ದ ಒರಿಜಿನಲ್ ಆಭರಣ ಕುಟುಂಬದ ಪ್ರಮುಖ ಸದಸ್ಯರಾದ ಮಧುಕರ್ ಎಸ್. ಕಾಮತ್, ಸುಭಾಸ್ ಎಂ. ಕಾಮತ್, ಮಹೇಶ್ ಎಂ. ಕಾಮತ್, ಸಂಧ್ಯಾ ಎಸ್. ಕಾಮತ್, ವೀಣಾ ಎಂ. ಕಾಮತ್, ಸಾತ್ವಿಕ್ ಕಾಮತ್, ಆಕರ್ಷ್ ಕಾಮತ್, ಶ್ಲೋಕಾ ಕಾಮತ್, ಅದಿತ್ರಿ ಕಾಮತ್ ಉತ್ಸಾಹದಿಂದ ನೆರವೇರಿಸಿಕೊಟ್ಟರು.

ದಿವಂಗತ ರಾಧಾ ಕಾಮತ್ ಅವರ ಆಶೀರ್ವಾದ ಇವರ ಪಾಲಿಗಿತ್ತು ಎಂಬುದು ಎದ್ದು ತೋರುತ್ತಿತ್ತು. ಶಾಸಕಿ ಶಾರದ ಪೂರ್ಯಾ ನಾಯ್ಕ್, ಮಾಜಿ ಶಾಸಕ ಅಶೋಕ್ ನಾಯ್ಕ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್, ಸಂಸದಬಿ.ವೈ. ರಾಘವೇಂದ್ರ, ರಮೇಶ್ ನಾಯಕ್ ಶುಭ ಹಾರೈಸಿದರು.

ಸಕಲ ಸವಲತ್ತುಗಳ ಐಷಾರಾಮಿ ಅನುಭವವನ್ನು ನೀಡಲು ಈ ಹೊಸ ವಿಶಾಲ ಶೋರೂಂ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ತನ್ನ ಬಂಗಾರ, ಬೆಳ್ಳಿ, ವಜ್ರ ಮತ್ತು ಮದುವೆಯ ಆಭರಣಗಳ ಆಯ್ದ ಪಾರಂಪರಿಕರ ಹಾಗೂ ಅತ್ಯಾಧುನಿಕ ಸಂಗ್ರಹಗಳ ಪ್ರದರ್ಶನದಿಂದ ಸಂದರ್ಶಕರನ್ನು ಮಂತ್ರಮುಗ್ಧಗೊಳಿಸಿತು. ಇದು ಆಭರಣದ ರಿಟೇಲ್ ವ್ಯಾಪಾರದ ಭವಿಷ್ಯಕ್ಕಾಗಿ ದ ಒರಿಜಿನಲ್ ಆಭರಣದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತಿತ್ತು.

ದ ಒರಿಜಿನಲ್ ಆಭರಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್ ಮಾತನಾಡಿ, ಇಂದು ನಮಗೆ ದೊರೆತ ಪ್ರೋತ್ಸಾಹ, ಬೆಂಬಲ ಕಂಡು ನಾವೆಲ್ಲ ಭಾವಪರವಶರಾಗಿದ್ದೇವೆ. ಈ ಸ್ಥಳಾಂತರವು ಕೇವಲ ಹೊಸ ವಿಳಾಸಕ್ಕೆ ಸೀಮಿತವಾಗಿಲ್ಲ. ಇದು ಶಿವಮೊಗ್ಗದ ನಮ್ಮ ಗ್ರಾಹಕರಿಗೆ ನಮ್ಮ ಮೇಲಿರುವ ಅಪಾರ ವಿಶ್ವಾಸವನ್ನು ಮತ್ತು ನಮ್ಮ ನಡುವಿನ ಅವಿನಾಭಾವ ಸಂಬಂಧವನ್ನು ಪ್ರತಿಫಲಿಸುತ್ತದೆ ಎಂದರು.

ತಮ್ಮ ಶೋರೂಂ ಸ್ಥಳಾಂತರದೊಂದಿಗೆ ದ ಒರಿಜಿನಲ್ ಆಭರಣ ತನ್ನ ಅಖಂಡ ವಿಶ್ವಾಸ, ಅಪ್ರತಿಮ ಗುಣಮಟ್ಟ ಮತ್ತು ಅತುಲನೀಯ ಕರಕುಶಲತೆಯ ಪರಂಪರೆಗೆ ಬದ್ಧವಾಗಿದೆ. ತಮ್ಮ ಗ್ರಾಹಕರು, ಪೋಷಕರು ಮತ್ತು ಹಿತೈಷಿಗಳಿಗೆ ಈ ಮಹತ್ವದ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಆಭರಣ ಪರಿವಾರ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದರು.

ಗ್ರಾಹಕರು ಹೊಸ ಶೋರೂಂ ಅನ್ನು ಮೆಚ್ಚುತ್ತ ಬ್ರಾಂಡ್‍ನ ಇತ್ತೀಚಿನ ಉತ್ಪನ್ನಗಳನ್ನು ಕಣ್ತುಂಬಿಕೊಂಡು ಆನಂದಿಸಿದರು. ಆರ್.ಜೆ. ನಿಕಿತಾ, ಗೌರಿ ಕರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಶ್ರೀಷಡಕ್ಷರ ಗವಿಮಠದಲ್ಲಿ ಧಾರ್ಮಿಕ ಸಭೆ
ಗೋಮಾಳ ಜಮೀನಿನಲ್ಲಿ ಅಕ್ರಮ ಜೆಎಂಸಿ ಸರ್ವೇಗೆ ಖಂಡನೆ