ಬಣಜಿಗ ಜಾತಿ ಪ್ರಮಾಣಪತ್ರ ನೀಡುವಲ್ಲಿ ವಿಳಂಬ ಬೇಡ: ತಹಸೀಲ್ದಾರರಿಗೆ ಮನವಿ

KannadaprabhaNewsNetwork |  
Published : Nov 26, 2025, 02:30 AM IST
ಪೊಟೋ-ಪಟ್ಟಣದ ತಹಸೀಲ್ದಾರ ಅವರಿಗೆ ಬಣಜಿಗ ಸಮಾಜದವರಿಂದ ಜಾತಿ ಪ್ರಮಾಣ ಪತ್ರ ವಿಳಂಬ ಮಾಡದೆ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಜಾತಿ ಪ್ರಮಾಣಪತ್ರ ನೀಡಲು ವಿಳಂಬ ಮಾಡುವ ಅಥವಾ ಸಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ ಇಂತಹ ಪ್ರಕರಣಗಳನ್ನು ಸಮಾಜದವರು ಗಂಭೀರವಾಗಿ ಪರಿಗಣಿಸಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು.

ಲಕ್ಷ್ಮೇಶ್ವರ: ಬಣಜಿಗ ಸಮಾಜಕ್ಕೆ ಶಿಕ್ಷಣಕ್ಕಾಗಿ ೨ಎ ಹಾಗೂ ಇತರೆ ಸೌಲಭ್ಯಕ್ಕಾಗಿ ೩ಎ ಜಾತಿ ಪ್ರಮಾಣಪತ್ರವನ್ನು ನೀಡುವ ನಿಟ್ಟಿನಲ್ಲಿ ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಸರಿಯಾದ ಸಮಯಕ್ಕೆ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ದಿ ಟ್ರಸ್ಟ್ ವತಿಯಿಂದ ತಹಸೀಲ್ದಾರ್ ಎಂ. ಧನಂಜಯ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಟ್ರಸ್ಟ್‌ನ ಉಪಾಧ್ಯಕ್ಷ ಲೋಹಿತ ನೆಲವಿಗಿ ಮತ್ತು ಕಾನೂನು ಸಲಹೆಗಾರ ಪ್ರಕಾಶ ವಾಲಿ ಮಾತನಾಡಿ, ಜಾತಿ ಪ್ರಮಾಣಪತ್ರಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಶಾಲಾ ದಾಖಲಾತಿಯನ್ನು ಮಾತ್ರ ಆಧಾರವಾಗಿ ಇಟ್ಟುಕೊಳ್ಳದೆ ವಿಚಾರಣೆಯಿಂದ ಜಾತಿಯ ಬಗ್ಗೆ ಖಾತ್ರಿ ಮಾಡಿಕೊಂಡು ಅರ್ಜಿದಾರರಿಗೆ ಪ್ರಮಾಣಪತ್ರ ನೀಡಲು ಸಕ್ಷಮ ಪ್ರಾಧಿಕಾರ ಸೂಚಿಸಿದೆ.

ಬಣಜಿಗ ಸಮಾಜದವರು ಜಾತಿ ಮತ್ತು ಆದಾಯ ಪ್ರಮಾಣಪತ್ರ ಮತ್ತು ಸಿಂಧುತ್ವ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದಾಗ ಯಾವುದೇ ವಿಳಂಬ ಮಾಡಬಾರದು. ಜಾತಿ ಪ್ರಮಾಣಪತ್ರ ನೀಡಲು ವಿಳಂಬ ಮಾಡುವ ಅಥವಾ ಸಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ ಇಂತಹ ಪ್ರಕರಣಗಳನ್ನು ಸಮಾಜದವರು ಗಂಭೀರವಾಗಿ ಪರಿಗಣಿಸಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.ಈಗಾಗಲೇ ತಹಸೀಲ್ದಾರ್ ಕಚೇರಿಗೆ ಅರ್ಜಿಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿದ್ದು, ತಹಸೀಲ್ದಾರರು ಕೂಡಲೇ ಇವುಗಳನ್ನು ಪರಿಶೀಲಿಸಿ ಅರ್ಜಿದಾರರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ ಸ್ಥಳೀಯವಾಗಿ ಬಣಜಿಗ ಸಮಾಜದವರಿಗೆ ನೋಂದಾಯಿತ ಬಣಜಿಗ ಸಮಾಜ ಕ್ಷೇಮಾಭಿವೃದ್ದಿ ಟ್ರಸ್ಟ್ ವತಿಯಿಂದ ಬಣಜಿಗ ಜಾತಿಗೆ ಸೇರಿರುವ ಬಗ್ಗೆ ದೃಢೀಕರಣ ಪತ್ರವನ್ನು ನೀಡುವುದನ್ನು ಮಾನ್ಯ ಮಾಡಲು ಸರ್ಕಾರದ ಸುತ್ತೋಲೆಯಲ್ಲಿ ಇರುವುದನ್ನು ಸಹ ಪರಿಶೀಲಿಸಿ ಜಾತಿ ಪ್ರಮಾಣಪತ್ರ ನೀಡಬೇಕು. ಇದರಿಂದ ಸಮಾಜದವರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ ಎಂದರು.

ತಹಸೀಲ್ದಾರ್ ಎಂ. ಧನಂಜಯ ಅವರು, ಈ ಕುರಿತು ಕಚೇರಿಯಲ್ಲಿ ನ್ಯೂನತೆಗಳು ಕಂಡುಬಂದಲ್ಲಿ ತಕ್ಷಣ ಸರಿಪಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಸಣ್ಣ ಬೆಂಡಿಗೇರಿ, ಚಂದ್ರಣ್ಣ ಮಹಾಂತಶೆಟ್ಟರ, ಕೊಟ್ರೇಶ ಕತ್ತಿ, ವಿಜಯ ಬೂದಿಹಾಳ, ದುಂಡೇಶ ಕೊಟಗಿ, ವಿಜಯ ಕೊಟಗಿ, ಚಂದ್ರಶೇಖರ ಹತ್ತಿಕಾಳ, ಶಿವಯೋಗಿ ಗಾಂಜಿ, ಆನಂದ ತಟ್ಟಿ, ಈರಣ್ಣ ಅಳಗುಂಡಗಿ, ವೀರಣ್ಣ ತೆಗ್ಗಳ್ಳಿ, ದುಂಡೇಶ ಕೊಟಗಿ, ಎಸ್.ವಿ. ಅಂಗಡಿ, ಶಾಮಣ್ಣ ಗಾಂಜಿ, ಶಿವು ನರ್ತಿ, ಶಂಕರ ಶಿಳ್ಳಿನ ಇದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ