ಕನ್ನಡಪ್ರಭ ವಾರ್ತೆ ಪಾಂಡವಪುರ
ಕಳೆದ ಬಾರಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಕಾರಣ ಎಸ್ಸೆಸ್ಸೆಲ್ಸಿ ಮಕ್ಕಳ ತರಗತಿಯನ್ನು ಎರಡು ವಿಭಾಗ ಮಾಡಿಕೊಂಡು ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಕಡೆಗೆ ಹೆಚ್ಚು ನಿಗಾ ವಹಿಸಿ ಅವರನ್ನು ಉತ್ತಮ ಕಲಿಕೆಗೆ ಪ್ರೇರೆಪಿಸಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶ ತರಲು ಶ್ರಮಿಸಬೇಕು ಎಂದರು.
ಶಿಕ್ಷಕರಿಗೆ ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದಂತೆ ಕೆಲವು ಮಾರ್ಗದರ್ಶನ ನೀಡಿದ ಅವರು, ಮಕ್ಕಳಿಗೂ ಕೆಲವು ಸಲಹೆ ನೀಡಿದರು. ಎಸ್ ಡಿಎಂಸಿ ಸದಸ್ಯರ ಜತೆಗೂ ಚರ್ಚಿಸಿದರು.ಈ ವೇಳೆ ಮುಖ್ಯ ಶಿಕ್ಷಕ ಎನ್.ಮಹದೇವಪ್ಪ, ಎಸ್ ಡಿಎಂಸಿ ಸದಸ್ಯರಾದ ಎನ್.ಕೃಷ್ಣೇಗೌಡ, ಅಬಿದಾ, ಪುಷ್ಪಾ, ನಾಗನಾಯಕ, ಹಾರೋಹಳ್ಳಿ ಕೃಷ್ಣೇಗೌಡ, ಸಹ ಶಿಕ್ಷಕರಾದ ಚಂಪಾ, ಶ್ರೀವೇಣಿ, ಸೌಮ್ಯಲತಾ, ದೈಹಿಕ ಶಿಕ್ಷಣ ಶಿಕ್ಷಕ ಸಿ.ಮಹೇಶ್, ತೋಟಗಾರಿಕೆ ಶಿಕ್ಷಕ ಚನ್ನೇಗೌಡ, ಪ್ರಥಮ ದರ್ಜೆ ಸಹಾಯಕ ಕಾರ್ತಿಕ್ ಸೇರಿದಂತೆ ಇತರರಿದ್ದರು.
ಸ್ವಚ್ಛತೆಗಾಗಿ ವಿದ್ಯಾರ್ಥಿಗಳಿಂದ ಬೀದಿಗಳಲ್ಲಿ ಜಾಥಾಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರಗತಿ ಶಾಲೆ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆಗಾಗಿ ಜಾಥಾ ನಡೆಸಿದರು.ಪುರಸಭೆ ಮುಖ್ಯ ಅಧಿಕಾರಿ ಅಶೋಕ್ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆ ಎನ್ನುವುದು ನಮ್ಮ ಜೀವನಕ್ಕೆ ಅತ್ಯಂತ ಅಗತ್ಯ ಒಂದು ಭಾಗ. ಉತ್ತಮ ಆರೋಗ್ಯಕ್ಕೆ ನಾವು ವಾಸಿಸುವ ಪರಿಸರ ಸ್ವಚ್ಛವಾಗಿರಬೇಕು. ಜನರ ಬದುಕು ಆರೋಗ್ಯಕರವಾಗಿರುತ್ತದೆ ಎಂದರು.
ಪ್ರತಿ ಮನೆ ಮನೆಯಲ್ಲಿ, ಬೀದಿ ಬೀದಿಯಲ್ಲಿ ಸ್ವಚ್ಛತೆ ಅವಶ್ಯಕ. ಉತ್ತಮ ನಗರ ಎನಿಸಿಕೊಳ್ಳಬೇಕಾದರೆ ಅಲ್ಲಿ ಸ್ವಚ್ಛತೆಗೆ ಹಲವು ಸುಧಾರಣ, ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರು ಕಂಡ ಕಂಡಲ್ಲಿ ಕಸಗಳನ್ನು ಎಸೆಯುವುದರ ಬದಲು ನಿರ್ದಿಷ್ಟ ಸ್ಥಳದಲ್ಲಿ ಇರಿಸಿ ಪುರಸಭೆಯ ವಾಹನಗಳಿಗೆ ನೀಡಿದರೆ ಪಟ್ಟಣದ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಜಾಥಾದಲ್ಲಿ ಪರಿಸರ ಎಂಜಿನಿಯರ್ ಪ್ರಿಯಾಂಕಾ ಎಂ.ಎ, ಆರೋಗ್ಯ ನಿರೀಕ್ಷಕ ಶೋಕ್, ಪ್ರಗತಿ ಶಾಲೆ ಶಿಕ್ಷಕರು ಜಾಥಾ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಬ್ಯಾಂಡ್ ಸೆಟ್, ಬಾರಿಸುವ ಮೂಲಕ ಜನ ಜಾಗೃತಿ ಮೂಡಿಸಿದರು.