ಎನ್‌ಎಸ್‌ಎಸ್‌ ಶಿಬಿರಗಳು ಸಾಮಾಜಿಕ ಕಳಕಳಿಯ ಸಂಕೇತ: ಎಚ್.ಟಿ.ಮಂಜು

KannadaprabhaNewsNetwork |  
Published : Nov 24, 2025, 02:00 AM IST
23ಕೆಎಂಎನ್ ಡಿ22 | Kannada Prabha

ಸಾರಾಂಶ

ಶಿಬಿರಗಳು ವ್ಯಾವಹಾರಿಕವಾಗಿ ಹಾಗೂ ಶ್ರದ್ಧೆ, ವಿನಯ, ಶಿಸ್ತು ಮುಂತಾದುವುಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿ ಜೀವನ ಚಿನ್ನದಂಥಹ ಜೀವನ. ಎನ್‌ಎಸ್‌ಎಸ್ ಶಿಬಿರದಲ್ಲಿನ ಘಟನೆಗಳನ್ನು ನೀವು ಎಂದಿಗೂ ಮರೆಯಲಾಗದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾಮಾಜಿಕ ಕಳಕಳಿಯ ಸಂಕೇತವಾಗಿರುವ ಎನ್‌ಎಸ್‌ಎಸ್ ಶಿಬಿರಗಳು ಸಮಾಜದ ಸ್ವಾಸ್ಥ್ಯಕ್ಕೆ ಅನುಕೂಲವಾಗಲಿವೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.

ತಾಲೂಕಿನ ಬೀರುವಳ್ಳಿಯಲ್ಲಿ ನಡೆಯುತ್ತಿರುವ ಕೆ.ಆರ್.ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶ್ರಮದಾನ ಶಿಬಿರದಲ್ಲಿ ಮಾತನಾಡಿ, ಎನ್‌ಎಸ್‌ಎಸ್ ಶಿಬಿರ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ದೈನಂದಿನದ ಬದುಕಿನಲ್ಲಿ ಎದುರಾಗುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಲು ಧೈರ್ಯ ಬರುತ್ತದೆ ಎಂದರು.

ಶಿಬಿರಗಳು ವ್ಯಾವಹಾರಿಕವಾಗಿ ಹಾಗೂ ಶ್ರದ್ಧೆ, ವಿನಯ, ಶಿಸ್ತು ಮುಂತಾದುವುಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿ ಜೀವನ ಚಿನ್ನದಂಥಹ ಜೀವನ. ಎನ್‌ಎಸ್‌ಎಸ್ ಶಿಬಿರದಲ್ಲಿನ ಘಟನೆಗಳನ್ನು ನೀವು ಎಂದಿಗೂ ಮರೆಯಲಾಗದು ಎಂದರು.

ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಮಾತನಾಡಿ, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ ಗ್ರಾಮೀಣ ಪ್ರದೇಶದ ರೈತನ ಮಗನಾಗಿ ಶಾಸಕರಾಗಿರುವ ಮಂಜಣ್ಣನವರು ಸಜ್ಜನ ರಾಜಕಾರಣಿಯಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿ ಸಮಾಜಸೇವೆ ಮಾಡುತ್ತಿದ್ದಾರೆ. ಎನ್‌ಎಸ್‌ಎಸ್ ಶಿಬಿರಗಳು ಇಂತಹ ನಾಯಕತ್ವದ ಗುಣಕ್ಕೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್, ಬಿಇಒ ತಿಮ್ಮೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ಮುಖಂಡರಾದ ಬಿ.ಎಲ್.ಶಿವರಾಮೇಗೌಡ, ಬಿಜಿಎಸ್ ಆಸ್ಪತ್ರೆ ಆರ್‌ಎಂಒ ಸೋಮಶೇಖರ್, ಬಿ.ಟಿ.ಕುಮಾರ್, ಬಿ.ಎನ್.ಲಕ್ಷ್ಮೇಗೌಡ, ಬಿ.ಆರ್.ಕೃಷ್ಣೇಗೌಡ, ನಿವೃತ್ತ ಪ್ರಾಂಶುಪಾಲ ಲೇಪಾಕ್ಷಿಗೌಡ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಆರ್.ಬಿ.ಪದ್ಮನಾಭ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವಾರು ಮುಖಂಡರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇಂದು ಕೊಡಲ್ಲ ಅಂದ್ರೆ ಕೊಡಲ್ಲ ನಾಟಕ ಪ್ರದರ್ಶನ

ನಾಗಮಂಗಲ: ಪಟ್ಟಣದ ಕನ್ನಡ ಸಂಘ ವಿಶ್ವಸ್ಥ ಸಮಿತಿಯಿಂದ ಸರ್ಕಾರಿ ಪದವಿ ಪೂರ್ವಕಾಲೇಜು ಆವರಣದಲ್ಲಿ ನಿರ್ಮಿಸಿರುವ ಡಾ.ಎಸ್.ಎಲ್.ಭೈರಪ್ಪ ನೆನಪಿನ ವೇದಿಯಲ್ಲಿ ಆಯೋಜಿಸಿರುವ 17ನೇ ವರ್ಷದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದ ಎರಡನೇ ದಿನವಾದ ನ.24ರ ಸಂಜೆ 7.15ಕ್ಕೆ ಶ್ರೀರಂಗಪಟ್ಟಣದ ನಿರ್ದಿಗಂತ ಪ್ರಸ್ತುತ ಪಡಿಸುವ ಶಕೀಲ್ ಅಹ್ಮದ್ ನಿರ್ದೇಶನದ ಕೊಡಲ್ಲ ಅಂದ್ರೆ ಕೊಡಲ್ಲ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ಸಾರಾಂಶ: ಬೆಲೆ ಏರಿಕೆ, ಆರ್ಥಿಕ ಸಂಕಷ್ಟ ಮತ್ತು ಹೆಚ್ಚುತ್ತಿರುವ ತೆರಿಗೆಯನ್ನು ವಿರೋಧಿಸಿ ನಿಲ್ಲುವ ಒಂದು ರಾಜಕೀಯ ಪ್ರಹಸನ. ದಬ್ಬಾಳಿಕೆ ವ್ಯವಸ್ಥೆಯ ವಿರುದ್ಧ ಸಾಮಾನ್ಯ ಜನರು ಒಂದಾಗುವುದರೊಂದಿಗೆ ಒಗ್ಗಟ್ಟಿನ ಕರೆಯಲ್ಲಿ ಈ ನಾಟಕ ಕೊನೆಗೊಳ್ಳಲಿದೆ.

PREV

Recommended Stories

ಕಾಡಾನೆಗಳ ದಾಳಿಗೆ ನೆಲಸಮವಾದ ಜೋಳದ ಫಸಲು
ವಿಸಿ ನಾಲಾ ರಸ್ತೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ..!