- ಉತ್ತರ, ದಕ್ಷಿಣ ವಿಧಾಸಭೆ ಚುನಾವಣೆ ಬಗ್ಗೆ ಬಂದು ಆಣೆ ಮಾಡಿ । ಸಿದ್ದೇಶ್ವರ, ಜಿಎಂಐಟಿ ಬಾಯ್ಸ್‌ಗೆ ಪಂಥಾಹ್ವಾನ
ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಕೆಲಸ ಮಾಡಿದ್ದಾಗಿ ಧರ್ಮಸ್ಥಳವಷ್ಟೇ ಅಲ್ಲ, ಎಲ್ಲ ಹಿಂದು ದೇವಾಲಯಗಳಿಗೂ ಬಂದು ಪ್ರಮಾಣ ಮಾಡಲು ನಾವು ಸಿದ್ಧ. ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಪರ ಕೆಲಸ ಮಾಡಿದ್ದಾಗಿ ನೀವೂ ಬಂದು ಪ್ರಮಾಣ ಮಾಡಿ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಜಿಎಂಐಟಿ ಬಾಯ್ಸ್‌ಗೆ ಹೊನ್ನಾಳಿ, ಚನ್ನಗಿರಿ ಕ್ಷೇತ್ರಗಳ ಬಿಜೆಪಿ ಮುಖಂಡರು ಪಂಥಾಹ್ವಾನ ನೀಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರರ ಗೆಲುವಿಗಾಗಿ ಪ್ರಾಮಾಣಿಕವಾಗಿ ದುಡಿದಿರುವ ಬಗ್ಗೆ ನಾವು ಪ್ರಮಾಣ ಮಾಡಲು ಸಿದ್ಧ. ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಲೋಕಿಕೆರೆ ನಾಗರಾಜ, ದಾವಣಗೆರೆ ದಕ್ಷಿಣ ಕ್ಷೇತ್ರದ ಬಿ.ಜಿ.ಅಜಯಕುಮಾರ ಪರವಾಗಿ ಕೆಲಸ ಮಾಡಿದ್ದರೆ ಬಂದು ಆಣೆ ಮಾಡಿ, ಸಾಬೀತುಪಡಿಸಿ ಎಂದು ಸವಾಲೆಸೆದರು.ಬಿಜೆಪಿ ನಿಷ್ಠರು ನಾವು:
ವೀರೇಶ ಹನಗವಾಡಿ ಶ್ರಮವೇನು?:
ವೀರೇಶ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಒಂದು ದಿನವೂ ಕಾಂಗ್ರೆಸ್ ವಿರುದ್ಧವಾಗಲೀ, ಶಾಮನೂರು ಕುಟುಂಬದ ವಿರುದ್ಧವಾಗಲೀ ಮಾತನಾಡಿದ್ದಾರಾ? ಮಾಜಿ ಸಂಸದ ಸಿದ್ದೇಶ್ವರ್ ಅವರಿಗೆ ಇದೇ ಜಿಎಂಐಟಿ ಬಾಯ್ಸ್‌ಗಳು ಸದಾ ಹಾದಿ ತಪ್ಪಿಸುತ್ತಾ ಬಂದಿದ್ದರಿಂದಲೇ ಬಿಜೆಪಿಗೆ ಕ್ಷೇತ್ರದಲ್ಲಿ ಸೋಲಾಗಿದ್ದನ್ನುಎಲ್ಲರೂ ಬಲ್ಲರು. ಮೂರು ಸಲ ಶಾಸಕರಿದ್ದ ರೇಣುಕಾಚಾರ್ಯ ಸಚಿವರಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದು ತಿರುಗೇಟು ನೀಡಿದರು.
ಪಕ್ಷದ ಮುಖಂಡರಾದ ಹೊದಿಗೆರೆ ಉಮೇಶ, ಮಂಜಣ್ಣ, ಸಂಗಮ್, ರಾಜು ವೀರಣ್ಣ, ಪ್ರವೀಣ ಜಾಧವ್, ಸುರೇಂದ್ರ ನಾಯಕ್, ಮಾರುತಿ ನಾಯಕ್, ಶಿವು ಹುಡೇದ್, ಮಂಜಣ್ಣ ನೆಲಹೊನ್ನೆ, ನಾಗರಾಜ, ಜಯಣ್ಣ, ಅಪ್ಪು, ಜಗದೀಶ, ಮಲ್ಲಿಕಾರ್ಜುನ, ನಾಗರಾಜ, ಕುಮಾರ, ಸಚಿನ್ ಇತರರು ಇದ್ದರು.
ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ನಮ್ಮ ನಾಯಕರಿಗೆ ಪದೇಪದೇ ಅವಮಾನಿಸುವ ಕೆಲಸವಾಗುತ್ತಿದೆ. ಹೀಗೆಯೇ ಮಾಡುತ್ತಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ನಾವೂ ವರಿಷ್ಠರಿಗೆ ದೂರು ನೀಡುತ್ತೇವೆ. ತಾಕತ್ತಿದ್ದರೆ ರೇಣುಕಾಚಾರ್ಯ ಇತರರನ್ನು ಪಕ್ಷದಿಂದ ಉಚ್ಚಾಟಿಸಿ, ತೋರಿಸಲಿ ನೋಡೋಣ - ಜೆ.ಕೆ.ಸುರೇಶ, ಅಧ್ಯಕ್ಷ, ಹೊನ್ನಾಳಿ ಮಂಡಲ
- ಕುಬೇರಪ್ಪ, ರಾಜ್ಯ ಉಪಾಧ್ಯಕ್ಷ, ಬಿಜೆಪಿ ಒಬಿಸಿ ಮೋರ್ಚಾ
ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಹೊನ್ನಾಳಿ, ಚನ್ನಗಿರಿ ತಾಲೂಕು ಮುಖಂಡರಾದ ಜೆ.ಕೆ.ಸುರೇಶ, ಕುಬೇರಪ್ಪ, ಬಿ.ಉಮೇಶಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.