ಮಡಿಕೇರಿ: ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಮಾಜದ ಮತ್ತು ಸಂಘದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕೊಡಗು ಜಿಲ್ಲಾ ಮರಾಠ / ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ. ಪರಮೇಶ್ವರ್ ಹೇಳಿದರು.ಮಡಿಕೇರಿ ತಾಲೂಕಿನ ತಾಳತ್ತಮನೆಯಲ್ಲಿರುವ ಸಂಘದ ನಿವೇಶನದಲ್ಲಿ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ 2026-27ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘದ ವತಿಯಿಂದ ಈಗಾಗಲೇ 4 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜದ ಸಭಾಭವನ ಕಾಮಗಾರಿ ಪ್ರಗತಿಯಲ್ಲಿದೆ. ಸರ್ಕಾರದಿಂದ ಮತ್ತಷ್ಟು ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದರು. ಜಿಲ್ಲಾ ಮರಾಠ/ ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ದೇವಕಿ ಜಿ.ಆರ್. ನಾಯ್ಕ್, ಪ್ರಧಾನ ಕಾರ್ಯದರ್ಶಿ ಎ.ಎಂ. ನರಸಿಂಹ, ವಿರಾಜಪೇಟೆ ಸಂಘಟನಾ ಕಾರ್ಯದರ್ಶಿ ಎಂ.ಪಿ. ನವೀನ್, ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ. ದೇವಪ್ಪ, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್. ಯೋಗೇಂದ್ರ, ಎರಡನೇ ಮಣ್ಣಂಗೇರಿ ಉಪ ಸಮಿತಿ ಅಧ್ಯಕ್ಷ ಎಂ.ಎಸ್. ವೆಂಕಪ್ಪ, ಪ್ರಮುಖರಾದ ದೇವಿಪ್ರಸಾದ್, ದಿನೇಶ್ ಕುಂಡಾಡು, ನಾಗೇಶ್ ಕುಂಡಾಡು ಇದ್ದರು.ಕಾರ್ಯದರ್ಶಿ ಹೂವಮ್ಮ ವರದಿ ಮಂಡಿಸಿದರು. ಕಟ್ಟಡ ಸಮಿತಿ ಕಾರ್ಯದರ್ಶಿ ಎಂಎಸ್. ಯೋಜೆಮ್ದ್ರ ಮಹಾಸಭೆಯ ಖರ್ಚುವೆಚ್ಚ ಮಂಡಿಸಿದರು. ಕಾರ್ಯದರ್ಶಿ ಎ. ಹೂವಮ್ಮ ಸ್ವಾಗತಿಸಿದರು.
ಜಿಲ್ಲಾಧ್ಯಕ್ಷ ಪರಮೇಶ್ವರ್: ಸಂಘದ ನೂತನ ಅಧ್ಯಕ್ಷರಾಗಿ ಸತತ 8ನೇ ಬಾರಿಗೆ ಎಂ.ಎಂ. ಪರಮೇಶ್ವರ ಅವರು ಆಯ್ಕೆಯಾದರು. ಉಪಾಧ್ಯಕ್ಷಾರಗಿ ದೇವಕ್ಕಿ ಜಿ.ಆರ್. ನಾಯ್ಕ್ ಮತ್ತು ಪಿ.ಕೆ. ಗಂಗಾಧರ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎ.ಎಂ. ನರಸಿಂಹ, ಕಾರ್ಯದರ್ಶಿಯಾಗಿ ಎಂ.ಸಿ. ಹೂವಮ್ಮ, ಉಪ ಕಾರ್ಯದರ್ಶಿಯಾಗಿ ಎಂ.ಬಿ. ಪೂವಪ್ಪ ಮತ್ತು ಕೋಶಾಧಿಕಾರಿಯಾಗಿ ಎಂ.ಎಸ್. ಕಾಂತಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಐದು ತಾಲೂಕುಗಳಿಗೆ ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸಲಾಗಿದ್ದು, ಮಡಿಕೇರಿ-ಎಂ.ಟಿ. ದೇವಪ್ಪ, ಸೋಮವಾರಪೇಟೆ-ಸಂತೋಷ್ ಕುಮಾರ್, ಪೊನ್ನಂಪೇಟೆ-ದಿವ್ಯ ಕುಮಾರ್, ಕುಶಾಲನಗರ-ನೀಲಮ್ಮ ರವಿ ಮತ್ತು ವಿರಾಜಪೇಟೆ ಎಂ.ಪಿ. ನವೀನ್ ಆಯ್ಕೆಯಾಗಿದ್ದಾರೆ. ಸಮಿತಿಗೆ 11 ಸದಸ್ಯರು ಹಾಗೂ 5 ಉಪಸಮಿತಿಗಳ ಅಧ್ಯಕ್ಷರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.