ಒಟ್ಟು 9.60 ಲಕ್ಷ ಮತದಾರರಲ್ಲಿ 97 ಸಾವಿರ ಫಾರಂ ವಾಪಸ್ ಆಗಿಲ್ಲ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬರೋಬ್ಬರಿ 48 ಸಾವಿರಕ್ಕೂ ಅಧಿಕ ಮಂದಿ ಸ್ಥಳಾಂತರಗೊಂಡವರು ಹಾಗೂ ಮೃತಪಟ್ಟ 25 ಸಾವಿರಕ್ಕೂ ಅಧಿಕ ಮಂದಿ ಮತದಾರ ಪಟ್ಟಿಯಲ್ಲಿ ಇರುವುದು ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಪತ್ತೆಯಾಗಿದೆ. ಒಟ್ಟರೆ ಒಂದು ಲಕ್ಷಕ್ಕೂ ಅಧಿಕ ಮಂದಿ ಹೆಸರು ಮತದಾರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ,ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಳೆದ ಜೂ. 30 ರಿಂದ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಎನುಮ ರೇಶನ್ ಫಾರಂ ಹಂಚಿಕೆ ಮತ್ತು ಭರ್ತಿ ಮಾಡಿದ ಫಾರಂಗಳನ್ನು ಮತದಾರರಿಂದ ವಾಪಾಸ್ ಪಡೆದು ಡಿಜಿಟಲೀಕರಣ ಮಾಡುವ ಮೂಲಕ ಚುನಾವಣ ಆಯೋಗಕ್ಕೆ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ.
ಶನಿವಾರದೊಳಗೆ ಭರ್ತಿ ಮಾಡಿದ ಎನುಮರೇಶನ್ ಫಾರಂಗಳನ್ನು ಬಿಎಲ್‌ಒ ಗಳಿಗೆ ಸಲ್ಲಿಸಿದರೆ ಮಾತ್ರ ಮತದಾರ ಪಟ್ಟಿಯಲ್ಲಿ ಹೆಸರು ಉಳಿಯುವುದಕ್ಕೆ ಸಾಧ್ಯ. ಇಲ್ಲವಾದರೆ ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕುವ ಕಾರ್ಯ ಚುನಾವಣಾ ಆಯೋಗ ಮಾಡಲಿದೆ. ಈ ಮೂಲಕ ಒಟ್ಟು 1 ಲಕ್ಷ ಮತದಾರರು ಮತದಾರ ಪಟ್ಟಿಯಿಂದ ಹೊರ ಹೋಗುವ ಸಾಧ್ಯತೆ ಇವೆ
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 2025 ಮತದಾರ ಪಟ್ಟಿ ಪ್ರಕಾರ 9.60 ಲಕ್ಷ ಮತದಾರರಿದ್ದಾರೆ. ಈ ಪೈಕಿ ಈ ಗಾಗಲೇ ಎಲ್ಲರಿಗೂ ಎನುಮರೇಶನ್ ಫಾರಂ ವಿತರಣೆ ಮಾಡಲಾಗಿದೆ. ಈ ಪೈಕಿ ಶೇ.10.12 ರಷ್ಟು ಫಾರಂ ಭರ್ತಿ ಆಗಿಲ್ಲ. ಅಂದರೆ, 97,207 ಮಂದಿ ವಿವಿಧ ಕಾರಣದಿಂದ ಭರ್ತಿ ಮಾಡದಿರುವುದು ಕಂಡು ಬಂದಿದೆ. ಶೇ.89.84 ರಷ್ಟು ಡಿಜಿಟಲೀಕರಣ ಕಾರ್ಯವನ್ನು ಬಿಎಲ್‌ಒ ಪೂರ್ಣಗೊಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 48,627 ಮಂದಿ ಶಾಶ್ವತವಾಗಿ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಈ ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕ ಲಾಗುತ್ತದೆ. ಈ ಪೈಕಿ ಜಿಲ್ಲೆಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು 19,054 ಮಂದಿ ಇರುವುದು ಕಂಡು ಬಂದಿದೆ.
ಒಟ್ಟು 25,879 ಮಂದಿ ಮೃತಪಟ್ಟವರು ಹೆಸರು ಮತದಾರ ಪಟ್ಟಿಯಲ್ಲಿ ಇರುವುದು ಎಸ್‌ಐಆರ್ ಪ್ರಕ್ರಿಯೆ ಮೇಳೆ ಪತ್ತೆ ಯಾಗಿದೆ. ಈ ಪೈಕಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 6,938, ತರೀಕೆರೆ 6,216, ಕಡೂರು 5,609, ಶೃಂಗೇರಿ 3,137 ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 3,979 ಮಂದಿ ಮೃತಪಟ್ಟವರ ಹೆಸರು ಮತದಾರ ಪಟ್ಟಿಯಲ್ಲಿ ಇರುವುದು ಕಂಡು ಬಂದಿದೆ.
-- ಬಾಕ್ಸ್ ---
ಬಿಎಲ್‌ಓಗಳು ಈಗಾಗಲೇ ಮೃತಪಟ್ಟಿದ್ದಾರೆ, ಬೇರೆ ಸ್ಥಳಕ್ಕೆ ಸ್ಥಳಾಂತರ ಗೊಂಡಿದ್ದಾರೆ, ಬೇರೆ ಮತಕ್ಷೇತ್ರದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಮತ್ತು ಸಂಪರ್ಕ ಸಾಧ್ಯವಾಗಿಲ್ಲ ಎಂಬ ಮತದಾರರ ಹೆಸರುಗಳನ್ನು ಆಯಾ ವಿಧಾನಸಭಾ ಕ್ಷೇತ್ರವಾರು ಚಿಕ್ಕಮಗಳೂರು ಜಿಲ್ಲಾ ಚುನಾವಣಾಧಿಕಾರಿ ವೆಬ್‌ಸೈಟ್ ಹಾಗೂ ಮುಖ್ಯ ಚುನಾವಣಾಧಿಕಾರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪರಿಶೀಲನೆ ಮಾಡಿಕೊಂಡು ಶನಿವಾರದೊಳಗೆ ಎನುಮರೇಶ್ ಫಾರಂ ಭರ್ತಿ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾಹಿತಿ ನೀಡಿದ್ದಾರೆ.
--ಬಾಕ್ಸ್--ಹೊಸ 25 ಮತಗಟ್ಟೆ ಸ್ಥಾಪನೆ
ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ 1234 ಮತಗಟ್ಟೆಗಳಿವೆ. ಇದೀಗ ಎಸ್‌ಐಆರ್ ಪ್ರಕ್ರಿಯೆಯಡಿ 1200 ಮತದಾರ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆ ಇರುವ ಮತಗಟ್ಟೆಗಳನ್ನು ವಿಸ್ತರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸದಾಗಿ 22 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಜತೆಗೆ, ಸದ್ಯ ಇರುವ ಮತಗಟ್ಟೆ 2 ಕಿ.ಮೀಗಿಂತ ದೂರ ಇದ್ದರೆ ಅಂತಹ ಮತಗಟ್ಟೆಯ ಪೈಕಿ ಹೊಸದಾಗಿ 3 ಮತಗಟ್ಟೆ ಸೇರಿದಂತೆ ಹೊಸದಾಗಿ 25 ಮತಗಟ್ಟೆ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯೋಗದಕ್ಕೆ ಜಿಲ್ಲಾ ಚುನಾವಣಾಧಿಕಾರಿ ಭನ್ವಿರ್ ಸಿಂಗ್ ಮೀನಾ ಪ್ರಸ್ತಾವನೆ ಸಲ್ಲಿಸಿದ್ದಾರೆ.-- ಬಾಕ್ಸ್ ---
ಎಸ್‌ಐಆರ್‌ನಡಿ ಎನುಮರೇಶನ್ ಫಾರಂ (ಎಎಸ್‌ಡಿಡಿಒ)ವಿಧಾನಸಭಾ ಕ್ಷೇತ್ರಒಟ್ಟು ಮತದಾರರುಡಿಜಿಟಲಿಕರಣ ಫಾರಂ ಸಂಖ್ಯೆಎಎಸ್‌ಡಿಡಿಒ ಸಂಖ್ಯೆ
ಶೃಂಗೇರಿ16717115698810183ಮೂಡಿಗೆರೆ16729915337913920
ಚಿಕ್ಕಮಗಳೂರು22693419225934675ತರೀಕೆರೆ19208917219719890
ಕಡೂರು20674018784418539ಒಟ್ಟು9,602318,62,66797,207
-- ಬಾಕ್ಸ್ --1 ಲಕ್ಷಕ್ಕೂ ಅಧಿಕ ಮಂದಿ ಮತಪಟ್ಟಿಯಿದ ಔಟ್?ಜಿಲ್ಲೆಯಲ್ಲಿ ಒಟ್ಟು 9,60 ಲಕ್ಷ ಮತದಾರರಿದ್ದಾರೆ. ಈ ಪೈಕಿ ಇದೀಗ 25 ಸಾವಿರ ಅಧಿಕ ಮಂದಿ ಮೃತಪಟ್ಟರು, 48 ಸಾವಿರ ಶಾಶ್ವತ ಸ್ಥಳಾಂತರಗೊಂಡವರು, ತಲಾ 11 ಸಾವಿರ ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಹೆಸರು ಹೊಂದಿ ರುವವರು ಹಾಗೂ ನೀಡಿದ ವಿಳಾಸದಲ್ಲಿ ಪತ್ತೆಯಾಗದಿರುವವರು ಇದ್ದಾರೆ. ಇದರೊಂದಿಗೆ ಮ್ಯಾಪಿಂಗ್ ಆಗದ, ಸೂಕ್ತ ದಾಖಲೆ ಇಲ್ಲದ ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಹೆಸರು ಕರಡು ಪಟ್ಟಿಯಿಂದ ತೆಗೆದು ಹಾಕುವ ಸಾಧ್ಯತೆ ಇದೆ.