ಅಕ್ಷರ ಕಲಿಸಿದ ಗುರು, ಶಾಲೆ ಎರಡನ್ನು ಗೌರವಿಸಬೇಕು: ಬಿಡಿಎ ಉಮೇಶ್

KannadaprabhaNewsNetwork |  
Published : Jul 07, 2026, 02:00 AM IST
6ಕೆಎಂಎನ್ ಡಿ23 | Kannada Prabha

ಸಾರಾಂಶ

ಹಳೆ ವಿದ್ಯಾರ್ಥಿಗಳು ತಾವು ಜೀವನದಲ್ಲಿ ಇಂದು ಎತ್ತರ ಬೆಳೆದು ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರು ವಿದ್ಯೆ ಗುರು ನೀಡಿದ ಗುರುಗಳು ಕಾರಣ. ನಮಗೆ ಅಡಿಪಾಯ ಹಾಕಿದ ಶಾಲೆ ಹಾಗೂ ಶಿಕ್ಷಕರನ್ನು ಸದಾ ನೆನೆಯಬೇಕು.

ದೇವಲಾಪುರ:

ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲು ಅಕ್ಷರ ಎಂಬ ಮೌಲ್ಯವನ್ನು ನೀಡುವ ಗುರು ಮತ್ತು ಶಾಲೆ ಎರಡನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಬೆಂಗಳೂರು ಬಿಡಿಎ ಉಮೇಶ್ ತಿಳಿಸಿದರು.

ನಾಗಮಂಗಲ ತಾಲೂಕಿನ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2010-11ನೇ ಶೈಕ್ಷಣಿಕ ಸಾಲಿನ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಳೆ ವಿದ್ಯಾರ್ಥಿಗಳು ತಾವು ಜೀವನದಲ್ಲಿ ಇಂದು ಎತ್ತರ ಬೆಳೆದು ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರು ವಿದ್ಯೆ ಗುರು ನೀಡಿದ ಗುರುಗಳು ಕಾರಣ. ನಮಗೆ ಅಡಿಪಾಯ ಹಾಕಿದ ಶಾಲೆ ಹಾಗೂ ಶಿಕ್ಷಕರನ್ನು ಸದಾ ನೆನೆಯಬೇಕು ಎಂದರು.

ಮುಖ್ಯಶಿಕ್ಷಕ ಚಿಕ್ಕಬೋರಯ್ಯ ಮಾತನಾಡಿ, ಅಕ್ಷರ ಕಲಿಸುವ ಜೊತೆಗೆ ವಿದ್ಯಾರ್ಥಿಗಳ ನಡೆ-ನುಡಿಯನ್ನು ತಿದ್ದಿ ಜೀವನವನ್ನು ರೂಪಿಸಲು ಮಾರ್ಗದರ್ಶನ ಮಾಡಿದ ಅರಿವಿನ ಗುರುಗಳನ್ನು ವಿದ್ಯಾರ್ಥಿಗಳು ಎಷ್ಟೇ ದೂರವಿದ್ದರೂ ಬಾಲ್ಯದ ಅಮೂಲ್ಯ ಕ್ಷಣಗಳನ್ನು ನನೆದು ಮುಂದಿನ ಯುವ ಪೀಳಿಗೆ ನಮ್ಮಿಂದ ಆಗುವ ಸಹಾಯ ಮಾಡಬೇಕು ಎಂದರು.

ಇದೇ ವೇಳೆ ಗುರುಗಳಾದ ರಾಧಾಮಣಿ, ಚಿಕ್ಕಬೋರಯ್ಯ, ಎಚ್.ಟಿ.ಗಿರೀಶ್, ಮುದುಕಪ್ಪ, ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡರು.

ಸಮಾರಂಭದಲ್ಲಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ನಿವೃತ್ತ ಶಿಕ್ಷಕರಾದ ಕೆ.ಎನ್.ರಮೇಶ್, ಅಕ್ಷರ ದಾಸೋಹ ಮಂಜುನಾಥ್, ಶಿಕ್ಷಕರಾದ ಸಾಧಿಕ್ ಅಹಮದ್, ಮಂಜುನಾಥ್, ರಾಜಕುಮಾರ್, ಸುನೀತ, ಸಚಿನ್, ಮಂಜು ಉಪಸಿತರಿದ್ದರು. ಶಾಲೆ ಹಿರಿಯ ವಿದ್ಯಾರ್ಥಿಗಳಾದ ಚನ್ನಕೇಶವ, ವೇದಮೂರ್ತಿ, ಡಿ.ಜೆ.ರವಿ, ಆನಂದ, ಮಾನಸ, ರೇಖಾ, ಚೈತನ್ಯ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೆಸ್ಸೆಸ್‌ ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಪ್ರಿಯಾಂಕ್‌
ಬಂಟ್ವಾಳದ ಈ ಶಾಲೇಲಿ ಮಕ್ಕಳ ಸುರಕ್ಷತೆಗೆ ಆರ್‌ಎಫ್‌ಐಡಿ ಟ್ಯಾಗ್‌!