ಸಂಘ ಸಂಸ್ಥೆಗಳು ಅಂಗವಿಕಲರಿಗೆ ನೆರವು ನೀಡಲಿ: ಕೆ.ಜಿ. ಮೋಹನ್

KannadaprabhaNewsNetwork |  
Published : Jul 28, 2025, 12:33 AM IST
ರಾಣಿಬೆನ್ನೂರಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ವತಿಯಿಂದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸಂಸ್ಥೆಯ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ರಾಣಿಬೆನ್ನೂರು: ಸಂಘ- ಸಂಸ್ಥೆಗಳು ಅಂಗವಿಕಲರಿಗೆ ನೆರವಿನಹಸ್ತ ಚಾಚುವ ಮೂಲಕ ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬಾಳಲು ಅವಕಾಶ ಕಲ್ಪಿಸಬೇಕು ಎಂದು ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ಧರ್ಮದರ್ಶಿ ಕೆ.ಜಿ. ಮೋಹನ್ ತಿಳಿಸಿದರು.ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸಂಸ್ಥೆಯ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಗವಿಕಲರಲ್ಲಿ ವಿಶೇಷ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಸಂಸ್ಥೆ ವತಿಯಿಂದ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರದ ಸಂಸ್ಥೆ ಸಂಸ್ಥೆಗಳು ಕೈಜೋಡಿಸಿ ಸಹಕಾರ ನೀಡುತ್ತಾ ಬಂದಿರುವುದು ಈ ಸಂಸ್ಥೆ ಬೆಳವಣಿಗೆ ಸಾಕ್ಷಿಯಾಗಿದೆ ಎಂದರು.ತಾಪಂ ಅಧಿಕಾರಿ ಚನ್ನಬಸಪ್ಪ ಅಡಿವೇರ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ. 70ರಷ್ಟು ಅಧಿಕ ಅಂಕಗಳನ್ನು ಪಡೆದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ರೋಟರಿ ಮತ್ತು ಇನ್ನರ್‌ವೀಲ್ ಕ್ಲಬ್‌ಗಳ ವತಿಯಿಂದ ನೀಡಲಾದ ಬ್ಯಾಗುಗಳನ್ನು ವಿತರಿಸಲಾಯಿತು.

ಪವನಕುಮಾರ ಮಲ್ಲಾಡದ, ಪ್ರಾ. ಪ್ರಕಾಶ ಗಂಗಾನಗರ, ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಜೆ. ಹಿರೇಮಠ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಡಾ. ದೀಪಾಲಿ ಪುನೀತ, ವರದರಾಜು, ಜಿ.ಜಿ. ಹೊಟ್ಟೇಗೌಡ್ರ, ಸುಧೀರ ಕುರುವತ್ತಿ, ವಸಂತಾ ಹುಲ್ಲತ್ತಿ, ಸಂಜನಾ ಕುರುವತ್ತಿ, ಪರಮೇಶಪ್ಪ ಮುದಿಗೌಡರ, ಸುಮಾ ಹೊಟ್ಟಿಗೌಡ್ರ ಸೇರಿದಂತೆ ಮತ್ತಿತರು ಇದ್ದರು. ವಾರ್ಷಿಕೋತ್ಸವದ ಅಂಗವಾಗಿ ಅಂಧ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ

ಶಿಗ್ಗಾಂವಿ: ಹಾವೇರಿಯ ಸರ್ಕಾರಿ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಶಿಕ್ಷಣ ಇಲಾಖೆಯ ಅಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಘಟಕದಿಂದ ರಾಜ್ಯ ಬುಲ್‌ ಬುಲ್‌ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು.ಸಮಾರಂಭದಲ್ಲಿ ಶಿಗ್ಗಾಂವಿಯ ನಂ. ೧ ಕನ್ನಡ ಶಾಲೆಯ ವಿದ್ಯಾರ್ಥಿಗಳಾದ ನವನೀತಾ ಕಲಾಲ, ಬಿಂದುಶ್ರೀ ಮಡಿವಾಳರ, ನಯನಾ ಬಂಡಿವಡ್ಡರ, ರೇಣುಕಾ ಆಯಗಾರ, ಗೌರಿ ವಾಲ್ಮೀಕಿ, ಧರಣಿ ವಾಲ್ಮೀಕಿ, ಆರುಶೀ ಬೆಲಮಾಕರ್, ಶ್ರೀದೇವಿ ಹೂವಣ್ಣವರ, ಖುಷಿ ಹಿರೇಗಪ್ಪನವರ, ಶ್ರೀರಕ್ಷಾ ಬಡಿಗೇರ ಅವರಿಗೆ ಬುಲ್ ಬುಲ್ ರಾಜ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಮುಖ್ಯೋಪಾಧ್ಯಾಯ ಮತ್ತು ಶಿಕ್ಷಕರು ಸೇರಿದಂತೆ ಶಾಲಾ ಸುಧಾರಣಾ ಸಮಿತಿಯ ಸದಸ್ಯರು, ಸಿಬ್ಬಂದಿ ಅಭಿನಂದಿಸಿದರು.

PREV

Recommended Stories

ಮಾಲೇಗಾಂವ ಸ್ಫೋಟ ತೀರ್ಪು; ಸಂಭ್ರಮಾಚರಣೆ
ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಷಡ್ಯಂತ್ರ: ಪ್ರಮೋದ ಮುತಾಲಿಕ