ಮಾ.1ಕ್ಕೆ ಪಾದಯಾತ್ರೆ ಬೀಳ್ಕೊಡುಗೆ ಸಮಾರಂಭ: ಅಥಣಿ ವೀರಣ್ಣ

KannadaprabhaNewsNetwork | Published : Feb 24, 2024 2:31 AM

ಸಾರಾಂಶ

ಹೆಬ್ಬಾಳ್ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಕೊಟ್ಟೂರಿನ ಶ್ರೀ ಶಂಕರ ಸ್ವಾಮೀಜಿ, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಥಣಿ ವೀರಣ್ಣ ಅಧ್ಯಕ್ಷತೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಜ್ಯೋತಿ ಬೆಳಗಿ ಪಾದಯಾತ್ರಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡುವರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಳ್ಳಾರಿ ಜಿಲ್ಲೆ ಕೊಟ್ಟೂರು ಶ್ರೀಕ್ಷೇತ್ರದಲ್ಲಿ ಮಾ.4ರಂದು ನಡೆಯುವ ಶ್ರೀ ಗುರು ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ನಗರದಿಂದ ತೆರಳುವ ಪಾದಯಾತ್ರಿಗಳಿಗೆ 45ನೇ ವರ್ಷದ ಸಮಗ್ರ ಪಾದಯಾತ್ರೆ ಬೀಳ್ಕೊಡುಗೆ ಸಮಾರಂಭ ಕೊಟ್ಟೂರು ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ನಿಂದ ಮಾ.1ರಂದು ನಗರದ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ಅಥಣಿ ಎಸ್.ವೀರಣ್ಣ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 6ಕ್ಕೆ ಹೆಬ್ಬಾಳ್ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಕೊಟ್ಟೂರಿನ ಶ್ರೀ ಶಂಕರ ಸ್ವಾಮೀಜಿ, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಥಣಿ ವೀರಣ್ಣ ಅಧ್ಯಕ್ಷತೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಜ್ಯೋತಿ ಬೆಳಗಿ ಪಾದಯಾತ್ರಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡುವರು ಎಂದರು.

ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಇಎನ್‌ಟಿ ತಜ್ಞ ಡಾ.ಶಿವಕುಮಾರ ಎಂ.ಅಂದನೂರು, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಾ.2ರ ಸಂಜೆ 5ಕ್ಕೆ 26ನೇ ವರ್ಷದ ಔಷಧೋಪಚಾರ ಸೇವೆಯ ಸಮಾರೋಪ ಹರಪನಹಳ್ಳಿ ತಾಲೂಕು ಅರಸೀಕೆರೆ ಗ್ರಾಮದ ಶ್ರೀ ಗುರು ಕೋಲಶಾಂತೇಶ್ವರ ವಿರಕ್ತ ಮಠದಲ್ಲಿ ಶ್ರೀ ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ, ನಂದೀಪುರದ ಡಾ.ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಅಥಣಿ ವೀರಣ್ಣ ಅಧ್ಯಕ್ಷತೆ ವಹಿಸುವರು. ಜಿ.ಪಿ.ರವಿಪ್ರಸಾದ, ಡಾ.ಜಿ.ಡಿ.ರಾಘವನ್‌, ಡಾ.ಜಿ.ಸಿ.ಬಸವರಾಜ, ಉಮಾಕಾಂತ ಆರ್‌.ಪಾಟೀಲ್‌, ಸಿ.ಎಚ್‌.ಗಿರೀಶ ಮತ್ತಿತರರು ಭಾಗವಹಿಸುವರು ಎಂದು ಹೇಳಿದರು.

ಪಾದಯಾತ್ರೆ ಟ್ರಸ್ಟ್‌ನ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ಮಾತನಾಡಿ, ಇಲ್ಲಿನ ಚೌಕಿಪೇಟೆಯಿಂದ ಪಾದಯಾತ್ರೆ ಶುರುವಾಗಲಿದ್ದು, ಬಿ.ಕಲ್ಪನಹಳ್ಳಿ, ಬಿ.ಚಿತ್ತಾನಹಳ್ಳಿ, ಅಮೃತ ನಗರ, ಮಾಗಾನಹಳ್ಳಿ ಕೋಡಿ ಕ್ಯಾಂಪ್‌, ಹರಪನಹಳ್ಳಿ ತಾಲೂಕು ಜಂಬುಲಿಂಗನಹಳ್ಳಿ, ಸತ್ತೂರು, ಕಂಚಿಕೆರೆ, ಕ್ಯಾರಕಟ್ಟೆ ಕಾವಲಹಳ್ಳಿ ಕ್ರಾಸ್‌, ತೌಡೂರು, ಅರಸೀಕೆರೆ ಕಡಬಗೆರೆ, ಸಾಸ್ವಿಹಳ್ಳಿ, ಮತ್ತಿಹಳ್ಳಿ, ಕನ್ನಕಟ್ಟೆ, ಅಯ್ಯನಹಳ್ಳಿ ಮಾರ್ಗವಾಗಿ ಶ್ರೀಕ್ಷೇತ್ರ ಕೊಟ್ಟೂರನ್ನು ಪಾದಯಾತ್ರಿಗಳು ತಲುಪುವರು. ಮಾರ್ಗದುದ್ದಕ್ಕೂ ಭಕ್ತಾದಿಗಳು, ದಾನಿಗಳು ಪಾದಯಾತ್ರಿಗಳಿಗೆ ಆಹಾರ ವ್ಯವಸ್ಥೆ ಮಾಡಿರುತ್ತಾರೆ. ಉಳಿದ ಪ್ರಸಾದ ದಾರಿಯಲ್ಲಿ ಚೆಲ್ಲಬಾರದು. ಮಾರ್ಗದಲ್ಲಿ ಕರ್ಪೂರ ಹಚ್ಚಬಾರದು ಎಂದು ಮನವಿ ಮಾಡಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಆರ್.ಜಿ.ದತ್ತರಾಜ, ಖಜಾಂಚಿ ಮಲ್ಲಾಬಾದಿ ಗುರು ಬಸವರಾಜ, ಸಹ ಕಾರ್ಯದರ್ಶಿ ಬಿ.ಚಿದಾನಂದ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಬೂಸ್ನೂರು ಸುಜಾತಮ್ಮ, ವಿನುತಾ ರವಿ ಇತರರಿದ್ದರು.

.......

Share this article