ವೀರ ಸಾಗರ ಮುನಿ ಮಾಹಿತಿ । ಮುನಿಸುವ್ರತ ಮೂರ್ತಿಯ ಪ್ರತಿಷ್ಠಾಪನೆ ನಿಮಿತ್ತ ಕಾರ್ಯಕ್ರಮ । 2-4 ಸಾವಿರ ಭಕ್ತರ ಆಗಮನ ಸಾಧ್ಯತೆ
ಪ್ರಸಕ್ತ ವರ್ಷದ ನ.೨೯ ರಿಂದ ಡಿ.೪ರ ವರೆಗೆ ೩೧ ಅಡಿ ಎತ್ತರದ ಭಗವಾನ್ ಶ್ರೀ ೧೦೦೮ ಮುನಿಸುವ್ರತ ತೀರ್ಥಂಕರ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಬೃಹತ್ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಜರಗಲಿದೆ ಎಂದು ವೀರ ಸಾಗರ ಮುನಿ ಮಹಾರಾಜರು ಹೇಳಿದರು.
ಹಳೆಬೀಡು ಸಮೀಪ ಶಿವಪುರ ಕಾವಲಿನ ಜೈನ ಗುತ್ತಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.ಈ ಹಿಂದೆ ಸುಮಾರು ೩೧ ಅಡಿ ಎತ್ತರದ ಶ್ರೀ ೧೦೦೮ ಶೀಥಲನಾಥ ತೀರ್ಥಂಕರರ ಜಿನ ಮೂರ್ತಿಯ ಪ್ರತಿಷ್ಠಾಪನೆಯನ್ನು ವಿವಿಧ ಪೂಜಾ ಕೈಂಕರ್ಯಗಳ ಮೂಲಕ ಅದ್ಧೂರಿಯಾಗಿ ನೆರವೇರಿಸಲಾಗಿತ್ತು. ಇದು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ಶೀಥಲನಾಥ ತೀರ್ಥಂಕರ ಮೂರ್ತಿಯಾಗಿದ್ದು ನೂರಾರು ಭಕ್ತರು ಹರ್ಷ ಘೋಷದೊಂದಿಗೆ ಸಂಭ್ರಮಪಟ್ಟಿದ್ದರು. ಆ ಎರಡು ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಬೃಹತ್ ಪಂಚಕಲ್ಯಾಣ ಪ್ರತಿಷ್ಠ ಮಹೋತ್ಸವವನ್ನು ವೈಭವದಿಂದ ನಡೆಯಲಿದೆ ಎಂದು ತಿಳಿಸಿದರು.
ಪಂಚಕಲ್ಯಾಣ ಮಹೋತ್ಸವಕ್ಕೆ ಜೈನ ಧರ್ಮಧ ತ್ರಯಾಚಾರ್ಯರಾದ ೧೦೮ ಆಚಾರ್ಯ ವಿಶುದ್ದ ಸಾಗರ ಮಹಾರಾಜರು, ಶ್ರೀ ೧೦೮ ಕುಲರತ್ನ ಭೂಷಣ ಮುನಿ ಮಹಾರಾಜರು, ಶ್ರೀ ೧೦೮ ಚಂದ್ರುಫ್ರಭು ಮುನಿ ಸಾಗರ್, ಜಿನ ಧರ್ಮ ಪ್ರಭಾವಕ ಯುವ ಸಂತ ಮುನಿ ಸಾಗರ್ ಮಹಾರಾಜರ ಸಾನಿಧ್ಯದಲ್ಲಿ ಪಂಚ ಕಲ್ಯಾಣ ಮಹೋತ್ಸವ ನಡೆಯಲಿದ್ದು ಅದರ ಜತೆಗೆ ರಾಜಕೀಯದ ಮುಖಂಡರು, ಸಾಹಿತಿಗಳು, ಸಮಾಜ ಸೇವಕರಿಗೆ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ೪೦ ಹೆಚ್ಚು ದಿಗಂಬರ ಜೈನ ಮುನಿಗಳು ಧಾರ್ಮಿಕ ಕಾರ್ಯಕ್ರಮಗಳು ಭಾಗವಹಿಸಲಿದ್ದಾರೆ. ಈ ಶ್ರವಣಬೆಳಗೂಳ ನೆಡೆದ ಕಾರ್ಯಕ್ರಮವನ್ನು ಬಿಟ್ಟರೆ ಈ ಕ್ಷೇತ್ರದಲ್ಲಿ ಹೆಚ್ಚು ಜೈನ ಮುನಿಗಳು ಬರಲಿದ್ದಾರೆ. ಇದು ದಕ್ಷಿಣಾ ಭಾರತದ ವಿಶೇಷ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಜಿನ ಧರ್ಮ ಪ್ರಭಾವಕ ಯುವ ಸಂತ ವೀರ ಸಾಗರ ಮುನಿ ಮಹಾರಾಜ್. ಜೈನರ ಗುತ್ತಿ ಪಂಚಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಕುಣಿಗಲ್ ಬ್ರಹ್ಮದೇವಯ್ಯ. ಕೋಶಾಧ್ಯಕ್ಷ ಜಯೇಂದ್ರ ಕುಮಾರ್, ಸಹ ಕಾರ್ಯದರ್ಶಿಗಳಾದ ಬ್ರಹ್ಮೇಶ್, ನಾಗೇಂದ್ರ ಪ್ರಸಾದ್, ಆಹಾರ ಸಮಿತಿ ಸಂಚಾಲಕ ಧಾವನ್ ಜೈನ್, ತಾಲೂಕು ಸಮಿತಿ ಸಂಚಾಲಕರಾದ ಎಸ್.ಎನ್.ಅಶೋಕ್ ಕುಮಾರ್. ಎಚ್.ಎಸ್.ಅನಿಲ್ ಕುಮಾರ್, ತಾ.ಪ್ರ.ಸಂಘ ಅದ್ಯಕ್ಷೆ ಭಾರತಿಗೌಡ, ಮೊದಲಾದವರು ಹಾಜರಿದ್ದರು.