ಪಾಪೆಮಜಲು: ಆರೋಗ್ಯ, ದಂತ ತಪಾಸಣೆ ಉಚಿತ ಶಿಬಿರ

KannadaprabhaNewsNetwork |  
Published : Jun 24, 2024, 01:37 AM IST
ಫೋಟೋ: ೨೨ಪಿಟಿಆರ್-ಶಿಬಿರಅರಿಯಡ್ಕ ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ ನಡೆಯಿತು. | Kannada Prabha

ಸಾರಾಂಶ

ಇಸಿಜಿ ಪರೀಕ್ಷೆ, ಮಧುಮೇಹ ತಪಾಸಣೆ, ಸ್ತ್ರೀರೋಗ ಪರೀಕ್ಷೆಗಳು, ಕಣ್ಣಿನ ತಪಾಸಣೆ, ಚರ್ಮರೋಗ ಸಮಾಲೋಚನೆಗಳು ಮತ್ತು ಮಕ್ಕಳ ತಪಾಸಣೆ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಅರಿಯಡ್ಕ ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಎ.ಜೆ. ಶೆಟ್ಟಿ

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಶನಿವಾರ ಪಾಪೆಮಜಲು ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರವನ್ನು ನಡೆಸಲಾಯಿತು.

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನ್ ಎಲ್ .ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಎ.ಜೆ. ಶೆಟ್ಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರು ಇದರ ಎಂಡಿಎಸ್ ವಿಭಾಗದ ಪ್ರಾಧ್ಯಾಪಕ ಡಾ. ಸತ್ಯಪ್ರಿಯ

ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್, ಅರಿಯಡ್ಕ ಗ್ರಾ.ಪಂ.ಅಧ್ಯಕ್ಷ ಸಂತೋಷ್, ಮಣಿಯಾಣಿ ಕುಟ್ಯಾಡಿ, ಕೋಟಿ ಚೆನ್ನಯ ಯೂತ್ ಕ್ಲಬ್ ಅಧ್ಯಕ್ಷ ಜಗದೀಶ್ ಬಿ, ಸಚಿನ್ ಪಾಪೆಮಜಲು, ಅಕ್ಷಯ ರಜಪೂತ್, ಗ್ರಾ.ಪಂ. ಸದಸ್ಯ ಅಮ್ಮಣ್ಣ ರೈ ಡಿ., ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣ, ಸಹಾಯಕ ಪ್ರಾಧ್ಯಾಪಕಿ ಪ್ರತಿಭಾ ಹಾಗೂ ಶೀತಲ್ ಕುಮಾರ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಜಯಲತಾ ಉಪಸ್ಥಿತರಿದ್ದರು.

ಶಿಬಿರದಲ್ಲಿ ದಂತ ತಪಾಸಣೆ, ಸಾಮಾನ್ಯ ಔಷಧ ಸಮಾಲೋಚನೆ, ಗಂಟಲು, ಕಿವಿ ಮತ್ತು ಮೂಗು (ಇಎನ್‌ಟಿ) ತಪಾಸಣೆ, ಇಸಿಜಿ ಪರೀಕ್ಷೆ, ಮಧುಮೇಹ ತಪಾಸಣೆ, ಸ್ತ್ರೀರೋಗ ಪರೀಕ್ಷೆಗಳು, ಕಣ್ಣಿನ ತಪಾಸಣೆ, ಚರ್ಮರೋಗ ಸಮಾಲೋಚನೆಗಳು ಮತ್ತು ಮಕ್ಕಳ ತಪಾಸಣೆ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲಾಯಿತು.

ವಿದ್ಯಾರ್ಥಿಗಳಾದ ಶಿವ ಕಾರ್ತಿಕ್ ಸ್ವಾಗತಿಸಿದರು. ರಾಚೆಲ್ ಸಿಲ್ವೆಸ್ಟರ್ ವಂದಿಸಿದರು. ಅಶ್ವಿನಿ ರೈ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ