ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಯುವಜನರಲ್ಲಿ ನಾಯಕತ್ವ, ಸೃಜನಶೀಲತೆ, ನವೀನತೆ ಹಾಗೂ ರಾಷ್ಟ್ರ ನಿರ್ಮಾಣದತ್ತ ಜವಾಬ್ದಾರಿಯ ಪ್ರಜ್ಞೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಕಸಿತ ಭಾರತ ಯುವ ನಾಯಕತ್ವ 2027 ಆಯೋಜಿಸಲಾಗುತ್ತಿದೆ. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈ ಭಾರತ್ ಈ ಕಾರ್ಯಕ್ರಮದ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂವಾದದ ಮೂಲಕ ಯುವಜನರು ವಿಕಸಿತ ಭಾರತ @2047 ಎಂಬ ರಾಷ್ಟ್ರದ ಗುರಿಯತ್ತ ತಮ್ಮ ಆಲೋಚನೆಗಳು ಹಾಗೂ ಕೊಡುಗೆಗಳನ್ನು ಪ್ರಸ್ತುತಪಡಿಸಲು ವೇದಿಕೆ ಸಿಗಲಿದೆ. ಆಸಕ್ತ 15ರಿಂದ 29 ವರ್ಷ ವಯಸ್ಸಿನ ಯುವಕ-ಯುವತಿಯರು ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಲು ಮೈ ಭಾರತ್ ಪೋರ್ಟಲ್ https://mybharat.gov.in/ ನಲ್ಲಿ ನೋಂದಾಯಿಸಿಕೊಳ್ಳಬೇಕು. ಕ್ವಿಜ್ ಸ್ಪರ್ಧೆ ಸೆ.30ವರೆಗೆ ನಡೆಯಲಿದ್ದು ಆನ್ಲೈನ್ ಮೂಲಕವೇ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.
ರಸಪ್ರಶ್ನೆಯ ನಂತರ ಆಯ್ಕೆಯಾಗುವವರು 500 ಪದಗಳ ವಿಕಸಿತ ಭಾರತ್ ಈಸಿ ಚಾಲೆಂಜವವಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಜಿಲ್ಲೆಯಿಂದ ಅತ್ಯುತ್ತಮ 50 ಪ್ರಬಂಧಗಳನ್ನು ಡಿಸ್ಟಿಕ್ ಚಾಂಪಿಯನಶಿಪ್ ಪಿಪಿಟಿ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯ ಇಬ್ಬರು ಸ್ಪರ್ಧಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರೀಯ ಹಂತದಲ್ಲಿ ಆಯ್ಕೆಯಾಗುವವರು ನವದೆಹಲಿಯಲ್ಲಿ ತಜ್ಞರು, ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಸಚಿವರ ಸಮ್ಮುಖದಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಪ್ರಾದೇಶಿಕ ಅಂತಿಮ ಸುತ್ತಿಗೆ ಆಯ್ಕೆಯಾಗುವ ಸ್ಪರ್ಧಿಗಳು ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ತಮ್ಮ ಆಲೋಚನೆ ಮಂಡಿಸುವ ಅವಕಾಶವನ್ನು ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 7903994692 ಸಂಪರ್ಕಿಸಬಹುದು. ಜಿಲ್ಲೆಯ ಎಲ್ಲಾ ಕಾಲೇಜು, ವಿವಿಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅರ್ಹ ಯುವಜನರು ವಿಕಸಿತ ಭಾರತ್ ಕ್ವಿಜ್ ನಲ್ಲಿ ಭಾಗವಹಿಸಬಹುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಅಶೋಕ್ ಕುಮಾರ್, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.