ಧರ್ಮಾಧಿಕಾರಿ ಡಾ. ಹೆಗ್ಗಡೆ ಅಧ್ಯಕ್ಷತೆ । ಸಾಮಾಜಿಕ, ಧಾರ್ಮಿಕ ಪ್ರಮುಖರು ಭಾಗಿ
ಈ ಸಮಾಲೋಚನಾ ಸಭೆಯಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಂಸದರು, ಶಾಸಕರು, ಧಾರ್ಮಿಕ ಮುಖಂಡರು, ಸಂಘಸಂಸ್ಥೆಗಳ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.ನ.14ರಂದು ಧಾನ್ಯ ಮುಹೂರ್ತ:
ಈಗಾಗಲೇ ಪರ್ಯಾಯೋತ್ಸವಕ್ಕೆ ಸಿದ್ಧತೆಯಾಗಿ, ಮುಂದಿನ 2 ವರ್ಷಗಳ ಅನ್ನಸಂತರ್ಪಣೆಗೆ ಪೂರಕವಾಗಿ ಸಂಪ್ರದಾಯದಂತೆ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮಹೂರ್ತಗಳು ನಡೆದಿದ್ದು, ನಾಲ್ಕನೇಯದಾಗಿ ಧಾನ್ಯ ಮುಹೂರ್ತವು ನ.14ರಂದು ನಡೆಯಲಿದೆ ಎಂದು ಶ್ರೀ ಮಠದ ದಿವಾನ ಉದಯಕುಮಾರ್ ಸರಳತ್ತಾಯರು ತಿಳಿಸಿದರು.ಜ.9ರಂದು ಶ್ರೀಗಳ ಪುರಪ್ರವೇಶ:ಪ್ರಸ್ತುತ ಪರ್ಯಾಯಪೂರ್ವ ದೇಶದ ಪುಣ್ಯ ಕ್ಷೇತ್ರಗಳ ಸಂದರ್ಶನದಲ್ಲಿ ನಿರತರಾಗಿರುವ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಡಿ. 9ರಂದು ಉಡುಪಿ ಪುರಪ್ರವೇಶ ಮಾಡಲಿದ್ದಾರೆ. ಅವರನ್ನು ಕಡಿಯಾಳಿಯಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಕರೆ ತರಲಾಗುವುದು. ನಂತರ ಉಡುಪಿ ಜನರ ಪರವಾಗಿ ಪೌರ ಸನ್ಮಾನ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.ಜ.10ರಿಂದ ಹೊರೆ ಕಾಣಿಕೆ:
ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥರು ತಮ್ಮ ಪರ್ಯಾಯೋತ್ಸವವನ್ನು ಪ್ರತಿಭಾರಿ ವಿಭಿನ್ನವಾಗಿ ನಡೆಸುತ್ತಿದ್ದರು. ಅವರ ಆಶಯದಂತೆಯೇ ಈ ಬಾರಿಯ ಪರ್ಯಾಯವೂ ವೈವಿಧ್ಯಮಯವಾಗಲಿದೆ. ಜ.18ರಿಂದ 29ರ ವರೆಗೆ 10 ದಿನಗಳ ಪರ್ಯಾಯ ದರ್ಬಾರ್ ನಡೆಯಲಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಅನೇಕ ಮಂತ್ರಿಗಳು ಭಾಗವಹಿಸಲಿದ್ದಾರೆ. ದೇಶವಿದೇಶಗಳ ಕಲಾತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ ಎಂದು ಯಶ್ಪಾಲ್ ಸುವರ್ಣ ತಿಳಿಸಿದರು.