ಬಡ್ಡಿರಹಿತ ಸಾಲವನ್ನು ಸರಿಯಾಗಿ ಮರುಪಾವತಿಸಿ-ಹಿರೇಮಠ

KannadaprabhaNewsNetwork |  
Published : Mar 29, 2026, 02:15 AM IST
ತಾಲೂಕಿನ ಕುನ್ನೂರ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿತು. | Kannada Prabha

ಸಾರಾಂಶ

ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪಡೆದ ಬಡ್ಡಿ ರಹಿತ ಸಾಲವನ್ನು ವೇಳೆಗೆ ಸರಿಯಾಗಿ ಮರುಪಾವತಿಯನ್ನು ಮಾಡಿ ಉಳಿದ ರೈತರಿಗೂ ಅಲ್ಲದೆ ರಸಾಯನಿಕ ಗೊಬ್ಬರವನ್ನು ಹಾಗೂ ಇನ್ನೂ ಹಲವಾರು ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸದಸ್ಯ ಬಿ.ಎಸ್. ಹಿರೇಮಠ ಹೇಳಿದರು.

ಶಿಗ್ಗಾಂವಿ: ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪಡೆದ ಬಡ್ಡಿ ರಹಿತ ಸಾಲವನ್ನು ವೇಳೆಗೆ ಸರಿಯಾಗಿ ಮರುಪಾವತಿಯನ್ನು ಮಾಡಿ ಉಳಿದ ರೈತರಿಗೂ ಅಲ್ಲದೆ ರಸಾಯನಿಕ ಗೊಬ್ಬರವನ್ನು ಹಾಗೂ ಇನ್ನೂ ಹಲವಾರು ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸದಸ್ಯ ಬಿ.ಎಸ್. ಹಿರೇಮಠ ಹೇಳಿದರು.ತಾಲೂಕಿನ ಕುನ್ನೂರ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘಕ್ಕೆ ಹಲವಾರು ಯೋಜನೆಗಳು ಬರುತ್ತಿದ್ದು, ಅವುಗಳನ್ನು ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುನ್ನೂರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ¯ವನಗೌಡ್ರ ಆರ್. ಪಾಟೀಲ ಮಾತನಾಡಿ, ಹಿಂದಿನಿಂದ ಹಲವಾರು ಅಭಿವೃದ್ಧಿ ಕೆಲಸವನ್ನು ಸಂಘಕ್ಕೆ ಮಾಡುತ್ತಾ ಬಂದಿದ್ದು, ಇನ್ನೂ ಹಲವಾರು ಕೆಲಸಗಳು ಮಾಡುವುದಿದ್ದು, ಅವುಗಳನ್ನು ಸಮರ್ಪಕವಾಗಿ ಎಲ್ಲಾ ಪದಾಧಿಕಾರಿಗಳು ಕಾರ್ಯನಿರ್ವಹಿಸುತ್ತೇವೆ. ಸಮಯಕ್ಕೆ ಸರಿಯಾಗಿ ರಸಾಯನಿಕ ಗೊಬ್ಬರವನ್ನು ಪೂರೈಸುವ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ¯ವನಗೌಡ್ರ ಆರ್. ಪಾಟೀಲ, ಉಪಾಧ್ಯಕ್ಷರಾಗಿ ಹನುಮಂತಪ್ಪ ಲಮಾಣಿ, ನಿರ್ದೇಶಕರಾಗಿ ಬಿ.ಎಸ್. ಹಿರೇಮಠ, ಈರಪ್ಪ ಸೋಗಲಿ, ಧರ್ಮಪ್ಪ ಕಿವಡನವರ, ನಿಂಗಪ್ಪ ಛಬ್ಬಿ, ಬಸಪ್ಪ ಬಾರ್ಕಿ, ಇಮಾಮಹುಸೇನ ಕುರಟ್ಟಿ, ಶಿವಪ್ಪ ಕೊಟಗಾರ, ವೀರಭದ್ರಪ್ಪ ಕರೆಪ್ಪನವರ, ಬಸವಣ್ಣೆವ್ವ ಪಾಟೀಲ, ಕಮಲವ್ವ ಅಕ್ಕಿ ಇದ್ದರು. ಹಿಂದಿನ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಸಿದ್ದಪ್ಪ ಹದ್ಲಿ, ಮಾಬೂಸಾಬ ಜಿಗಳೂರ, ಬಿ.ಎಂ.ಪಾಟೀಲ , ಬಸವ್ವ ಪೂಜಾರ, ಮಮ್ಮದಸಾಬ ಮುಲ್ಲಾ , ಅಲ್ಲಿಸಾಬ, ಮಹಾದೇವಪ್ಪ ಬೂದಿಹಾಳ ಸೇರಿದಂತೆ ಹಲವರು ಇದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಾ ಸಂಘದ ಅಧ್ಯಕ್ಷ ನಾಗರಾಜ ನಡಗೇರಿ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.ಗ್ರಾಮದ ಗ್ರಾಪಂ ಮಾಜಿ ಸದಸ್ಯ ಬಸನಗೌಡ ಬ್ಯಾಹಟ್ಟಿ, ವರ್ಧಮಾನ ಶೆಟ್ಟೆಪ್ಪನವರ, ರಾಮಪ್ಪ ಮತ್ತಿಗಟ್ಟಿ, ಕಿರಣ ಕೆರಪ್ಪನವರ, ನಿರಂಜನಗೌಡ ಪಾಟೀಲ ಸೇರಿದಂತೆ ಹಲವಾರು ಮುಖಂಡರುಗಳು ಪಾಲ್ಗೊಂಡಿದ್ದರು.ಸಂಘದ ಕಾರ್ಯನಿರ್ವಾಹಕ ಬಿ.ಎನ್. ಪಾಟೀಲ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ಬೆಂಡಿಗೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ನೌಕರರ ಆರೋಗ್ಯ ಆಡಳಿತದ ಅಡಿಪಾಯ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ಮೇ 9,10ರಂದು ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ: ಶ್ರೀನಿವಾಸ ಕಂಟ್ಲಿ