ತಂದೆ- ತಾಯಿ, ಸಮಾಜ, ದೇಶದ ಋಣ ತೀರಿಸಿ: ಪ್ರೊ. ಆರ್.ಎಲ್. ಪೊಲೀಸಪಾಟೀಲ

KannadaprabhaNewsNetwork |  
Published : Dec 02, 2025, 02:45 AM IST
ಕಾರ್ಯಕ್ರಮವನ್ನು ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರೊ. ಪ್ರಭು ಸೊಪ್ಪಿನ ಮಾತನಾಡಿ, 1824ರಲ್ಲಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ ಮಾತ್ರ. ಅವರು ಬ್ರಿಟಿಷರೊಂದಿಗಿನ ಮೊದಲ ಯುದ್ದದಲ್ಲಿ ವಿಜಯಿಯಾಗಿದ್ದರು. ಚೆನ್ನಮ್ಮನ ಧೈರ್ಯ, ರಾಷ್ಟ್ರಪ್ರೇಮ. ನಾಡಭಕ್ತಿಯನ್ನು ನಾವೆಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳಬೇಕಿದೆ ಎಂದರು.

ಮುಂಡರಗಿ: ತಂದೆ- ತಾಯಿ, ಸಮಾಜ ಹಾಗೂ ದೇಶದ ಋಣವನ್ನು ಪ್ರತಿಯೊಬ್ಬರೂ ತೀರಿಸಬೇಕು. ಸಂತರು, ಮಹಾತ್ಮರು, ಶರಣರು ಹಾಗೂ ಹೋರಾಟಗಾರರ ಕುರಿತು ಚಿಂತನೆ ಮಾಡುವುದು ಅವಶ್ಯವಾಗಿದೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸಪಾಟೀಲ ತಿಳಿಸಿದರು.

ಭಾನುವಾರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಿತ್ತೂರು ಚೆನ್ನಮ್ಮ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಪಂಚಾಚಾರ್ಯ ವಿದ್ಯಾವರ್ಧಕ ಹಾಗೂ ಸಾಂಸ್ಕೃತಿಕ ಸಂಘ, ಪಂಚಮಸಾಲಿ ಶಹರ ಘಟಕ, ಯುವ ಘಟಕ, ಮಹಿಳಾ ಘಟಕ, ತಾಲೂಕು ಯುವ ಘಟಕ, ಸಮಾಜದ ಸಲಹಾ ಸಮಿತಿ ಹಾಗೂ ನೌಕರರ ಘಟಕಗಳ ಆಶ್ರಯದಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನ 247ನೇ ಜಯಂತ್ಯುತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸಾಧಕರಿಗೆ, ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರು ಬಹಳಷ್ಟು ಕಷ್ಟಪಟ್ಟು 3 ಎಕರೆ 26 ಗುಂಟೆ ಜಮೀನನ್ನು ಖರೀದಿಸಿದ್ದಾರೆ. ಅದು ಕೋಟ್ಯಂತರ ಬೆಲೆ ಬಾಳುವಂತಾಗಿದೆ. ಅಲ್ಲಿಯೇ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಪ್ರೊ. ಪ್ರಭು ಸೊಪ್ಪಿನ ಮಾತನಾಡಿ, 1824ರಲ್ಲಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ ಮಾತ್ರ. ಅವರು ಬ್ರಿಟಿಷರೊಂದಿಗಿನ ಮೊದಲ ಯುದ್ದದಲ್ಲಿ ವಿಜಯಿಯಾಗಿದ್ದರು. ಚೆನ್ನಮ್ಮನ ಧೈರ್ಯ, ರಾಷ್ಟ್ರಪ್ರೇಮ. ನಾಡಭಕ್ತಿಯನ್ನು ನಾವೆಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳಬೇಕಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕ್ಷೇತ್ರ ಯೋಜನಾಧಿಕಾರಿ ವಿಶಾಲಾ ಮಲ್ಲಾಪೂರ ಮಾತನಾಡಿದರು. ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಮಾಜದ ಹಾಗೂ ಇತರೆ ಸಮಾಜಗಳ ಅನುಕೂಲಕ್ಕಾಗಿ ಪಟ್ಟಣದಲ್ಲಿ ಕಿತ್ತೂರು ಚೆನ್ನಮ್ಮಾಜಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದು ವರ್ಷದೊಳಗೆ ಪೂರ್ಣಗೊಳಿಸುವ ಸಂಕಲ್ಪ ಹೊಂದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿ.ಕೆ. ಗಣಪ್ಪನವರ, ಸಂತೋಷ ಮುರುಡಿ ಸೇರಿದಂತೆ ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರು, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಕೊಂಬಳಿಯ ಶಿವಗಂಗಮ್ಮ ಬಾಳಪ್ಪ ಸೊಪ್ಪಿನ, ಸಿ.ಎಸ್. ಅರಸನಾಳ ಸೇರಿ ಅನೇಕರು ಸಮುದಾಯ ಭವನಕ್ಕೆ ಧನಸಹಾಯ ಮಾಡಿದರು. ತಾಲೂಕು ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷ ಶೋಭಾ ಹೊಟ್ಟಿನ, ಶಹರ ಪಂಚಮಸಾಲಿ ಘಟಕ ಅಧ್ಯಕ್ಷರು ಆರ್.ವೈ. ಪಾಟೀಲ, ತಾಲೂಕು ಪಂಚಮಸಾಲಿ ನೌಕರ ಘಟಕದ ಅಧ್ಯಕ್ಷ ಎನ್.ಎಂ. ಕುಕನೂರ, ಯುವ ಘಟಕದ ಅಧ್ಯಕ್ಷ ರಾಜೇಶ ಅರಕಲ್, ಶಹರ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಪ್ರಮೋದ ಇನಾಮತಿ, ಪಂಚಮಸಾಲಿ ಸಂಘದ ಪ್ರ. ಕಾರ್ಯದರ್ಶಿ ಅಶೋಕ ಹಂದ್ರಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರೊ. ಸಿ.ಎಸ್. ಅರಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪ ಕ್ರಿಸ್ ಮಸ್ ಪ್ರಯುಕ್ತ ೨೧ರಂದು ಸೌಹಾರ್ದ ರ‍್ಯಾಲಿ
ಪ್ರತಿ ಮಹಿಳೆ ಸಮತೋಲನ ಆಹಾರ ಸೇವಿಸಬೇಕು: ಸೋನಾ ಮ್ಯಾಥ್ಯೂ