ಪ್ರಜಾ ಸೇವಾ ಇಲಾಖೆಯಿಂದ ಸಮಸ್ಯೆ ಪರಿಹಾರಕ್ಕೆ ಅರ್ಜಿ: ಶಾಸಕ ಶ್ರೀನಿವಾಸ್

KannadaprabhaNewsNetwork |  
Published : Sep 06, 2026, 01:15 AM IST
ಲಿಂಗದಹಳ್ಳಿ  ಗ್ರಾಮ ಪಂಚಾಯಿತಿ ಆವರಣದಲ್ಲಿ  ಪ್ರಜಾ ಸೇವಾ ಅಂದೋಲನ ಸಭೆಗೆ ಚಾಲನೆ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಹೊಸದಾಗಿ ಸ್ತಾಪಿಸಿರುವ ಪ್ರಜಾ ಸೇವಾ ಇಲಾಖೆಯಿಂದ ರಾಜ್ಯಾದ್ಯಾದಂತ ಜನಸಾಮನ್ಯರ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ಲಿಂಗದಹಳ್ಳಿ ಗ್ರಾಪಂನಲ್ಲಿ ಪ್ರಜಾ ಸೇವಾ ಅಂದೋಲನ ಸಭೆಗೆ ಚಾಲನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಹೊಸದಾಗಿ ಸ್ತಾಪಿಸಿರುವ ಪ್ರಜಾ ಸೇವಾ ಇಲಾಖೆಯಿಂದ ರಾಜ್ಯಾದ್ಯಾದಂತ ಜನಸಾಮನ್ಯರ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ಲಿಂಗದಹಳ್ಳಿ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ತರೀಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರಜಾ ಸೇವಾ ಆಂದೋಲನ ಪ್ರಥಮ ಸಭೆ ಉದ್ಘಾಟಿಸಿ ಮಾತನಾಡಿದರು ಲಿಂಗದಹಳ್ಳಿ ಸೇರಿದಂತೆ ತರೀಕೆರೆ ವಿಧಾನ ಸಭಾ ಕ್ಷೇತ್ರದಾದ್ಯಂತ ಅನೇಕ ಜನ ಸ್ಪಂದನ ಕಾರ್ಯ ಕ್ರಮ ನಡೆಸಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ. ಪ್ರಜಾ ಸೇವಾ ಇಲಾಖೆಯಿಂದ ಲಿಂಗದಹಳ್ಳಿಯಲ್ಲಿ ಇಂದು 60 ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಿ ಅವುಗಳಲ್ಲಿ ಸ್ಥಳದಲ್ಲಿಯೇ ಪರಿಹರಿಸುವಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದು ಬಾಕಿ ಉಳಿದ ಅರ್ಜಿಗಳನ್ನು ಮುಂಬರುವ ಬುಧವಾರ ತಾಲೂಕು ಮಟ್ಟದ ಅಧಿಕಾರಿಗಳೆಲ್ಲರೂ ಸಭೆ ಸೇರಿ ಆಯಾ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.

ಲಿಂಗದಹಳ್ಳಿ ಹೋಬಳಿಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು ಕಲ್ಲಾಳು ಮತ್ತು ಸಹ್ಯಾದ್ರಿಪುರದಲ್ಲಿ ನಿರಾಶ್ರಿ ತರಿಗೆ ನೀಡಲಾದ ನಿವೇಶನಗಳ ಸರ್ವೆ ನಂಬರ್‌ಗಳ ಖಾತಾಗಳು ಬದಲಾಗಿದ್ದು ಮುಂಬರುವ ದಿನಗಳಲ್ಲಿ ಅವುಗಳನ್ನು ಸರಿಪಡಿಸಲಾಗುವುದು. ಹೋಬಳಿಯಾದ್ಯಂತ ಬರಗಾಲ ಆವರಿಸಿದ್ದು ಈ ಭಾಗದ ಕೆರೆಗಳಿಗೆ ನಾಳೆಯಿಂದಲೇ ನೀರು ತುಂಬಿಸಲಾಗುವುದು. ಇದಕ್ಕೂ ಕೆಲವು ಸಮಸ್ಯೆಗಳಿದ್ದು ಆ ಸಮಸ್ಯೆಗಳನ್ನು ಬಗೆಹರಿಸಿ ನೀರು ಹರಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ 63 ಅರ್ಜಿಗಳು ಬಂದಿದ್ದರು ಅವುಗಳಲ್ಲಿ ಹೆಚ್ಚಿನ ಅರ್ಜಿಗಳು ಜಮೀನುಗಳು ಮತ್ತು ಗ್ರಾಮಗಳ ಮನೆಗಳ ಈ ಖಾತಾ ವಸತಿ ಯೊಜನೆ, ಕಂದಾಯ ಹಾಗೂ ಉಪ ಕಂದಾಯ ಗ್ರಾಮಗಳ ಹಕ್ಕು ಪತ್ರಗಳಿಗೆ ಹೆಚ್ಚಿನವು ಬಂದಿವೆ. ಇನ್ನುಳಿದವು ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ್ದವು ಎಂದು ತಹಸೀಲ್ದಾರ್ ರಶ್ಮಿ ತಿಳಿಸಿದರು.

ಇತ್ತೀಚೆಗೆ ರಾಜ್ಯ ಸರ್ಕಾರ ಗ್ರಾಮಸ್ಥರ ವಾರ್ಷಿಕ ತಲಾ ಆದಾಯ ಏರಿಕೆ ಮಾಡಿದ್ದು ಅದರ ಅಂಗವಾಗಿ ಕಳೆದ ಕೆಲ ತಿಂಗಳಿಂದ ನಿಂತು ಹೋಗಿದ್ದ ವಿವಿಧ ಮಾಸಾಶನಗಳ ಪೈಕಿ 600 ಕ್ಕೂ ಅಧಿಕ ಮಾಸಾಶನಗಳಿಗೆ ಮರು ಜೀವ ನೀಡಲಾಗಿದೆ. ಬಾಕಿ ಉಳಿದವು ಪ್ರಗತಿಯಲ್ಲಿದೆ ಎಂದು ಹೇಳಿದರು.

ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ದೇವೇಂದ್ರಪ್ಪ, ಬಿಸಿಎಂ ಇಲಾಖಾ ಅಧಿಕಾರಿ ಅಶೋಕ್ ರಾಜೇ ಅರಸ್, ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್ ಪಿ.ಆರ್.ಡಿ. ಎ.ಇ.ಇ , ವಿನೋದ್ ಜೆ.ಇ. ವಿನಾಯಕ್, ಪಿ.ಡಬ್ಲ್ಯೂ.ಡಿ. ಎಇಇ ಶಿವಪ್ರಕಾಶ್, ಲಿಂಗದಹಳ್ಳಿ ಕಂದಾಯ ಅಧಿಕಾರಿ ಪ್ರಕಾಶ್, ಕಾರ್ತೀಕ್, ವಿನೋದ್ ಚೌಹಾಣ್, ಪಿ.ಡಿ.ಓಗಳಾದ ಯೋಗೇಶ್, ಶಿವಮೂರ್ತಿ, ಬಿ ಮಂಜು, ಎನ್.ಎಸ್. ನಾಗರಾಜಪ್ಪ, ಚಂದ್ರಹಾಸ್, ಮುಂತಾದವರು ಹಾಜರಿದ್ದರು.

-

5ಕೆಟಿಆರ್.ಕೆ.15ಃ

ಲಿಂಗದಹಳ್ಳಿಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಪ್ರಜಾ ಸೇವಾ ಆಂದೋಲನ ಪ್ರಥಮ ಸಭೆ ಉದ್ಘಾಟನೆ ನೆರವೇರಿಸಿದರು. ತಹಸೀಲ್ದಾರ್ ರಶ್ಮಿ ಎಚ್.ಜೆ. ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಘನತೆ ಗಾಳಿಗೆ ಬಿಟ್ಟು, ಭಾಷಣದಲ್ಲಿ ಗೌರವ ಕೊಟ್ಟು ಹೊರಟರು!
ದೇವದುರ್ಗದಲ್ಲಿ ಪ್ರಜಾ ಸೇವೆ ಅಂದೋಲನಕ್ಕೆ ಶಾಸಕಿ ಚಾಲನೆ