ಕನ್ನಡಪ್ರಭ ವಾರ್ತೆ ಗುಬ್ಬಿ
ಗುಬ್ಬಿ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆ ಆಯೋಜನೆ ಮಾಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸಮಾಜದಲ್ಲಿ ಶೋಷಣೆಗೆ ಒಳಪಟ್ಟ ಅಹಿಂದ ವರ್ಗದ ಮಕ್ಕಳು ಪ್ರಸ್ತುತ ದಿನಮಾನದಲ್ಲಿ ಶೇ. 97ರಷ್ಟು ಅಂಕ ಗಳಿಕೆಯಲ್ಲಿ ಕಾಣಿಸಿಕೊಂಡಿರುವುದು ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ಎನ್ನಬಹುದು. ಇದರ ಸಾಧನೆ ಶಿಕ್ಷಣ ಇಲಾಖೆಗೆ ಸಂದುತ್ತದೆ. ಎಲ್ಲಾ ರಂಗಗಳೂ ಭ್ರಷ್ಟಾಚಾರದಿಂದ ತುಂಬಿವೆ. ಇದ್ದಿದ್ದರಲ್ಲಿ ಶಿಕ್ಷಣ ಇಲಾಖೆಯು ಕೊಂಚ ಸಮಾಧಾನ ತರುವ ಲಂಚಮುಕ್ತ ರಂಗವಾಗಿದೆ. ಶಿಕ್ಷಣ ಎನ್ನುವುದು ದೇಶದ ಅಭಿವೃದ್ಧಿ. ಶಿಕ್ಷಕ ವರ್ಗ ಉತ್ತಮ ನಾಗರಿಕರನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.ತುಮಕೂರು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿಕ್ಷಕ ಕೇವಲ ವೃತ್ತಿಯಾಗದೆ ಪ್ರವೃತ್ತಿಯಾಗಿ ಸಮಾಜ ಕಟ್ಟಬೇಕು. ಅಪಾರ ಗೌರವ ಸಿಗುವ ಶಿಕ್ಷಕ ಹುದ್ದೆಗೆ ತನ್ನದೇ ಆದ ವಿಶಿಷ್ಟ ಬೆಲೆ ಇದೆ. ಈಗಿನ ಕಾಲದಲ್ಲಿ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಸಿಕ್ಕಿದೆ ಎಂದರು.