ಶ್ರೀಗುರುಸಿದ್ಧರಾಮೇಶ್ವರ ಜಯಂತಿ ಆಚರಣೆಗೆ ಎಲ್ಲರೂ ಸಹಕರಿಸಿ

KannadaprabhaNewsNetwork |  
Published : Sep 30, 2026, 02:00 AM IST
29ಎಚ್ಎಸ್ಎನ್15 :  | Kannada Prabha

ಸಾರಾಂಶ

ಶ್ರೀಗುರುಸಿದ್ಧರಾಮೇಶ್ವರ ಜಯಂತಿ ಮಹೋತ್ಸವವನ್ನು ಹಾಸನದಲ್ಲಿ ಅದ್ದೂರಿಯಾಗಿ ಆಚರಿಸುವ ಕುರಿತು ಪೂರ್ವಭಾವಿ ಸಭೆ ನಗರದ ಹೊಸ ಲೈನ್ ರಸ್ತೆಯಲ್ಲಿರುವ ಪುಷ್ಪಗಿರಿ ಮಹಾಸಂಸ್ಥಾನದ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಹಾಸನದಲ್ಲಿ ನಿರ್ಮಾಣವಾಗುತ್ತಿರುವ ಮಹಿಳಾ ವಿದ್ಯಾರ್ಥಿನಿಲಯದ ಕಟ್ಟಡವನ್ನು ಸಮಾಜಕ್ಕೆ ಸಮರ್ಪಿಸಲು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಶ್ರೀಗುರುಸಿದ್ಧರಾಮೇಶ್ವರ ಜಯಂತಿ ಮಹೋತ್ಸವವನ್ನು ಹಾಸನದಲ್ಲಿ ಅದ್ದೂರಿಯಾಗಿ ಆಚರಿಸುವ ಕುರಿತು ಪೂರ್ವಭಾವಿ ಸಭೆ ನಗರದ ಹೊಸ ಲೈನ್ ರಸ್ತೆಯಲ್ಲಿರುವ ಪುಷ್ಪಗಿರಿ ಮಹಾಸಂಸ್ಥಾನದ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ನೊಳಂಬ ಸಮಾಜದ ರಾಜ್ಯಾಧ್ಯಕ್ಷ ಶರಣ ಬಿ.ಕೆ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ವಿಧಾನಸಭಾ ಸದಸ್ಯ ಶರಣ ಕೆ.ಎಸ್. ಲಿಂಗೇಶ್ ಮಾತನಾಡಿ, ಹಾಸನದಲ್ಲಿ ರಾಜ್ಯಮಟ್ಟದ ಶ್ರೀಗುರುಸಿದ್ಧರಾಮೇಶ್ವರ ಜಯಂತಿ ಆಚರಣೆಗೆ ಸಮಾಜದ ಎಲ್ಲರೂ ಒಗ್ಗೂಡಿ ಸಹಕರಿಸುವ ಮೂಲಕ ಐತಿಹಾಸಿಕ ಕಾರ್ಯಕ್ರಮ ರೂಪಿಸಬೇಕು ಎಂದು ಕರೆ ನೀಡಿದರು. ಜಯಂತಿ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಹೊಳೆನರಸೀಪುರ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಮಾಜಿ ಶಾಸಕ ಪ್ರೀತಂ ಜೆ. ಗೌಡ ಅವರು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ಕಾರ್ಯಕ್ರಮದ ಸಂಪೂರ್ಣ ದಾಸೋಹದ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಹಾಸನದಲ್ಲಿ ನಿರ್ಮಾಣವಾಗುತ್ತಿರುವ ಮಹಿಳಾ ವಿದ್ಯಾರ್ಥಿನಿಲಯದ ಕಟ್ಟಡವನ್ನು ಸಮಾಜಕ್ಕೆ ಸಮರ್ಪಿಸಲು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಲಾಯಿತು.

ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಶ್ರೀಗುರುಸಿದ್ಧರಾಮೇಶ್ವರ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಹಾಸನದಲ್ಲಿ ಆಚರಿಸುತ್ತಿರುವುದು ಸಂತಸದ ವಿಚಾರ. ಸಮಾಜದ ವತಿಯಿಂದ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ತಮ್ಮ ತಂದೆಯವರೂ ನೊಳಂಬ ಸಮಾಜದೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಅದೇ ರೀತಿಯಲ್ಲಿ ತಾನು ಕೂಡ ಸಮಾಜದ ಬಗ್ಗೆ ಅಪಾರ ಗೌರವ ಹೊಂದಿದ್ದು, ಸಮಾಜದ ಕಾರ್ಯಗಳಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಅವರು ಹೇಳಿದರು.ಸಭೆಯಲ್ಲಿ ಉದ್ಯಮಿ ಶರಣ ಎಚ್.ಎಸ್. ರಾಜಶೇಖರ್ (ಶಿವಗಂಗ ಗ್ರಾನೈಟ್), ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಪುರ ರಾಜಶೇಖರ್, ಶರಣ ಮೂಳೆನಹಳ್ಳಿ ರೇವಣ್ಣ, ನವೀಲೆ ಪರಮೇಶ್, ಕಟ್ಟಾಯ ಶಿವಕುಮಾರ್, ಶೋಭನ್ ಬಾಬು, ಗಂಗೂರು ಶಿವಕುಮಾರ್, ಶರಣ ಯು.ಎಸ್. ಬಸವರಾಜು, ಅಡುಗೂರು ಬಸವರಾಜ್, ಅವಿನಾಶ್, ಅಜಿತ್ ಆಲೂರು, ರುದ್ರಕುಮಾರ್, ಡಾ. ಮೋಹನ್, ನಟರಾಜ್ ಜಿಲ್ಲಾಜೆ, ಡಿ.ಎಸ್. ಅಧ್ಯಕ್ಷರು, ಬಿ.ಎಂ. ದೊಡ್ಡವೀರೇಗೌಡ, ಜಗದೀಶ್ ಆಡಿಟರ್, ಗಂಗೇಗೌಡ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ವೀರಶೈವ-ಲಿಂಗಾಯತ ಹಾಗೂ ನೊಳಂಬ ಸಮಾಜದ ಮುಖಂಡರು ಭಾಗವಹಿಸಿದ್ದರು. ಕು. ಲಕ್ಷ್ಮೀ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಗಂಗೂರು ಕುಮಾರ್ ಸ್ವಾಗತಿಸಿದರು. ಯು.ಎಸ್. ಬಸವರಾಜು ನಿರೂಪಿಸಿದರು. ಶರಣ ಆರ್.ಈ. ಸೋಮಶೇಖರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಪಾಲಿಗೆ ಪ್ರೊ:ಸುಜನಾ ಆದರ್ಶ ಗುರುವಾಗಿದ್ದರು: ಪ್ರೊ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯ
ಜಿಲ್ಲೆಗೆ ಬಂದರೆ ಪ್ರಮೋಷನ್ ಸಿಗುತ್ತೆ, ಹಿಂಬಡ್ತಿ ಅಲ್ಲ: ಶಾಸಕ ಕೃಷ್ನಮೂರ್ತಿ