ಯಕ್ಷಗಾನ ಸೇವೆಯಿಂದ ಭಗವಂತನ ಸಾಕ್ಷಾತ್ಕಾರ: ಕಲ್ಕೂರ

KannadaprabhaNewsNetwork |  
Published : May 09, 2026, 02:45 AM IST
ಪ್ರಭಾಕರ ಕಾಮತ್‌ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಹಿರಿಯ ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ಯಕ್ಷಗಾನ ಕಲಾವಿದ ಪಿ.ಪ್ರಭಾಕರ ಕಾಮತರ ನುಡಿ ನಮನ ಕಾರ್ಯಕ್ರಮ

ಮಂಗಳೂರು: ಪ್ರಭಾಕರ ಕಾಮತ್‌ ಅವರು ಯಕ್ಷಗಾನ ಸೇವೆಯಿಂದ ಭಗವಂತನ ಸಾಕ್ಷಾತ್ಕಾರ ಪಡೆದವರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಇತ್ತೀಚಿಗೆ ನಿಧನರಾದ ಹಿರಿಯ ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ಯಕ್ಷಗಾನ ಕಲಾವಿದ ಪಿ.ಪ್ರಭಾಕರ ಕಾಮತರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾರದ ಕೂಟ ನಡೆಸುವ ಹಲವು ಯಕ್ಷಗಾನ ಸಂಘಗಳಲ್ಲಿ ಹಲವು ದಶಕಗಳಿಂದ ನಿರಂತರವಾಗಿ ತೊಡಗಿಸಿಕೊಂಡು ಸಾರ್ಥಕ ಜೀವನವನ್ನು ನಡೆಸಿದವರು ಎಂದು ಅವರು ನುಡಿ ನಮನ ಸಲ್ಲಿಸಿದರು.

ಪ್ರಭಾಕರ ಯಕ್ಷ ನಮನ ಶೀರ್ಷಿಕೆಯಲ್ಲಿ ಶ್ರೀ ಜಗದಂಬಾ ಯಕ್ಷಗಾನ ಮಂಡಳಿಯವರಿಂದ ವಾಲಿ ಮೋಕ್ಷ, ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಅತಿಕಾಯ ಮೋಕ್ಷ ಹಾಗೂ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯವರಿಂದ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ಕೂಟಗಳು ನಡೆಯಿತು.

ಸಂಜಯರಾವ್, ಶ್ರೀನಾಥ ಪ್ರಭು, ಸಿ.ಎಸ್.ಭಂಡಾರಿ, ಪ್ರಫುಲ್ಲಾ ನಾಯಕ್ , ಅರ್ಚಕ ವೇದಮೂರ್ತಿ ವಾಸುದೇವ ಭಟ್ ಶಿವಪ್ರಸಾದ ಪ್ರಭು, ಶೋಭಾ ಐತಾಳ, ಅಶೋಕ ಬೋಳೂರು, ಯೋಗೀಶ ಕುಮಾರ್ ಜೆಪ್ಪು, ಜಯರಾಮ ಅಂಚನ್, ಶಿವರಾಮ ಪಣಂಬೂರು, ಸಂಘದ ಕಲಾವಿದರು ಹಾಗೂ ಪ್ರಭಾಕರ ಕಾಮತ್ ಕುಟುಂಬದ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಧರ್ಮದ ಹಾದಿಯಲ್ಲಿ ನಡೆಯಲಿ: ಅಭಿನವ ಸಿದ್ಧಲಿಂಗ ಶ್ರೀ
ದಾನಮ್ಮ ಉತ್ಸವ ದೇಸಿ ಸಂಸ್ಕೃತಿಗೆ ಹಿಡಿದ ಕನ್ನಡಿ: ಎಂ.ಎ.ಮೋರೆ