ಕೋಮಾರಪಂತ ವಿದ್ಯಾವರ್ಧಕ ಸಂಘದಿಂದ ಪ್ರತಿಭಾ ಪುರಸ್ಕಾರ

KannadaprabhaNewsNetwork | Published : May 23, 2024 1:13 AM

ಸಾರಾಂಶ

ಹಟ್ಟಿಕೇರಿಯ ಜೆಸಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಮುಖ್ಯಾಧ್ಯಾಪಕಿ ಮಂಜುಳಾ ಕಿರಣ ನಾಯ್ಕ ಸ್ಫೂರ್ತಿ ಪುಸ್ತಕ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕು ಹಿಂದೂ ಕೋಮಾರಪಂತ ಶ್ರೀ ವಿದ್ಯಾವರ್ಧಕ ಸಂಘದ ವತಿಯಿಂದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ, ವಾರ್ಷಿಕ ಮಹಾಸಭೆ, ಸ್ಫೂರ್ತಿ ಪುಸ್ತಕ ಬಿಡುಗಡೆ ಸಮಾರಂಭ ಕೇಣಿಯ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಭಾವಿಕೇರಿಯ ಸಾಮಾಜಿಕ ಕಾರ್ಯಕರ್ತ ದಿನಕರ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಈ ಸಂಘವು ಸಾಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಕೋಲಾ ತಾಲೂಕು ಹಿಂದೂ ಕೋಮಾರಪಂತ ಶ್ರೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಂ. ನಾಯ್ಕ ಮಾತನಾಡಿ, ಸಂಘದ ಸದಸ್ಯರ, ಪೋಷಕರ, ದಾನಿಗಳ ಹಾಗೂ ಸರ್ಕಾರದ ಅನುದಾನದ ಸಹಾಯದೊಂದಿಗೆ ಈಗಾಗಲೇ ಸಭಾಭವನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಸಮಾಜದವರು ಇನ್ನೂ ಹೆಚ್ಚಿನ ಸಹಾಯ ಸಹಕಾರ ನೀಡಬೇಕು ಎಂದರು.

ಹಟ್ಟಿಕೇರಿಯ ಜೆಸಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಮುಖ್ಯಾಧ್ಯಾಪಕಿ ಮಂಜುಳಾ ಕಿರಣ ನಾಯ್ಕ ಸ್ಫೂರ್ತಿ ಪುಸ್ತಕ ಬಿಡುಗಡೆಗೊಳಿಸಿ, ವಿದ್ಯಾವರ್ಧಕ ಸಂಘದ ಕಾರ್ಯ ಚಟುವಟಿಕೆ ಶ್ಲಾಘಿಸಿದರು. ಸಂಘದ ಉಪಾಧ್ಯಕ್ಷ ಡಿ.ಟಿ. ನಾಯ್ಕ, ಚೆಂಡಿಯಾ ಗ್ರಾಪಂ ಅಧ್ಯಕ್ಷೆ ಪೂಜಾ ಪ್ರಕಾಶ ನಾಯ್ಕ, ಭಾವಿಕೇರಿ ಗ್ರಾಪಂ ಸದಸ್ಯೆ ಸುಷ್ಮಾ ಅಮರನಾಥ ನಾಯ್ಕ, ಶ್ರೀ ದತ್ತಾತ್ರೇಯ ದೇವಸ್ಥಾನ ಕಮಿಟಿಯ ಅಧ್ಯಕ್ಷ ರವಿ ತಿಮ್ಮಪ್ಪ ನಾಯ್ಕ, ಶ್ರೀ ಸಾಯಿ ಸದ್ಗುರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಜಾನನ ಆನಂದು ನಾಯ್ಕ ಹಾಗೂ ಸಮಾಜ ಸೇವಕ ಮಹಾದೇವ ಆರ್. ಬೆಲೀಫ್ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿ ಪ್ರತಿಭೆಗಳನ್ನು ಪುರಸ್ಕರಿಸಲಾಯಿತು. ತಾಲೂಕು ಹಿಂದೂ ಕೋಮಾರಪಂತ ಶ್ರೀ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಕೆ. ನಾಯ್ಕ ಪ್ರತಿಭಾ ಪುರಸ್ಕೃತರ ಯಾದಿ ಓದಿದರು.

ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 99.08 ಅಂಕ ಪಡೆದ ಹಟ್ಟಿಕೇರಿ ಜೇಸಿ ಹೈಸ್ಕೂಲ್ ವಿದ್ಯಾರ್ಥಿ ವೀಕ್ಷಿತ್ ಪಂಥ್ ಅವರನ್ನು ಹಾಗೂ ಕೇಂದ್ರ ಸರ್ಕಾರದ ಪ್ರಾಯೋಜಿತ ಚಂದ್ರಯಾನ- 3 ಯಶಸ್ವಿಯಾದ ಪ್ರಯುಕ್ತ ಇಸ್ರೋ ಬಾಹ್ಯಾಕಾಶ ಸಂಸ್ಥೆ ಆಯೋಜಿಸಿದ್ದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಟಾಪ್- 50ರಲ್ಲಿ ಆಯ್ಕೆಯಾಗಿ ಇಸ್ರೋ ವೀಕ್ಷಣೆಗೆ ಅವಕಾಶ ಪಡೆದಿದ್ದ ಕೇಣಿಯ ಅಭಿಲಾಷ ಮಾರುತಿ ನಾಯ್ಕ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಕಾರವಾರ ನಗರಸಭೆಯ ಮಾಜಿ ಉಪಾಧ್ಯಕ್ಷ ಪ್ರಕಾಶ ಪಿ. ನಾಯ್ಕ, ಆರ್.ಪಿ. ನಾಯ್ಕ ದಾಂಡೇಲಿ, ಬೆಳಸೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಚನಾ ನಾಯ್ಕ ಉಪಸ್ಥಿತರಿದ್ದರು. ಸಂತೋಷ ನಾಯ್ಕ ಸ್ವಾಗತಿಸಿದರು. ವಿಜಯಕುಮಾರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಂಜಯ ಎಂ. ನಾಯ್ಕ ವಂದಿಸಿದರು.

Share this article