ಕನ್ನಡಪ್ರಭ ವಾರ್ತೆ ಮೈಸೂರು
ನಗರ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ಎಸ್ ಗೆ ನಿರ್ಬಂಧ ಹೇರುವುದಕ್ಕೆ ಹೋಗಬೇಡಿ. ಇಂದಿರಾ ಗಾಂಧಿ ಈ ಹಿಂದೆಯೇ ಪಾರ್ಲಿಮೆಂಟ್ ನಲ್ಲಿ ಆರ್ ಎಸ್ಎಸ್ ಗುರೂಜಿಗೆ ಸಂತಾಪ ಸೂಚನೆ ಮಾಡಿದ್ದರು. ದೊಣ್ಣೆ ಹಿಡಿದುಕೊಂಡು ಆಕ್ಟಿವಿಟಿ ಮಾಡ್ತಾರೆಂದು ನಿರ್ಬಂಧ ಹೇರಲು ಹೊರಟಿದ್ದಾರೆ. ಆದರೆ, ನ್ಯಾಯಾಲಯದ ತೀರ್ಪು ಖುಷಿ ಕೊಟ್ಟಿದೆ, ಇದು ಸ್ವಾಗತಾರ್ಹ ಎಂದರು.
ಮಲ್ಲಿಕಾರ್ಜುನ್ ಖರ್ಗೆ ಈ ಹಿಂದೆ ಆರ್ ಎಸ್ಎಸ್ ಕಾರ್ಯಕ್ರಮಕ್ಕೆ ಸಪೋರ್ಟ್ ಮಾಡಿದ್ದರು. ಆರ್ ಎಸ್ಎಸ್ ಬಗ್ಗೆ ಈಗ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ. ಆದರೆ, ಮಲ್ಲಿಕಾರ್ಜುನ್ ಖರ್ಗೆ ಒಂದೇ ಒಂದು ಮಾತನಾಡಿಲ್ಲ. ಇದರ ಅರ್ಥ ಆರ್ ಎಸ್ಎಸ್ ನ ಒಳ್ಳೆಯ ಕೆಲಸಗಳು ಮಲ್ಲಿಕಾರ್ಜುನ ಖರ್ಗೆಗೆ ಗೊತ್ತು ಎಂದು ಅವರು ಹೇಳಿದರು.----
ಯತೀಂದ್ರ ಹೇಳಿಕೆಗೆ ಖಂಡನೆ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರು 130 ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಆಗ ವೋಟಿಂಗ್ ಮೆಷಿನ್ ಸರಿಯಾಗಿದ್ವಾ? ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ವೋಟಿಂಗ್ ಮೆಷಿನ್ ಸರಿಯಾಗಿಲ್ವಾ? ಪದೇ ಪದೇ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡ್ತಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ಕಾರ್ಯಕ್ಷಮತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಕೋಟ್...
- ಟಿ.ಎಸ್. ಶ್ರೀವತ್ಸ, ಶಾಸಕರು