ಕಾಂತರಾಜ್ ವರದಿ ತಿರಸ್ಕಾರಕ್ಕೆ ಒತ್ತಡ ಸರಿಯಲ್ಲ

KannadaprabhaNewsNetwork |  
Published : Jan 21, 2024, 01:34 AM IST
ಹೊನ್ನಾಳಿ ಫೋಟೋ 20ಎಚ್.ಎಲ್.ಐ3.ಪಟ್ಟಣದ   ಪ್ರವಾಸಿಮಂದಿರದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಅಹಿಂದ ನಾಯಕ ಜಿಪಂ ಮಾಜಿ ಸದಸ್ಯ ಹೊದಿಗೆರೆ ರಮೇಶ್ ಮಾತನಾಡಿದರು.ಡಾ. ಈಶ್ವರ ನಾಯ್ಕ, ಬಿ.ಸಿದ್ದಪ್ಪ ಎಚ್.ಎ. ಉಮಾಪತಿ,ಯುವ ಮುಖಂಡ ಶ್ರೀನಿವಾಸ್,ಅಂಹಿದ ಜಿಲ್ಲಾ  ಜಿಲ್ಲಾ ಮುಖಂಡರು, ಹಾಗೂ ಕಾರ್ಯಕರ್ತರು ಇದ್ದರು.  | Kannada Prabha

ಸಾರಾಂಶ

ಜಾತಿ ಜನಗಣತಿಯ ಕಾಂತರಾಜ ವರದಿಯಲ್ಲಿ ಏನಿದೆ ಎನ್ನುವುದು ಯಾರಿಗೂ ತಿಳಿಯದಿದ್ದರೂ ಆ ವರದಿಯ ತಿರಸ್ಕರಿಬೇಕು ಎಂದು ಸಿಎಂ ಮೇಲೆ ಒತ್ತಡ ಹಾಕುವುದು ಸರಿಯಲ್ಲ, ಮೊದಲು ವರದಿ ಸ್ವೀಕರಿಸಿ ಸಮಗ್ರ ಮಾಹಿತಿ ಪಡೆಯುವುದು ಸರ್ಕಾರದ ಕ್ರಮವಾಗಿದೆ. ವರದಿ ಸ್ವೀಕರಿಸಲು ಒತ್ತಾಯಕ್ಕಾಗಿ ಅಹಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಅಹಿಂದ ನಾಯಕ, ಜಿಪಂ ಮಾಜಿ ಸದಸ್ಯ ಹೊದಿಗೆರೆ ರಮೇಶ್ ಮನವಿ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶೋಷಿತ ಸಮಾಜದ ಜಾಗೃತಿ, ಕಾಂತರಾಜ್ ವರದಿ ಸ್ವೀಕರಿಸಲು ಒತ್ತಾಯಿಸಿ ಜ.28ರಂದು ಚಿತ್ರದುರ್ಗದಲ್ಲಿ ಬೃಹತ್ ಅಹಿಂದ ಸಮಾವೇಶ ಹಮ್ಮಿಕೊಂಡಿದ್ದು ಅವಳಿ ತಾಲೂಕುಗಳ ಅಹಿಂದ ನಾಗರಿಕರು ತಪ್ಪದೇ ಭಾಗವಹಿಸಿ ಎಂದು ಅಹಿಂದ ನಾಯಕ, ಜಿ.ಪಂ. ಮಾಜಿ ಸದಸ್ಯ ಹೊದಿಗೆರೆ ರಮೇಶ್ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಾತಿ ಜನಗಣತಿಯ ಕಾಂತರಾಜ ವರದಿಯಲ್ಲಿ ಏನಿದೆ ಎನ್ನುವುದು ಯಾರಿಗೂ ತಿಳಿಯದಿದ್ದರೂ ಆ ವರದಿಯ ತಿರಸ್ಕರಿಬೇಕು ಎಂದು ಸಿಎಂ ಮೇಲೆ ಒತ್ತಡ ಹಾಕುವುದು ಸರಿಯಲ್ಲ, ಮೊದಲು ವರದಿ ಸ್ವೀಕರಿಸಿ ಸಮಗ್ರ ಮಾಹಿತಿ ಪಡೆಯುವುದು ಸರ್ಕಾರದ ಕ್ರಮವಾಗಿದೆ. ವರದಿ ಸ್ವೀಕರಿಸಲು ಒತ್ತಾಯಕ್ಕಾಗಿ ಅಹಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಶೇ.30ರಷ್ಟು ಇರುವ ಮೇಲ್ವರ್ಗದವರು ಈಚೆಗೆ ದಾವಣಗೆರೆ ನಗರದಲ್ಲಿ ರಾಷ್ಟ್ರೀಯ ಸಮಾವೇಶ ಮಾಡಿ 20 ಸಾವಿರ ಜನರ ಸೇರಿಸಿದ್ದರು. ಶೇ.70ರಷ್ಟು ಅಹಿಂದ ವರ್ಗವಿರುವ ನಾವು ಲಕ್ಷ ಸಂಖ್ಯೆಯಲ್ಲಿ ಸೇರಿಸುವ ಶಕ್ತಿ ನಮಗಿದೆ. ಅಹಿಂದ ವರ್ಗ ಒಂದಾಗಿ ಹೋರಾಡಿ ಸಿಎಂ ಕೈ ಬಲಪಡಿಸಿದರೆ ವರದಿ ಸ್ವೀಕಾರ ಹಾಗೂ ಅನುಷ್ಠಾನಕ್ಕೆ ಸಹಾಯವಾಗುತ್ತದೆ ಎಂದರು.

ಅಹಿಂದ ತಾಲೂಕು ಅಧ್ಯಕ್ಷ ಡಾ.ಈಶ್ವರನಾಯ್ಕ ಮಾತನಾಡಿ ಜಾತಿಜನಗಣತಿಗಾಗಿ ಸರ್ಕಾರ 160 ಕೋಟಿ ವೆಚ್ಚ ಮಾಡಿದ್ದು ಇದು ಸಾರ್ವಜನಿಕರ ಹಣ. ಇಂತಹ ವರದಿ ಕೈ ಬಿಡುವ ಹುನ್ನಾರ ಸರಿಯಲ್ಲ ಎಂದರು.

ಅಹಿಂದ ಮುಖಂಡ ಬಿ.ಸಿದ್ದಪ್ಪ ಮಾತನಾಡಿದರು. ರುದ್ರಮುನಿ, ವೀರೇಶನಾಯ್ಕ, ಡಿ.ಬಸವರಾಜ್, ಶಿವಕುಮಾರ್ ಒಡೆಯರ್, ಎಚ್.ಎ.ಉಮಾಪತಿ ಜ.28ರಂದು ನಡೆಯುವ ಅಹಿಂದ ಸಮಾವೇಶಕ್ಕೆ ತೆರಳಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಅಹಿಂದ ವರ್ಗದ ಜನರು ಭಾಗವಹಿಸಿ ಸಮಾವೇಶ ಯಶಸ್ವಿಗಳಿಸಬೇಕೆಂದು ಮನವಿ ಮಾಡಿದರು.

ಅಹಿಂದ ಮುಂಖಂಡರಾದ ಎಚ್.ಬಿ.ಶಿವಯೋಗಿ, ಜಗನ್ನಾಥ್, ಶಿವಾನಂದಪ್ಪ, ಎಂ.ಎಸ್.ಪಾಲಾಕ್ಷಪ್ಪ,ತಮ್ಮಣ್ಣ, ವಾಸಪ್ಪ, ದಿಡಗೂರು ಪಾಲಾಕ್ಷಪ್ಪ, ಹನುಮಂತಪ್ಪ ಇತರರಿದ್ದರು. ಅಹಿಂದ ಯುವ ಮುಖಂಡ ಎಸ್.ಎಸ್.ಶ್ರೀನಿವಾಸ್ ಸ್ವಾಗತಿಸಿದರು

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ