ಕಾಡುಗೊಲ್ಲ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅಗತ್ಯ: ಶ್ರೀ ಬಸವ ರಮಾನಂದ ಸ್ವಾಮೀಜಿ ಕರೆ

KannadaprabhaNewsNetwork |  
Published : Oct 01, 2026, 01:15 AM IST
೩೦ಶಿರಾ೨: ಶಿರಾ ತಾಲೂಕಿನ ದೇವರ ಹಟ್ಟಿ ಗ್ರಾಮದಲ್ಲಿ ಶ್ರೀ ಗೊಲ್ಲಬಳಗ ಯುವಕರು ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀ ಬಸವ ರಮಾನಂದ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಕಾಡುಗೊಲ್ಲ ಸಮುದಾಯಕ್ಕೆ ಐದು ತಲೆಮಾರಿನಿಂದ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ತಾತ, ಮುತ್ತಾತನ ಹೆಸರಿನಲ್ಲಿರುವಆಸ್ತಿ ಪೋಡಿ ಮಾಡಲು ಸರ್ಕಾರ ವಿಶೇಷ ಆಸಕ್ತಿ ವಹಿಸಿ ಸಮಸ್ಯೆ ನಿವಾರಣೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಶಿರಾ

ಕಾಡುಗೊಲ್ಲ ಸಮುದಾಯ ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ವನಕಲ್ಲು ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಬಸವ ರಮಾನಂದ ಸ್ವಾಮೀಜಿ ಹೇಳಿದರು.

ಶಿರಾ ತಾಲೂಕಿನ ದೇವರ ಹಟ್ಟಿ ಗ್ರಾಮದಲ್ಲಿ ಶ್ರೀ ಗೊಲ್ಲಬಳಗ ಯುವಕರು ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಕಾಡುಗೊಲ್ಲ ಸಮುದಾಯಕ್ಕೆ ಐದು ತಲೆಮಾರಿನಿಂದ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ತಾತ, ಮುತ್ತಾತನ ಹೆಸರಿನಲ್ಲಿರುವ

ಆಸ್ತಿ ಪೋಡಿ ಮಾಡಲು ಸರ್ಕಾರ ವಿಶೇಷ ಆಸಕ್ತಿ ವಹಿಸಿ ಸಮಸ್ಯೆ ನಿವಾರಣೆ ಮಾಡಬೇಕು. ಆರ್ಥಿಕವಾಗಿ ಕಾಡುಗೊಲ್ಲ ಸಮುದಾಯ ಪ್ರಗತಿ ಸಾಧಿಸಬೇಕೆಂಬ ಉದ್ದೇಶದಿಂದ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಹಲವಾರು ರೀತಿಯ ಸೌಲಭ್ಯಗಳನ್ನು ನೀಡುವಂತಹ ಕೆಲಸ ಸರ್ಕಾರ ಮಾಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಕಾಡುಗೊಲ್ಲ ಸಮುದಾಯ ಸಬಲರಾಗಬೇಕು. ಗೊಲ್ಲರಹಟ್ಟಿಗಳಲ್ಲಿ ರಸ್ತೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು ಇವುಗಳ ಇತ್ಯರ್ಥಪಡಿಸುವಂತಹ ಕೆಲಸ ಮಾಡಬೇಕು. ದೇವರ ಹಟ್ಟಿ ಶ್ರೀ ಮಾರಮ್ಮ ದೇವಿ ದೇವಸ್ಥಾನ ಕೆಲಸ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು ಭಕ್ತರು ಆರ್ಥಿಕ ಸಹಾಯ ಮಾಡಬೇಕು. ಪ್ರತಿವಾರ ನಡೆಯುವ ಅನ್ನದಾಸೋಹಕ್ಕೂ ಭಕ್ತರು ದವಸಧಾನ್ಯ ನೀಡಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶ್ರೀ ಮಾರಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮಯ್ಯ, ಪ್ರಧಾನ ಕಾರ್ಯದರ್ಶಿ ಡಿಎಂಪಿ ಕರಿಯಣ್ಣ, ಕಲ್ಮನೆ ಮಾರಣ್ಣ, ಪೂಜಾರ್ ಚಿಕ್ಕಣ್ಣ, ಹೊಟ್ಟೆ ಈರಣ್ಣ, ಪೂಜಾರ್ ಈರಣ್ಣ, ತಾವರೆಕೆರೆ ರಾಮಕೃಷ್ಣಪ್ಪ, ಕುರಿ ನಾಗಪ್ಪ, ಜಯರಾಜು, ಚಂಗಾವರ ರಾಮಕೃಷ್ಣ ,ಕಮ್ಮಜ್ಜನವರ ಈರಣ್ಣ, ಚಿಕ್ಕದಾಸರಹಳ್ಳಿ ನಾಗರಾಜಪ್ಪ, ಮದ್ದಕ್ಕನಹಳ್ಳಿ ಈರಮಾರಣ್ಣ, ಮಹೇಶ್, ಸಂತೋಷ್, ಪರಮೇಶ್, ಗಿರೀಶ್, ಮಹಾಲಿಂಗಪ್ಪ, ಚಿಕ್ಕಣ್ಣ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರಿಗೆ ದೇಗುಲ ಪ್ರವೇಶ ನಿರ್ಬಂಧ: ತಹಸೀಲ್ದಾರ್ ಭೇಟಿ
ಗ್ಯಾರಂಟಿ ಬಡವರ ಬದುಕಿನಲ್ಲಿ ಹೊಸ ಚೈತನ್ಯ ನೀಡಿವೆ: ಶಿವು ಚಂಗಾವರ