ಕನ್ನಡಪ್ರಭ ವಾರ್ತೆ ಮಂಡ್ಯ
ಚೆನ್ನೈ ನಗರದಲ್ಲಿ ನಡೆದ ಈ ಕರಾಟೆ ಸ್ಪರ್ಧೆಗೆ ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ, ಉತ್ತರ ಭಾರತದ ಹಲವು ರಾಜ್ಯಗಳ ೪೫೦ಕ್ಕೂ ಹೆಚ್ಚು ಕರಾಟೆಪಟುಗಳು ಭಾಗವಹಿಸಿದ್ದರು. ಕರಾಟೆ ಸ್ಪರ್ಧೆಯ ಕುಮತೆ ವಿಭಾಗದಲ್ಲಿ ಲಕ್ಷಿತ್ ಪ್ರಥಮ ಸ್ಥಾನ. ರುದ್ರ ಪ್ರತೀಕ್ ಪ್ರಥಮ ಸ್ಥಾನ. ಡಿಂಪನ್ ಕೆ.ಗೌಡ ತೃತೀಯ ಸ್ಥಾನ. ವೈಷ್ಣವಿ ದ್ವಿತೀಯ ಸ್ಥಾನ. ಪಡೆದುಕೊಂಡಿದ್ದಾರೆ.
೧೩ ವರ್ಷದೊಳಗಿನ ಕಥಾ ಕುಮತಿ ವಿಭಾಗದಲ್ಲಿ ಆರ್ಯನ್ ದ್ವಿತೀಯ ಸ್ಥಾನ. ಚಿರಾಗ್ ಪ್ರಥಮ ಸ್ಥಾನ.ಮನೋಜ್ ಕುಮಾರ್ ದ್ವಿತೀಯ ಸ್ಥಾನ. ವಿಜ್ಞೇಶ್ ಪ್ರಥಮ ಸ್ಥಾನ. ಪ್ರಮೋದ್ ದ್ವಿತೀಯ ಸ್ಥಾನ.ಹೃದಯ್ ದ್ವಿತೀಯ ಸ್ಥಾನ.ಪಡೆದುಕೊಂಡಿರುತ್ತಾರೆ. ಹಾಗೆಯೇ ೧೫ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರಂಜನ್ ಗೌಡ ಹಾಗೂ ಶಶಾಂಕ್ ಗೌಡ ಇಬ್ಬರು ಪ್ರಥಮ ಸ್ಥಾನ ಪಡೆದಿದದಾರೆ. ಬ್ಲಾಕ್ ಬೆಲ್ಟ್ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ವಿಷ್ಣು ಮೊದಲಿಯಾರ್ ಪ್ರಥಮ ಸ್ಥಾನ. ಹನಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ ಎಂದು ಸಂಸ್ಥೆಯ ಮುಖ್ಯ ತರಬೇತುದಾರ ಲೋಕೇಶ್ ಮೊದಲಿಯಾರ್ ತಿಳಿಸಿದ್ದಾರೆ.ಸ್ಪರ್ಧೆಯ ಟೀಮ್ ಮ್ಯಾನೇಜರ್ ಶಿವರಂಜಿನಿ ಕಾರ್ಯ ನಿರ್ವಹಿಸಿದರು. ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಪೋಷಕರು ಹಾಗೂ ಕರಾಟೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕರಾಟೆ ತರಬೇತಿದಾರರಾದ ಬಸವಸಾಗರ್. ಪ್ರತಾಪ್‌ಕುಮಾರ್. ಇತರರು ಹಾಜರಿದ್ದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಮಂಡ್ಯ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಅನಿಕೇತನ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ 2026-27 ನೇ ಸಾಲಿನ ನೇರ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಕ್ಸಿಂಗ್ ಹಾಗೂ ಜೂಡೋ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.ಕ್ರೀಡಾಕೂಟದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನ ಕುಮಾರ್, ಕ್ರೀಡಾ ಆಯೋಜಕ ಎಸ್.ಎಂ.ಗುರುಸ್ವಾಮಿ, ಚೇತನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಎಂ.ಜಗದೀಶ್, ಅನಿಕೇತನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ರಾಮಲಿಂಗಯ್ಯ, ಮುಖ್ಯ ತೀರ್ಪುಗಾರರಾದ ಜಿ.ಕುಬೇರನಾರಾಯಣ ಪಾಲ್ಗೊಂಡಿದ್ದರು.