ಬಾಗಲಕೋಟೆ : ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಅಲೆ- ಸಿದ್ದರಾಮಯ್ಯ

KannadaprabhaNewsNetwork | Updated : Apr 19 2024, 12:13 PM IST

ಸಾರಾಂಶ

ಕಳೆದ 20 ವರ್ಷಗಳಿಂದ ಬಿಜೆಪಿ ಸಂಸದರು ಬಾಗಲಕೋಟ ಲೋಕಸಭೆಯ ಜನರ ಧ್ವನಿಯನ್ನು ಅಡಗಿಸಿ ಮೂಕರಂತೆ ವರ್ತಿಸಿದ್ದಾರೆ.

  ಬಾದಾಮಿ : ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ಇದು ಮತಗಳಾಗಿ ಪರಿಣಮಿಸಿ ಅಭ್ಯರ್ಥಿ ಸಂಯುಕ್ತಾ ಪಾಟೀಲ ಗೆಲವು ಸಾಧಿಸಲಿದ್ದಾರೆ. ಇದರಿಂದ ಬಾಗಲಕೋಟ ಲೋಕಸಭಾ ಕ್ಷೇತ್ರದ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ಅವರು ಪ್ರತಿಧ್ವನಿಸಲಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹೊರವಲಯದಲ್ಲಿ ಬುಧವಾರ ಸಂಜೆ ನಡೆದ ಸಿದ್ದರಾಮಯ್ಯ ಬಣದ ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಬಿಜೆಪಿ ಸಂಸದರು ಬಾಗಲಕೋಟ ಲೋಕಸಭೆಯ ಜನರ ಧ್ವನಿಯನ್ನು ಅಡಗಿಸಿ ಮೂಕರಂತೆ ವರ್ತಿಸಿದ್ದಾರೆ. ಎಲ್ಲ ಧರ್ಮಗಳಿಗೆ ಒಂದು ಪವಿತ್ರ ಗ್ರಂಥವಿದೆ. ಹಾಗೆಯೇ ಎಲ್ಲ ಧರ್ಮಿಯರಿಗೂ ಸಂವಿಧಾನವೇ ಶ್ರೇಷ್ಠ ಗ್ರಂಥವಾಗಿದೆ. ಇದನ್ನು ಬದಲಿಸಲು ಬಿಜೆಪಿಗೆ ನಾವು ಅವಕಾಶ ಕೊಡಲ್ಲ ಎಂದು ನುಡಿದರು.

ಸಿದ್ದರಾಮಯ್ಯ ಆಪ್ತ ಹೊಳಬಸು ಶೆಟ್ಟರ ಮಾತನಾಡಿ, ಈ ಸಭೆ ಯಾರ ಪರವೂ ಅಲ್ಲ ಮತ್ತು ಯಾರ ವಿರುದ್ಧವೂ ಅಲ್ಲ. ಇದು ಸಿದ್ದರಾಮಯ್ಯನವರ ಅಭಿಮಾನಿ ಬಳಗದ ಸ್ವಾಭಿಮಾನದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ. ಅಭ್ಯರ್ಥಿ ಸಂಯುಕ್ತಾ ಪಾಟೀಲರ ಪರವಾಗಿ ಶ್ರಮಿಸಿ ಗೆಲ್ಲಿಸುವ ಬಣವಾಗಿದೆ ಎಂದು ಸ್ಪಷ್ಟಪಡಿಸಿದರು.

ಜಿಪಂ ಮಾಜಿ ಸದಸ್ಯ ಪಿ.ಆರ್.ಗೌಡರ, ಎಂ.ಬಿ. ಹಂಗರಗಿ. ಬ್ಲಾಕ್ ಅಧ್ಯಕ್ಷ ಹನಮಂತಗೌಡ ಯಕ್ಕಪ್ಪನವರ, ಯುವ ಮುಖಂಡ ಮಹೇಶ ಹೊಸಗೌಡರ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ಅಭ್ಯರ್ಥಿ ಸಂಯುಕ್ತಾ ಪಾಟೀಲ ವಿದ್ಯಾವಂತರು ಮತ್ತು ಹೋರಾಟ ಮನೋಭಾವನೆ ಉಳ್ಳವರು. ಇಂತವರು ಸಂಸತ್ತಿನಲ್ಲಿ ಇರಬೇಕು. ಅದಕ್ಕಾಗಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮುಖಂಡರಾದ ಶಶಿ ಉದಗಟ್ಟಿ, ಹನಮಂತ ದೇವರಮನಿ, ನಾಗಪ್ಪ ಅಡಪಟ್ಟಿ, ಮಧು ಯಡ್ರಾಮಿ, ರಂಗನಗೌಡ ಗೌಡರ, ಶಿವುಕುಮಾರ ತಾಳಂಪಲ್ಲಿ, ರೇವಣಸಿದ್ದಪ್ಪ ನೋಟಗಾರ, ಮಲ್ಲಣ್ಣ ಯಲಿಗಾರ, ಸಿದ್ದು ಗೌಡರ, ಪುರಸಭೆ ಸದಸ್ಯ ಪಾಂಡು ಕಟ್ಟಿಮನಿ, ಯಮುನಾ ಹೊಸಗೌಡರ, ಚಿಂತಾಕಲ್ಲ, ಮಣ್ಣೂರ, ಅಮಾತೆಪ್ಪ ಕೊಪ್ಪಳ, ಬಸವರಾಜ ಡೊಳ್ಳಿನ, ಪ್ರಕಾಶ ಗೌಡರ, ಬಸಪ್ಪ ಹುಗ್ಗಿ, ಮುತ್ತಪ್ಪ ಗಾಜಿ, ರಫೀಕ ಕಲಬುರ್ಗಿ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ಆಡಗಲ್ ಗ್ರಾಪಂ ನ ವೈ.ಆರ್.ಪಾಟೀಲ ಸೇರಿದಂತೆ ನೂರಾರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ ಸೇರಿದರು 

ಕಳೆದ 20 ವರ್ಷಗಳಿಂದ ಬಿಜೆಪಿ ಸಂಸದರು ಬಾಗಲಕೋಟ ಲೋಕಸಭೆಯ ಜನರ ಧ್ವನಿಯನ್ನು ಅಡಗಿಸಿ ಮೂಕರಂತೆ ವರ್ತಿಸಿದ್ದಾರೆ. ಬಾಗಲಕೋಟ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ಇದು ಮತಗಳಾಗಿ ಪರಿಣಮಿಸಿ ಅಭ್ಯರ್ಥಿ ಸಂಯುಕ್ತಾ ಪಾಟೀಲ ಗೆಲವು ಸಾಧಿಸಲಿದ್ದಾರೆ.

- ಶಿವಾನಂದ ಪಾಟೀಲ, ಸಚಿವ

Share this article