ಮೌಲ್ಯ ಮಾಪನ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

KannadaprabhaNewsNetwork | Published : Apr 16, 2025 12:30 AM

ಸಾರಾಂಶ

ಎಸ್.ಎಸ್.ಎಲ್.ಸಿ. ಪರೀಕ್ಷೆ-೧ರ ಮೌಲ್ಯ ಮಾಪನ ಕಾರ್ಯವು ಏ.೨೦ ರವರೆಗೆ ಜರುಗಲಿದ್ದು, ಮೌಲ್ಯಮಾಪನ ಸುವ್ಯವಸ್ಥಿತವಾಗಿ ನಡೆಸಲು, ಮೌಲ್ಯ ಮಾಪನ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಹಾಸನ: ಎಸ್.ಎಸ್.ಎಲ್.ಸಿ. ಪರೀಕ್ಷೆ-೧ರ ಮೌಲ್ಯ ಮಾಪನ ಕಾರ್ಯವು ಏ.೨೦ ರವರೆಗೆ ಜರುಗಲಿದ್ದು, ಮೌಲ್ಯಮಾಪನ ಸುವ್ಯವಸ್ಥಿತವಾಗಿ ನಡೆಸಲು, ಮೌಲ್ಯ ಮಾಪನ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮೌಲ್ಯ ಮಾಪನ ಕಾರ್ಯ ನಡೆಯಲಿರುವ ಪರೀಕ್ಷಾ ಕೇಂದ್ರಗಳಾದ ರಾಯಲ್ ಅಪೊಲೊ ಇಂಟರ್ ನ್ಯಾಷನಲ್ ಶಾಲೆ. ಹೇಮಾವತಿ ನಗರ, ಹಾಸನ, ವಿಜಯ ಪ್ರೌಢಶಾಲೆ, ಚಿಕ್ಕಹೊನ್ನೇನಹಳ್ಳಿ, ಹಾಸನ. ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲೆ, ರಿಂಗ್ ರಸ್ತೆ, ಹಾಸನ, ಸಿ.ಕೆ.ಎಸ್. ಬಾಲಕಿಯರ ಪ್ರೌಢಶಾಲೆ, ಕೆ.ಆರ್. ಪುರಂ, ಸಂಪಿಗೆ ರಸ್ತೆ, ಹಾಸನ, ಸಂತ ಫಿಲೋಮಿನಾ, ಪ್ರೌಢಶಾಲೆ, ಹಾಸನ, ಸಂತ ಜೋಸೆಫರ ಪ್ರೌಢಶಾಲೆ, ಸಾಲಗಾಮೆ ರಸ್ತೆ, ಹಾಸನ. ಆರು ಪರೀಕ್ಷಾ ಕೇಂದ್ರಗಳಲ್ಲಿ ಮೌಲ್ಯ ಮಾಪನ ಕಾರ್ಯ ನಡೆಯುವ ದಿನದಿಂದ ಮತ್ತು ಮುಕ್ತಾಯವಾಗುವವರೆಗೂ ಮೌಲ್ಯ ಮಾಪನ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಎಂದು ನಿರ್ದೇಶಿಸಿದ್ದಾರೆ.

ನಿಬಂಧನೆಗಳು: ಯಾವುದೇ ಸಾರ್ವಜನಿಕರು, ೫ ಜನ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಿಷೇಧಿತ ಪ್ರದೇಶವೆಂದು ಜಾರಿಗೊಳಿಸಿದ ಮೌಲ್ಯ ಮಾಪನ ಕೇಂದ್ರಗಳ ವ್ಯಾಪ್ತಿಯಲ್ಲಿ ಗುಂಪು ಸೇರುವುದನ್ನು ಅಥವಾ ತಿರುಗುವುದನ್ನು ನಿಷೇಧಿಸಿದೆ. ಅನುಮಾನಾಸ್ಪದ ವ್ಯಕ್ತಿಗಳಿಗೆ ಮೌಲ್ಯ ಮಾಪನ ಕೇಂದ್ರಕ್ಕೆ ಪ್ರವಶವನ್ನು ನಿಷೇಧಿಸಿದೆ. ಮೌಲ್ಯಮಾಪನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೊರಗಿನ ವ್ಯಕ್ತಿಗಳು ಯಾವುದೇ ರೀತಿಯ ಬೆದರಿಕೆ ಒಡ್ಡುವುದನ್ನು ನಿ?ಧಿಸಿದೆ. ನಿಷೇಧಿತ ಮೌಲ್ಯ ಮಾಪನ ಕೇಂದ್ರಗಳ ಸುತ್ತ ಮೊಬೈಲ್ ಬಳಕೆ ನಿಷೇಧಿಸಿದೆ. ಮಾಲ್ಯಮಾಪನ ಗೌಪ್ಯ ಸಾಮಗ್ರಿಗಳನ್ನು ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದಿಂದ ಹೊರಗಡೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ.ಈ ನಿಷೇಧಾಜ್ಞೆ ಆದೇಶವು ನಿಗದಿಪಡಿಸಿದ ಪರೀಕ್ಷಾ ಪ್ರಶೋತ್ತರ ಮೌಲ್ಯ ಮಾಪನ ಕೇಂದ್ರಗಳ ಸುತ್ತಲೂ ದಿನದ ೨೪ ಗಂಟೆಗಳಲ್ಲಿಯೂ ಮೌಲ್ಯ ಮಾಪನ ಕಾರ್ಯವು ಮುಕ್ತಾಯವಾಗುವ ತನಕ ಜಾರಿಯಲ್ಲಿರುತ್ತದೆ. ಮೌಲ್ಯಮಾಪನ ಕೇಂದ್ರದ ಕರ್ತವ್ಯನಿರತ ಅಧಿಕಾರಿಗಳು/ಸಿಬ್ಬಂದಿ ಹೊರತುಪಡಿಸಿ ಇತರರು ಯಾರು ನಿಷೇಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲವೆಂದು ನಿಬಂಧಿಸಿ ಈ ಆದೇಶವನ್ನು ಹೊರಡಿಸಿದ್ದಾರೆ.

Share this article