ಸತ್ಯ, ನ್ಯಾಯದ ಪರವಾಗಿದ್ದ ಪ್ರವಾದಿ ಮಹಮ್ಮದ್ ಪೈಗಂಬರ್: ಧರ್ಮ ಗುರು ಹನೀಫ್ ಸಆದಿ

KannadaprabhaNewsNetwork |  
Published : Aug 26, 2026, 01:45 AM IST
ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪದ ಮುಖ್ಯ ಬೀದಿಯಲ್ಲಿ ಮಹಮ್ಮದ್ ಪೈಗಂಬರ್ ಅವರ 1551 ನೇ ಜನ್ಮ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ನರಸಿಂಹರಾಜಪುರಪ್ರವಾದಿಯವರು ಸತ್ಯ, ಧರ್ಮ, ನ್ಯಾಯದ ಪರವಾಗಿ ನಿಂತವರು ಎಂದು ಶೆಟ್ಟಿಕೊಪ್ಪ ಭದ್ರಾ ಕಾಲೋನಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮ ಗುರುಗಳಾದ ಹನೀಫ್‌ ಸಆದಿ ತಿಳಿಸಿದರು.

- ಶೆಟ್ಟಿಕೊಪ್ಪದಲ್ಲಿ ಮಹಮ್ಮದ್ ಪೈಗಂಬರ್ ಅವರ 1551 ನೇ ಜನ್ಮದಿನಾಚರಣೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪ್ರವಾದಿಯವರು ಸತ್ಯ, ಧರ್ಮ, ನ್ಯಾಯದ ಪರವಾಗಿ ನಿಂತವರು ಎಂದು ಶೆಟ್ಟಿಕೊಪ್ಪ ಭದ್ರಾ ಕಾಲೋನಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮ ಗುರುಗಳಾದ ಹನೀಫ್‌ ಸಆದಿ ತಿಳಿಸಿದರು.’

ಮಂಗಳವಾರ ತಾಲೂಕಿನ ಶೆಟ್ಟಿಕೊಪ್ಪದ ಪ್ರಮುಖ ಬೀದಿಗಳಲ್ಲಿ ಮಹಮ್ಮದ್ ಪೈಗಂಬರ್‌ 1551 ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್‌ರು ದೈವಾಂಶ ಸಂಭೂತರು. ಅವರು ಕೇವಲ ಮುಸ್ಲೀಂ ಧರ್ಮಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲಾ ಧರ್ಮವನ್ನೂ ಪ್ರೀತಿಸಿ, ಗೌರವಿಸುತ್ತಿದ್ದರು. ನಿನ್ನ ನೆರೆಯವರು ಯಾವ ಜಾತಿಯವರೇ ಆಗಿರಲಿ ಅವರನ್ನು ಗೌರವಿಸು ಎಂಬ ಸಂದೇಶವನ್ನು ಸಾರಿದವರು ಎಂದರು.

ಶೆಟ್ಟಿಕೊಪ್ಪದಲ್ಲಿ ಹಿಂದೂ, ಮುಸ್ಲೀಂ,ಕ್ರಿಶ್ಚಿಯನ್‌ಗಳು ಜಾತಿ, ಧರ್ಮ,ಮತ ಬೇಧ ಭಾವವಿಲ್ಲದೆ ಶಾಂತಿಯುತವಾಗಿ ಬದುಕು ತ್ತಿದ್ದೇವೆ. ಒಂದೇ ತಾಯಿ ಮಕ್ಕಳಂತೆ ಬಾಳುತ್ತಿದ್ದೇವೆ. ಮನುಕುಲದ ಏಳಿಗೆಗಾಗಿ ಪ್ರವಾದಿಗಳು ತಮ್ಮ ಸಂದೇಶಗಳಲ್ಲಿ ಸತ್ಯ, ನ್ಯಾಯ ಹಾಗೂ ಧರ್ಮದ ಪರವಾಗಿ ನಿಂತವರು ಎಂದರು.ಮತ್ತೋರ್ವ ಧರ್ಮಗುರು ಫರ್ವೀಜ್‌ ನಈಮಿ ಸದರ್ ಮುಅಲ್ಲಿಮ್ ಮಾತನಾಡಿ, ಪ್ರವಾದಿಗಳ ಸಂದೇಶಗಳು ಮನುಷ್ಯನ ಬದಲಾವಣೆಗೆ ಪೂರಕವಾಗಿವೆ. ಹಸಿದವನಿಗೆ ಉಣಬಡಿಸದೆ, ನಾವೇ ತಿನ್ನುವುದನ್ನು ಯಾವುದೇ ಧರ್ಮವೂ ಒಪ್ಪುವುದಿಲ್ಲ. ಪ್ರತಿಯೊಂದು ಧರ್ಮಗಳಲ್ಲೂ ಕೂಡ ತನ್ನ ಧರ್ಮದಲ್ಲಿ ಜೀವಿಸಿ, ಇತರೆ ಧರ್ಮವನ್ನು ಗೌರವಿಸಿ ಎಂಬ ಸಂದೇಶ ಸಾರುತ್ತವೆ. ಇದನ್ನು ಪಾಲಿಸಿದರೆ ದೇಶದಲ್ಲಿ ಯಾವುದೇ ಕೋಮು ಗಲಭೆ ನಡೆಯುವುದಿಲ್ಲ. ಬಸವಣ್ಣನವರು ಹೇಳಿದ ಹಾಗೆ ದಯವಿಲ್ಲದ ಧರ್ಮ ಯಾವುದಯ್ಯ, ದಯವೇ ಧರ್ಮದ ಮೂಲವಯ್ಯ ಎಂದು ಬದುಕ ಬೇಕು ಎಂದು ಕರೆ ನೀಡಿದರು.ಮೆರವಣಿಗೆ ಭದ್ರಾ ಕಾಲೋನಿಯ ಮೊಹಿದ್ದೀನ್ ಜುಮ್ಮಾ ಮಸೀದಿಯಿಂದ ಹೊರಟು ದೊಡ್ಡಿಹಟ್ಟಿ, ಶೆಟ್ಟಿಕೊಪ್ಪ, ನವಗ್ರಾಮದವರೆಗೂ ನಡೆಯಿತು. ಮೆರವಣಿಗೆಯುದ್ದಕ್ಕೂ ಮದರಸಾ ಮಕ್ಕಳಿಂದ ಪ್ರವಾದಿಯವರ ಸಂದೇಶ ಸಾರುವ ಹಾಡು ಹಾಡುತ್ತಾ, ದಫ್ ನೃತ್ಯ ಮಾಡಲಾಯಿತು. ದಾರಿಯುದ್ದಕ್ಕೂ ಸಿಹಿ ವಿತರಿಸಲಾಯಿತು.ಈದ್ ಮಿಲಾದ್ ಹಬ್ಬದ ಶುಭಾಷಯ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಗುರುಗಳಾದ ಅನ್ವರ್ ಮುಸ್ಲಿ ಯಾರ್, ಬಷೀರ್‌ ಮುಸ್ಲಿಯಾರ್, ಫಾರೂಕ್‌ ಝಹರಿ, ಮೊಹದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಸುಲೇಮಾನ್, ಅಬ್ದುಲ್‌ ರಹೆಮಾನ್, ಎಸ್.ಎ.ಸುಲೇಮಾನ್, ಅಬೂಬಕರ್, ಇಬ್ರಾಹಿಂ ಹಮೀದ್,ಮಹಮ್ಮದ್‌ ಹಸನಬ್ಬ, ಮೋಣು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 18 ಸಾವಿರ ಮತದಾರರು ಹೊರಕ್ಕೆ
ಪಡಿತರ ಕಾರ್ಡ್ ಹೊಂದಿರುವ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ: ಮೂಡ್ಲೀಗೌಡ