ಪ್ರೊ.ಭಗವಾನ್ ವಿರುದ್ಧ ಪ್ರತಿಭಟನೆ, ಭಾವಚಿತ್ರಕ್ಕೆ ಚಪ್ಪಲಿ ಹೊಡೆತ

KannadaprabhaNewsNetwork |  
Published : Oct 16, 2023, 01:45 AM IST
15ಕೆಎಂಎನ್ ಡಿ11ಮಂಡ್ಯದಲ್ಲಿ ಒಕ್ಕಲಿಗ ಮುಖಂಡರು ಪ್ರೊ.ಭಗವಾನ್ ಭಾವಚಿತ್ರಕ್ಕೆ ಚಪ್ಪಲಿಸೇವೆ ಮಾಡಿ ಪ್ರತಿಭಟಿಸಿದರು. | Kannada Prabha

ಸಾರಾಂಶ

ಒಕ್ಕಲಿಗ ಸಮುದಾಯದ ವಿರುದ್ಧ ಪ್ರೊ.ಕೆ.ಎಸ್‌ ಭಗವಾನ್ ಅವಹೇಳನಾಕಾರಿ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಒಕ್ಕಲಿಗ ಮುಖಂಡರು ಭಗವಾನ್ ಭಾವಚಿತ್ರಕ್ಕೆ ಚಪ್ಪಲಿಸೇವೆ ಮಾಡಿ ಪ್ರತಿಭಟಿಸಿದರು.

ಆಕ್ರೋಶ ವ್ಯಕ್ತಪಡಿಸಿದ ಒಕ್ಕಲಿಗ ಮುಖಂಡರು ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ಒಕ್ಕಲಿಗ ಸಮುದಾಯದ ವಿರುದ್ಧ ಪ್ರೊ.ಕೆ.ಎಸ್‌ ಭಗವಾನ್ ಅವಹೇಳನಾಕಾರಿ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಒಕ್ಕಲಿಗ ಮುಖಂಡರು ಭಗವಾನ್ ಭಾವಚಿತ್ರಕ್ಕೆ ಚಪ್ಪಲಿಸೇವೆ ಮಾಡಿ ಪ್ರತಿಭಟಿಸಿದರು. ಪಟ್ಟಣದ ಕುವೆಂಪು ವೃತ್ತದ ಬಳಿಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಧಿಕ್ಕಾರ ಕೂಗಿದ ಒಕ್ಕಲಿಗ ಮುಖಂಡರು, ಭಗವಾನ್ ಎಂಬ ಅವಿವೇಕಿ ಒಕ್ಕಲಿಗರ ಸಂಸ್ಕಾರದ ಬಗ್ಗೆ ಕೇವಲವಾಗಿ ಮಾತನಾಡಿದ್ದಾನೆ. ಅವನೊಬ್ಬ ಹುಚ್ಚ, ಮತಿಹೀನನಂತೆ ವರ್ತಿಸುತ್ತಿದ್ದಾನೆ. ಹಾಗಾಗಿ ಭಗವಾನ್ ವಿರುದ್ಧ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡುತ್ತಿರುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಒಕ್ಕಲಿಗ ಮುಖಂಡರುಗಳಾದ ಪೈಲ್ವಾನ್ ಶಂಕ್ರಣ್ಣ, ಪರಮೇಶ್, ನಂದೀಶ್, ಸಂಜು, ಮರ್ಲಿಂಗಣ್ಣ, ಸುಧಾಕರ್, ಸುನಿಲ್, ರಮೇಶ್, ರಾಜು, ಮತ್ತು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಪದಾಧಿಕಾರಿಗಳಾದ ದೇವರಾಜು ಗೌಡಳ್ಳಿ, ಸ್ವಾಮೇಗೌಡ ಎಲ್‌ಐಸಿ, ಸುರೇಶ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗಂಜಾಂ, ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ ಮರಳಾಗಾಲ, ಖಜಾಂಚಿ ಶಿವ ಸ್ವಾಮಿ, ಕಾರ್ಯದರ್ಶಿ ಗಂಜಾಂ ಯೋಗಣ್ಣ ಮತ್ತಿತರರು ಭಾಗವಹಿಸಿದ್ದರು. ----------- 15ಕೆಎಂಎನ್ ಡಿ11 ಮಂಡ್ಯದಲ್ಲಿ ಒಕ್ಕಲಿಗ ಮುಖಂಡರು ಪ್ರೊ.ಭಗವಾನ್ ಭಾವಚಿತ್ರಕ್ಕೆ ಚಪ್ಪಲಿಸೇವೆ ಮಾಡಿ ಪ್ರತಿಭಟಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ