ಕನ್ನಡಪ್ರಭವಾರ್ತೆ, ಚನ್ನರಾಯಪಟ್ಟಣ
ವಿಷಯ ತಿಳಿದು ಸ್ಥಳಕ್ಕೆ ಎಇಇ ವಜ್ರ ಕುಮಾರ್ ಆಗಮಿಸಿದರು. ಅವರನ್ನು ಕಚೇರಿ ಮುಂದೆಯೇ ತಡೆದು ನಿಲ್ಲಿಸಿದ ರೈತರು, ವಿದ್ಯುತ್ ಸಮಸ್ಯೆ ಕುರಿತು ತಮ್ಮ ಅಳಲನ್ನು ತೋಡಿಕೊಂಡರು. ಶೀಘ್ರ ಬಗೆಹರಿಸುವಂತೆ ಘೇರಾವ್ ಹಾಕಿದರು. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಿಮಕಿ ನಡೆಯಿತು.
ಸರ್ಕಾರದ ಆದೇಶದಂತೆ ರೈತರ ಪಂಪ್ ಸೆಟ್ ಸಲುವಾಗಿ ತ್ರಿ ಫೇಸ್ ಲೈನನ್ನು ದಿನದಲ್ಲಿ ೭ ಗಂಟೆಗಳ ಕಾಲ ಪೂರೈಕೆ ಮಾಡಬೇಕು. ಆದರೆ ರಾತ್ರಿ ವೇಳೆ ಕೇವಲ ೨ಗಂಟೆ ಹಾಗೂ ಹಗಲು ಸಮಯದಲ್ಲಿ ೧ ಗಂಟೆ ಕಾಲ ನೀಡಲಾಗುತ್ತಿದೆ. ಅದರಲ್ಲಿಯೂ ಲೋಡ್ ಶೆಡ್ಡಿಂಗ್ ಹಾಗೂ ಎಲ್ ಸಿ ನೆಪ ತೋರಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.ಬೇಸಿಗೆ ಪ್ರಾರಂಭವಾಯಿತು ಎಂದರೆ ಸಾಕು ರೈತರಿಗೆ ಬೆವರಿನ ಬದಲು ಕಣ್ಣೀರು ಹರಿಯುತ್ತದೆ. ವಿದ್ಯುತ್ ಸಮಸ್ಯೆ ಭೂತವಾಗಿ ಕಾಡುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ ಬೆಳೆಗಳು ಹಾಗೂ ಹೈನುಗಾರಿಕೆಗೆ ಶಾಪವಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೊಮ್ಮೇನಹಳ್ಳಿ ಗ್ರಾಮದ ರೈತ ಶಿವರಾಮೇಗೌಡ ಮಾತನಾಡಿ, ವಿದ್ಯುತ್ ಸಮಸ್ಯೆ ಸಂಬಂಧ ಕರೆ ಮಾಡಿದರೆ ಅಧಿಕಾರಿಗಳು ಸ್ವೀಕರಿಸುವುದಿಲ್ಲ. ಲೈನ್ ಮ್ಯಾನ್ ಗಳನ್ನು ಕೇಳಿದರೆ ಎಲ್ ಸಿ ತೆಗೆದುಕೊಂಡಿದ್ದೇವೆ ಎಂದು ಸಮಜಾಯಿಷಿ ನೀಡುತ್ತಾರೆ. ಆದರೆ ಲೈನ್ ಮ್ಯಾನ್ ಗಳು ಯಾವುದೋ ಅಂಗಡಿ ಮುಂದೆ ಕುಳಿತಿರುತ್ತಾರೆ ಎಂದು ಆರೋಪಿಸಿದರು.
ಶಾಖಾಧಿಕಾರಿ ವೆಂಕಟೇಶ್, ಕಸರನಹಳ್ಳಿ ಗ್ರಾಮದ ಪಟೇಲ್ ಕೃಷ್ಣ, ಮಂಜುನಾಥ್, ಗೋಪಾಲ್, ಮಹೇಶ್, ಬೊಮ್ಮೇನಹಳ್ಳಿ ಗ್ರಾಮದ ರಾಜು, ರವಿ ಗೌಡ, ಶಿವರಾಮೇಗೌಡ, ನಂಜೇಗೌಡ, ಬಸವೇಗೌಡ, ಕುಮಾರ್, ರುದ್ರೇಗೌಡ, ಶಿವರುದ್ರೇಗೌಡ, ಗಂಗಾಧರ್, ಬಸವರಾಜ್, ವಾಸು, ಮಂಜೇಗೌಡ ಹಾಗೂ ಇತರರು ಇದ್ದರು.