ಕನ್ನಡಪ್ರಭವಾರ್ತೆ ಜಗಳೂರು
ಉದ್ದಗಟ್ಟ ನೆರೆ ಹಾವಳಿಯಿಂದ 20 ಕುಟುಂಬಗಳ ಮನೆಗಳಿಗೆ ನೆರೆ ಜೊತೆಗೆ ವಿಷಪೂರಿತ ಹಾವು, ಚೇಳು ಇತ್ಯಾದಿಗಳು ದಾಳಿಯಿಡುತ್ತಿವೆ. ಇದರಿಂದ ದೈನಂದಿನ ಜೀವನ ನಡೆಸಲು ಆತಂಕ, ತೊಂದರೆಯಾಗುತ್ತಿದೆ. ಅನಾಹುತವಾದರೆ ತಾಲೂಕು ಆಡಳಿತ ಹಾಗೂ ಸರ್ಕಾರವೇ ನೇರ ಹೊಣೆ. ಸದರಿ ಸಂತ್ರಸ್ತರಿಗೆ ತಾಲೂಕು ಆಡಳಿತದಿಂದ ಪುನರ್ವಸತಿ ಜಾಗವನ್ನು ಗುರುತಿಸಲಾಗಿದ್ದು, ಇದುವರೆಗೂ ವಿತರಣೆ ಆಗಿಲ್ಲ. ಕೂಡಲೇ ನೆರೆ ಹಾವಳಿ ಸಂತಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಚಿಕ್ಕಮಲ್ಲನಹೊಳೆ ಚಿರಂಜೀವಿ, ಹಸಿರು ಸೇನೆ ಅಧ್ಯಕ್ಷ ಕಸವನಹಳ್ಳಿ ನಾಗರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ತಾಲೂಕು ಉಪಾಧ್ಯಕ್ಷರಾದ ಸಹದೇವ ರೆಡ್ಡಿ, ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು, ಕಾರ್ಯದರ್ಶಿ ಕಾನನಕಟ್ಟೆ ಅನಿಲ್ ಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ಶರಣಪ್ಪ, ಮಾರನಾಯಕ್, ಉದ್ಗಟ್ಟ ಗ್ರಾಮದ ನೆರೆ ಸಂತ್ರಸ್ತರು ಭಾಗವಹಿಸಿದ್ದರು.- - - -28ಜೆ.ಜಿ.ಎಲ್.2: