- ಆರೋಗ್ಯ ಇಲಾಖೆಯಿಂದ ಪರಿಶೀಲನೆ । ಕಡೂರು ಆರೋಗ್ಯ ಸುರಕ್ಷಣಾಧಿಕಾರಿ ಭೇಟಿ
ತಾಲೂಕಿನ ಬಿ.ಎಚ್.ಮರದ ಫಾಸ್ಟ್ ಪುಡ್ ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಹಲವು ಬಾರಿ ಕರಿದ ಎಣ್ಣೆಯನ್ನು ಸುರಕ್ಷಣಾಧಿಕಾರಿ ಮಹೇಂದ್ರ ಭೇಟಿ ನೀಡಿ ಕರಿದ ಎಣ್ಣೆಯನ್ನು ಸೀಜ್ ಮಾಡಿದ್ದಾರೆ.
ಗುರುವಾರ ಗುಡ್ಡೇಹಳ್ಳದ ಸಂದೀಪ ಎನ್ನುವರು ಬಿ.ಎಚ್.ಕೈಮರದ ಅಂಜನ್ ಫಾಸ್ಟ್ ಪುಡ್ ಅಂಗಡಿಗೆ ಬಂದು ಫಾಸ್ಟ್ ಪುಡ್‌ಗಳನ್ನು ಖರೀದಿ ಮಾಡುವಾಗ ಈ ಹಿಂದೆ ಕರಿದ ಎಣ್ಣೆಯಲ್ಲೇ ಮತ್ತೆ ಪುಡ್ ತಯಾರಿಸುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಅವರು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಅವರಿಗೆ ದೂರು ನೀಡಿದ್ದಾರೆ. ಆರೋಗ್ಯಾಧಿಕಾರಿ ಸೂಚನೆಯಂತೆ ಸ್ಥಳಕ್ಕೆ ತಾಲೂಕು ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ದರ್ಶನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರಿದ ಎಣ್ಣೆಯಲ್ಲಿ 500 ಎಂಎಲ್ ನಷ್ಟು ಎಣ್ಣೆಯನ್ನು ಸಾರ್ವಜನಿಕರ ಎದುರಿನಲ್ಲಿ ಸಂಗ್ರಹಿಸಿ ಸೀಜ್ ಮಾಡಿದ್ದಾರೆ.ಶುಕ್ರವಾರ ಶಾಸಕ ಟಿ.ಡಿ.ರಾಜೇಗೌಡ ಸೂಚನೆಯಂತೆ ಕಡೂರು ಆಹಾರ ಸುರಕ್ಷಣಾಧಿಕಾರಿ ಮಹೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ನಂತರ ಅಂಗಡಿ ಮಾಲೀಕರಾದ ಅಣ್ಣಯ್ಯ ಅವರನ್ನು ಕರೆಸಿ ಸ್ಥಳ ಮಹಜರು ನಡೆಸಿದರು. ಕರಿದ ಎಣ್ಣೆಯನ್ನು ಪರೀಕ್ಷೆಗಾಗಿ ಮೈಸೂರಿನ ಎಫ್‌ಎಸ್‌ಐಎಲ್ ಗೆ ಕಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಆರ್.ಕೇಶವಮೂರ್ತಿ,ದೂರುದಾರ ಗುಡ್ಡೇಹಳ್ಳ ಸಂದೀಪ್, ಅಂಗಡಿ ಮಾಲೀಕ ಅಣ್ಣಯ್ಯ ಮತ್ತಿತರರು ಇದ್ದರು.