ಸ್ವಚ್ಛತೆಗೆ ಜನತೆ ಸಹಭಾಗಿತ್ವ ಅವಶ್ಯ: ಶಾಸಕ ಜಿ.ಎಸ್. ಪಾಟೀಲ

KannadaprabhaNewsNetwork |  
Published : Sep 24, 2025, 01:01 AM IST
ಪೌರಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಘನತ್ಯಾಜ್ಯ, ಕಸ, ಪ್ಲಾಸ್ಟಿಕ್, ಹಾಳೆ, ಕಸಕಡ್ಡಿ ತೆಗೆದು ಸ್ವಚ್ಛತೆ ಮಾಡುವ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರು ಸಲ್ಲಿಸುತ್ತಿರುವ ಅಪರಿಮಿತ ಸೇವೆ ಶ್ಲಾಘನೀಯವಾಗಿದೆ.

ರೋಣ: ನಗರ ಸೌಂದರ್ಯ ವೃದ್ಧಿ, ಸ್ವಚ್ಛತೆಗೆ ಪೌರಕಾರ್ಮಿಕರೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಮಂಗಳವಾರ ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ 14ನೇ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಘನತ್ಯಾಜ್ಯ, ಕಸ, ಪ್ಲಾಸ್ಟಿಕ್, ಹಾಳೆ, ಕಸಕಡ್ಡಿ ತೆಗೆದು ಸ್ವಚ್ಛತೆ ಮಾಡುವ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರು ಸಲ್ಲಿಸುತ್ತಿರುವ ಅಪರಿಮಿತ ಸೇವೆ ಶ್ಲಾಘನೀಯವಾಗಿದೆ. ಈ ಹಿಂದೆ ರೋಣ ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿತ್ತು. ಆದರೆ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದ ಕಾರಣ ಆ ಯೋಜನೆ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಆದರೆ ಸದ್ಯ ಮತ್ತೆ ಆ ಯೋಜನೆ ಮುನ್ನೆಲೆಗೆ ಬಂದಿದ್ದು, ಈಗಾಗಲೇ ರೋಣ ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಒಳಚರಂಡಿ ನಿರ್ಮಿಸುವ ಮೂಲಕ ಪೌರಕಾರ್ಮಿಕರ ಕೆಲಸ ಸಲೀಸಾಗುವಂತೆ ಕ್ರಮ ಕೈಗೊಳ್ಳಲಾಗುವುದು‌ ಎಂದರು

ಪ್ರಾಸ್ತಾವಿಕವಾಗಿ ಪುರಸಭೆ ಉಪಾಧ್ಯಕ್ಷ ಹನುಮಂತ ತಳ್ಳಿಕೇರಿ ಮಾತನಾಡಿ, ಪೌರಕಾರ್ಮಿಕರಿಗೆ ಆರೋಗ್ಯ ವಿಮೆ ನೀಡಲಾಗಿದ್ದು, ಅದರ ಮೊತ್ತವನ್ನು ಸರ್ಕಾರ ಹೆಚ್ಚಿಸಬೇಕು. ಹಲವು ಪೌರಕಾರ್ಮಿಕರು ಇನ್ನೂ ದಿನಗೂಲಿ ಹಾಗೂ ತಾತ್ಕಾಲಿಕ ಸೇವೆಯಲ್ಲಿದ್ದು, ಅಂಥ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಗಳು ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕು ಎಂದರು.ಪೌರಕಾರ್ಮಿಕರಾದ ನಿಂಗಪ್ಪ ದೊಡ್ಡಮನಿ, ಪರಸಪ್ಪ ಛಲವಾದಿ, ಬಸವರಾಜ ಜೋಗನ್ನವರ, ಪ್ರಕಾಶ ಯಡಿಯಾಪುರ, ಜಗದೀಶ ಛಲವಾದಿ, ಸಿದ್ದವ್ವ ದೊಡ್ಡಮನಿ, ರೇಣವ್ವ ಛಲವಾದಿ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ರೋಣ ತಹಸೀಲ್ದಾರ್ ನಾಗರಾಜ ಕೆ., ಸದಸ್ಯರಾದ ಮುತ್ತಣ್ಣ ಗಡಗಿ, ಮಲ್ಲಯ್ಯ ಮಹಾಪುರುಷಮಠ, ಸಂತೋಷ ಕಡಿವಾಲ, ಮೌನೇಶ ಹಾದಿಮನಿ, ಯುಸೂಫ ಇಟಗಿ, ಶಫೀಕ ಮೂಗನೂರ, ವಿದ್ಯಾ ದೊಡ್ಡಮನಿ, ಬಸಮ್ಮ ಹಿರೇಮಠ, ನಿಂಗಪ್ಪ‌ ಕಾಸಪ್ಪನವರ, ಶಿವಕುಮಾರ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಸ್ವಾಗತಿಸಿದರು. ಮಾರುತಿ ಚಲವದಿ ನಿರೂಪಿಸಿ, ವಂದಿಸಿದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ