ಸ್ವಚ್ಛತೆಯ ರೂವಾರಿಗಳ ಗೌರವಿಸಿ: ಶಾಸಕ ಡಾ. ಚಂದ್ರು ಲಮಾಣಿ

KannadaprabhaNewsNetwork |  
Published : Sep 24, 2025, 01:01 AM IST
ಪೌರಕಾರ್ಮಿಕರುನ್ನು ಶಾಸಕರು ಮತ್ತು ಪುರಸಭೆಯ ಸದಸ್ಯರು ಸನ್ಮಾನಿಸಿದರು. | Kannada Prabha

ಸಾರಾಂಶ

ಪೌರಕಾರ್ಮಿಕರಿಗೆ ಸಾರ್ವಜನಿಕರು ಗೌರವ ನೀಡಬೇಕು. ಪೌರಕಾರ್ಮಿಕರು ಸ್ವಚ್ಛತೆಯ ರೂವಾರಿಗಳು.

ಲಕ್ಷ್ಮೇಶ್ವರ: ಪೌರಕಾರ್ಮಿಕರು ಸ್ವಚ್ಛತೆಯ ಹರಿಕಾರರು. ಪಟ್ಟಣ, ಪ್ರದೇಶಗಳಲ್ಲಿ ಸ್ವಚ್ಛತಗೆ ಶ್ರಮಿಸುವ ಕಾರ್ಮಿಕರ ಸೇವೆ ಅಮೂಲ್ಯ. ಪೌರಕಾರ್ಮಿಕರಿಗೆ ವರ್ಷವಿಡಿ ಗೌರವ ಸಲ್ಲಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.

ಮಂಗಳವಾರ ಪಟ್ಟಣದ ಪುರಸಭೆ ಎದುರು ನಡೆದ 14ನೇ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪೌರಕಾರ್ಮಿಕರಿಗೆ ಸಾರ್ವಜನಿಕರು ಗೌರವ ನೀಡಬೇಕು. ಪೌರಕಾರ್ಮಿಕರು ಸ್ವಚ್ಛತೆಯ ರೂವಾರಿಗಳು. ಪಟ್ಟಣದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಕೊಡುಗೆ ಅಮೂಲ್ಯ. ಸರ್ಕಾರ ಪೌರಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡುವುದು ಅಗತ್ಯವಾಗಿದೆ. ಪೌರಕಾರ್ಮಿಕರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 11350 ಪೌರಕಾರ್ಮಿಕರನ್ನು ಕಾಯಂಗೊಳಿಸಿತ್ತು. ಪಟ್ಟಣದಲ್ಲಿ ಪೌರ ಕಾರ್ಮಿಕರ ಕೊರತೆ ಇದ್ದು, ಸರ್ಕಾರ ಹೊರಗುತ್ತಿಗೆ ಆಧಾರದಲ್ಲಿ ಪಟ್ಟಣದ ಪುರಸಭೆಗೆ ಕಾರ್ಮಿಕರನ್ನು ನೇಮಿಸುವ ಕಾರ್ಯ ಮಾಡಬೇಕು. ಲಕ್ಮೇಶ್ವರ ಪಟ್ಟಣದ ಪುರಸಭೆಯನ್ನು ನಗರಸಭೆ ಮಾಡಲು ‌ಕೆಲ ಮಾನದಂಡಗಳನ್ನು ಸರ್ಕಾರ ರೂಪಿಸಿದ್ದು, ಪುರಸಭೆಯನ್ನು ನಗರಸಭೆ ಮಾಡಲು ಸುಮಾರು 50 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯ ಅವಶ್ಯಕತೆ ಇದ್ದು, ಲಕ್ಷ್ಮೇಶ್ವರಕ್ಕೆ ಹೊಂದಿಕೊಂಡಿರುವ ಹಳ್ಳಿಗಳನ್ನು ಸೇರಿಕೊಂಡಲ್ಲಿ ಸಾಧ್ಯವಿದೆ ಎಂದರು.

ಲಕ್ಷ್ಮೇಶ್ವರ ಪಟ್ಟಣಕ್ಕೆ ಅಮೃತ - 02, ಯೋಜನೆ ಅಡಿಯಲ್ಲಿ ಸುಮಾರು ₹35 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು. ಹೊಸ ಪೈಪ್ ಲೈನ್ ಕಾಮಗಾರಿ ಮಾಡುವ ಹಾಗೂ 5 ಸಾವಿರ ಮನೆಗಳಿಗೆ ಹೊಸ ನಳ ನೀಡುವ ಕಾರ್ಯ ಶೀಘ್ರದಲ್ಲಿ ಮಾಡಲಾಗುತ್ತದೆ. ಮೇವುಂಡಿ ಗ್ರಾಮದಲ್ಲಿ ಇರುವ ಜಾಕ್ ವೆಲ್‌ನ್ನು ಹೊಳೆ ಇಟಗಿ ಗ್ರಾಮದ ಹತ್ತಿರ ಸ್ಥಳಾಂತರ ಮಾಡುವುದು ಹಾಗೂ ₹100 ಕೋಟಿ ವೆಚ್ಚದಲ್ಲಿ ಹೊಸ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸುವ ಯೋಜನೆಗೆ ನೀಲನಕ್ಷೆ ತಯಾರಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಹಾಗೂ ಸದಸ್ಯೆ ಅಶ್ವಿನಿ ಅಂಕಲಕೋಟಿ ಮಾತನಾಡಿದರು. ಸಭೆಯಲ್ಲಿ ತಹಸೀಲ್ದಾರ್ ಧನಂಜಯ ಎಂ., ಉಪಾಧ್ಯಕ್ಷ ಪಿರ್ದೋಷಿ ಆಡೂರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ, ಪುರಸಭೆ ಸದಸ್ಯೆ ಪೂರ್ಣಿಮಾ ಪಾಟೀಲ, ವಾಣಿ ಹತ್ತಿ, ಮಂಜವ್ವ ಗುಂಜಳ, ಶೋಭಾ ಮೆಣಸಿನಕಾಯಿ, ಮಹೇಶ ಹೊಗೆಸೊಪ್ಪಿನ, ಕವಿತಾ ಶೇರಸೂರಿ, ಕಿರಣ ನವಲೆ, ಪೂಜಾ ಕರಾಟೆ, ನೀಲಪ್ಪ ಪೂಜಾರ, ಮಹಾಂತೇಶ ಗುಡಸಲಮನಿ ಇದ್ದರು. ಪುರಸಭೆಯ ಅಧಿಕಾರಿ ಹನುಮಂತ ನಂದೆಣ್ಣವರ, ಮಂಜುನಾಥ ಮುದಗಲ್ಲ, ಮಂಜುಳಾ ಹೂಗಾರ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಸುರೇಶ ಪೂಜಾರ ಸ್ವಾಗತಿಸಿದರು. ಹನುಮಂತ ನಂದೆಣ್ಣವರ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಪರ್ವ ಅಂತ್ಯ - ಎಸ್.ಎಲ್. ಭೈರಪ್ಪ ನಿಧನ । ಬೆಂಗಳೂರಲ್ಲಿ ಮಧ್ಯಾಹ್ನವರೆಗೆ ಅಂತಿಮ ದರ್ಶನ
ಬ್ಯಾಂಕರ್‌ಗಳು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಿ