ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಹೊಳಲ್ಕೆರೆ ಸಮೀಪದ ಅಂತಾಪುರ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಪ್ರತಿ ಗ್ರಾಮೀಣ ಭಾಗದ ಮಗುವಿಗೆ ಉತ್ತಮ ಶಿಕ್ಷಣ ಸಿಗಬೇಕು. ಅವರು ಮೌಲ್ಯಯುತವಾಗಿ ಬೆಳೆಯಬೇಕು. ಸಮಾಜದಲ್ಲಿ ಅವರು ತಲೆ ಎತ್ತಿಕೊಂಡು ಬಾಳಬೇಕು ಎಂಬುದು ನನ್ನ ಗುರಿಯಾಗಿದೆ ಎಂದರು.ರೈತರು ಪಡುವ ಶ್ರಮ ನನಗೆ ಅರ್ಥವಾಗಿದೆ. ಆರು ವರ್ಷಗಳ ಕಾಲ ಹೊಟ್ಟೆ ಬಟ್ಟೆ ಕಟ್ಟಿ ಅಡಿಕೆ ತೋಟ ಬೆಳೆಸುತ್ತಾರೆ. ಅದು ನೀರು, ವಿದ್ಯುತ್ ಅಭಾವದಿಂದ ನಾಶವಾಗುವ ಹಂತಕ್ಕೆ ಬಂದರೆ ಅವರ ಬದುಕೇ ನಾಶವಾಗಿ ಹೋಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಮುಖ್ಯವಾಗಿ ಬೇಕಾದ ನೀರು ಮತ್ತು ವಿದ್ಯುತ್ ನೀಡುವ ಯೋಜನೆಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಪರಿಣಾಮವಾಗಿ ಚಿಕ್ಕಜಾಜೂರು ಸಮೀಪ ಕೋಟೆಹಾಳ್ ಗ್ರಾಮದಲ್ಲಿ ದೊಡ್ಡದಾದ ವಿದ್ಯುತ್ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದರು.
ತಾಲೂಕಿನ ಹಲವು ಕೆರೆಗಳಿಗೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ನೀರು ಒದಗಿಸಲಾಗುವುದು. ವಾಣಿ ವಿಲಾಸ ಸಾಗರದಿಂದ ಶುದ್ಧ ಕುಡಿಯುವ ನೀರನ್ನು ತಂದು ಪ್ರತಿ ಮನೆಗೆ ನೀಡಲಾಗುವುದು. ಅದಕ್ಕಾಗಿ ಯೋಜನೆಯ ಕೆಲಸ ಸಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಹೊಳಲ್ಕೆರೆ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಶ್ರೀ ಸಿದ್ದೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ತಿಪ್ಪಣ್ಣ, ಮಾಚಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ರಂಗಪ್ಪ,ಶ್ರೀ ಡಿ. ಸಿ. ಮೋಹನ್, ಶ್ರೀ ಬಸವರಾಜ್ ನಾಯ್ಕ, ಶ್ರೀ ಲೋಕೇಶ್ ,ಶ್ರೀ ತಿಪ್ಪೇಶ್ ನಾಯ್ಕ,ಶ್ರೀ ರಾಜಣ್ಣ,ಶ್ರೀ ಪರಮೇಶಣ್ಣ,ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು,
ರಾಜಕಾರಣಿಯಾದವನು ಚುನಾವಣೆ ವೇಳೆ ಹೀಗೆ ಬಂದ, ಮರುಳು ಮಾಡಿ ಜನರನ್ನು ನಂಬಿಸಿದ, ಓಟು ಹಾಕಿಸಿಕೊಂಡು ಗೆದ್ದ ಮೇಲೆ ಜನರ ಕಡೆ ತಿರುಗಿ ನೋಡಲಿಲ್ಲ. ಅಂತಹ ಮನೋಭಾವ ಇದ್ದರೆ ಮತದಾರರು ಒಪ್ಪುವುದಿಲ್ಲ. ಆದ್ಧರಿಂದ ಕ್ಷೇತ್ರದ ಎಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ. ನನಗೆ ಕ್ಷೇತ್ರದಲ್ಲಿ ೪೯೩ ಎಮ್ಮೆಗಳಿವೆ, ನಾಲ್ಕಾರು ಎಮ್ಮೆಗಳು ಹಾಲು ಕೊಡದೆ ಒದ್ದುಕೊಳ್ಳುತ್ತವೆ. ಅಂತಹವನ್ನೂ ಸಹ ಜೊತೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿರುವೆ ಎಂದು ಸೂಚ್ಯವಾಗಿ ತಿವಿದರು.