ಎಸ್‌ಐಆರ್‌ಗೆ ಸಾರ್ವಜನಿಕರು ಸಹಕರಿಸಿ: ರುದ್ರೇಶ್ ಕೆ.

KannadaprabhaNewsNetwork |  
Published : Jun 06, 2026, 01:45 AM IST
೪ಶಿರಾ೧:  ಶಿರಾ ನಗರಸಭಾ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ನೊಂದಣಾಧಿಕಾರಿಗಳು ಹಾಗೂ ಪೌರಾಯುಕ್ತರಾದ ರುದ್ರೇಶ್.ಕೆ ಮಾಹಿತಿ ನೀಡಿದರು.   | Kannada Prabha

ಸಾರಾಂಶ

೨೦೨೫ರ ಮತದಾರರ ಪಟ್ಟಿಯಲ್ಲಿರುವಂತೆ ಸಂಬಂಧಿಸಿದ ಮಾಹಿತಿ ಈಗಾಗಲೇ ಮುದ್ರಣವಾಗಿದೆ. ಉಳಿದ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ಆ ಮನೆಯ ಮತದಾರರು ತುಂಬಿ ನಿರ್ದಿಷ್ಟ ದಾಖಲೆಯೊಂದಿಗೆ ಮರಳಿ ಮತಗಟ್ಟೆ ಅಧಿಕಾರಿಗೆ ನೀಡಬೇಕು.

ಜೂನ್ ೩೦ರಿಂದ ಜುಲೈ ೨೯ರವರೆಗೆ ಮನೆ ಮನೆ ಭೇಟಿ । ನಮೂನೆ ಭರ್ತಿ ಮಾಡಿ ಸಲ್ಲಿಸಿದಲ್ಲಿ ಮಾತ್ರ ನಿಮ್ಮ ಹೆಸರು

ಕನ್ನಡಪ್ರಭ ವಾರ್ತೆ ಶಿರಾಜೂ. ೩೦ರಿಂದ ಆರಂಭವಾಗಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ನೀಡುವ ಗಣತಿ ನಮೂನೆ ಭರ್ತಿ ಮಾಡಿ ಸಲ್ಲಿಸಿದಲ್ಲಿ ಮಾತ್ರ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರಲಿದೆ. ಮತದಾರರು ತಪ್ಪದೆ ನಮೂನೆ ಭರ್ತಿ ಮಾಡಿ ತಮ್ಮ ಮತಗಟ್ಟೆ ಅಧಿಕಾರಿಗಳಿಗೆ ಅವಧಿಯೊಳಗೆ ಸಲ್ಲಿಸಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಾರ್ವಜನಿಕರು ಸಹಕರಿಸಿ ಎಂದು ಪೌರಾಯುಕ್ತರಾದ ರುದ್ರೇಶ್.ಕೆ ತಿಳಿಸಿದ್ದಾರೆ.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ (ಎಸ್‌ಐಆರ್) ಸಂಬಂಧ ನಗರಸಭಾ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ ಮಾತನಾಡಿದರು. ೨೦೨೫ರ ಮತದಾರರ ಪಟ್ಟಿಯಲ್ಲಿರುವಂತೆ ಸಂಬಂಧಿಸಿದ ಮಾಹಿತಿ ಈಗಾಗಲೇ ಮುದ್ರಣವಾಗಿದೆ. ಉಳಿದ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ಆ ಮನೆಯ ಮತದಾರರು ತುಂಬಿ ನಿರ್ದಿಷ್ಟ ದಾಖಲೆಯೊಂದಿಗೆ ಮರಳಿ ಮತಗಟ್ಟೆ ಅಧಿಕಾರಿಗೆ ನೀಡಬೇಕು. ಒಂದೊಮ್ಮೆ ಅದನ್ನು ಸಲ್ಲಿಸದಿದ್ದಲ್ಲಿ ಅವರ ಹೆಸರು ಅಂತಿಮ ಮತದಾರರ ಪಟ್ಟಿಯಿಂದ ಹೊರಗುಳಿಯಲಿದೆ ಎಂದು ಅವರು ತಿಳಿಸಿದರು.ಮತದಾರರ ಪಟ್ಟಿ ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ. ಅಲ್ಲಿ ಕೇವಲ ಮತದಾರರ ಹೆಸರು ಸೇರ್ಪಡೆ, ತೆಗೆಯುವುದು ಹಾಗೂ ವಿಳಾಸ ಬದಲಾವಣೆ ನಡೆಯುತ್ತದೆ. ಯಾವೊಬ್ಬ ಮತದಾರರೂ ಮತದಾನದಿಂದ ಹೊರಗುಳಿಯಬಾರದು ಹಾಗೂ ಪ್ರತಿಯೊಬ್ಬರಿಗೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶ ದೊರಕಿಸುವಂತೆ ಮಾಡುವ ಉದ್ದೇಶದಿಂದ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಶಿರಾ ಕ್ಷೇತ್ರದಲ್ಲಿ ೨೩೦೫೬೬ ಮತದಾರರು:

ಶಿರಾ ಕ್ಷೇತ್ರದಲ್ಲಿ ೨೦೨೫ರ ಮತದಾರರ ಪಟ್ಟಿಯಂತೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ೧,೧೪,೫೭೧ ಹಾಗೂ ಮಹಿಳೆಯರು ೧,೧೫,೯೮೫ ಸೇರಿ ಒಟ್ಟು ೨೩೦೫೬೬ ಮತದಾರರಿದ್ದು, ಈ ಎಲ್ಲ ಮತದಾರರ ಗಣತಿಯೂ ಸಮಗ್ರ ಪರಿಷ್ಕರಣೆಯಲ್ಲಿ ಆಗಲಿದೆ. ಈ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿದ್ದು, ಮೃತಪಟ್ಟವರ ಹೆಸರು ಕೈಬಿಡುವ, ೧೮ ತುಂಬಿರುವ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಹಾಗೂ ಸ್ಥಳಾಂತರಗೊಂಡ ಮತದಾರರು ಸೇರಿದಂತೆ ಸಂಪೂರ್ಣ ಪಟ್ಟಿಯ ಸಮಗ್ರ ಪರಿಷ್ಕರಣೆ ಈ ಹಂತದಲ್ಲಿ ಆಗಲಿದೆ ಎಂದು ತಿಳಿಸಿದರು.

ಹೊಸ ಮತದಾರರ ನೋಂದಣಿ ಅಥವಾ ವರ್ಗಾವಣೆ ಸಂದರ್ಭದಲ್ಲಿ ನಮೂನೆ ೬/೮ ತುಂಬುವುದಾದಲ್ಲಿ ನಿರ್ದಿಷ್ಟಪಡಿಸಿರುವ ೧೨ ದಾಖಲೆಗಳಲ್ಲಿ ಒಂದನ್ನು ಘೋಷಣಾ ನಮೂನೆಯೊಂದಿಗೆ ಸ್ವಯಂ ದೃಢೀಕರಿಸಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಮತದಾರರ ನೊಂದಣಾಧಿಕಾರಿಗಳು ಹಾಗೂ ತಹಸೀಲ್ದಾರ್ ಆನಂದ್ ಕುಮಾರ್, ಎಸ್.ಐ.ಆರ್. ಐ.ಇ.ಸಿ. ಚಟುವಟಿಕೆಯ ನೋಡಲ್ ಅಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಆರ್, ಸಹಾಯಕ ನೋಡಲ್ ಅಧಿಕಾರಿಗಳು ಹಾಗೂ ಬಿಇಒ ಕೃಷ್ಣಪ್ಪ, ಸಿಡಿಪಿಓ ಹರಿಪ್ರಸಾದ್, ನಗರ ನೋಡಲ್ ಅಧಿಕಾರಿ ಶಾರದ ಹಾಜರಿದ್ದರು. ೪ಶಿರಾ೧: ಶಿರಾ ನಗರಸಭಾ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ನೊಂದಣಾಧಿಕಾರಿಗಳು ಹಾಗೂ ಪೌರಾಯುಕ್ತರಾದ ರುದ್ರೇಶ್.ಕೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮೀರ್‌ ಅಹಮದ್‌ಗೆ ಡಿಸಿಎಂ ಸ್ಥಾನ ನೀಡಿ
ಬಿಕೆ ಹರಿಪ್ರಸಾದ್‌ಗೆ ಈಡಿಗರ ಸಂಘದ ಅಭಿನಂದನೆ