ಭಾರತದ ಉದಯೋನ್ಮುಖ ತಾರೆ-2026 ಪ್ರಶಸ್ತಿಗೆ ಪೂರ್ವಿ ಭಾಜನ

KannadaprabhaNewsNetwork |  
Published : Aug 28, 2026, 03:45 AM IST
ಚಿತ್ರ 27ಬಿಡಿಆರ್52 | Kannada Prabha

ಸಾರಾಂಶ

ಇಲ್ಲಿನ ಗುರು ನಗರದಲ್ಲಿರುವ ಗುರು ನಾನಕ್ ದೇವ್ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಬಿರಾದಾರ್ ಅವರು ಪುಣೆಯ ಚಿಂಚ್‌ವಾಡ್‌ನ ಎಲ್ಪ್ರೊ ಮಾಲ್‌ನಲ್ಲಿ ಆ. 21ರಿಂದ 23ರವರೆಗೆ ನಡೆದ “ಭಾರತದ ಉದಯೋನ್ಮುಖ ತಾರೆ-2026 ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಮಕ್ಕಳ ವಿಭಾಗದ 2ನೇ ವಯೋಮಾನದ (9–14 ವರ್ಷ) ವಿಜೇತರಾಗಿ ಹೊರಹೊಮ್ಮಿದ್ದಾರೆ.

ಬೀದರ್: ಇಲ್ಲಿನ ಗುರು ನಗರದಲ್ಲಿರುವ ಗುರು ನಾನಕ್ ದೇವ್ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಬಿರಾದಾರ್ ಅವರು ಪುಣೆಯ ಚಿಂಚ್‌ವಾಡ್‌ನ ಎಲ್ಪ್ರೊ ಮಾಲ್‌ನಲ್ಲಿ ಆ. 21ರಿಂದ 23ರವರೆಗೆ ನಡೆದ “ಭಾರತದ ಉದಯೋನ್ಮುಖ ತಾರೆ-2026 ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಮಕ್ಕಳ ವಿಭಾಗದ 2ನೇ ವಯೋಮಾನದ (9–14 ವರ್ಷ) ವಿಜೇತರಾಗಿ ಹೊರಹೊಮ್ಮಿದ್ದಾರೆ.

ಈ ಸ್ಪರ್ಧೆಯಲ್ಲಿ ಮಕ್ಕಳನ್ನು ಎರಡು ವಯೋಮಾನದ ಗುಂಪುಗಳಾಗಿ ವಿಂಗಡಿಸಲಾಗಿತ್ತು. ಮೊದಲನೆಯದಾಗಿ 5 ರಿಂದ 8 ವರ್ಷ ಮತ್ತು ಎರಡನೆಯದಾಗಿ 9 ರಿಂದ 14 ವರ್ಷ ವಯೋಮಾನದ ವಿಭಾಗವಾಗಿತ್ತು.

ಸ್ಪರ್ಧೆಯ ಮೊದಲ ಹಂತದ ಸಾಂಸ್ಕೃತಿಕ ಸುತ್ತಿನಲ್ಲಿ ಎರಡು ಸುತ್ತುಗಳನ್ನು ಆಯೋಜಿಸಲಾಗಿತ್ತು. ಈ ಸುತ್ತಿನಲ್ಲಿ ಪೂರ್ವಿ ಬಿರಾದಾರ್ ಅವರು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮೈಸೂರು ಚಾಮುಂಡೇಶ್ವರಿ ದೇವಿಯ ರೂಪವನ್ನು ಅತ್ಯಂತ ಆಕರ್ಷಕವಾಗಿ ಪ್ರತಿನಿಧಿಸಿ ಮೆಚ್ಚುಗೆ ಪಡೆದರು.

ಸ್ಪರ್ಧೆಯಲ್ಲಿ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಉಪಶೀರ್ಷಿಕೆ ಗೆದ್ದ ಅವರು, ದೇಶದ ವಿವಿಧ ಸ್ಪರ್ಧೆಗಳ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿ ವಿಜೇತರಾಗಿ ಆಯ್ಕೆಯಾಗಿದ್ದಾರೆ.

ಜಿ.ಎನ್.ಡಿ.ಪಿ. ಶಾಲೆ ಅಧ್ಯಕ್ಷೆ ರೇಷ್ಮಾ ಕೌರ್ ಅವರು ಅಭಿನಂದನೆ ಸಲ್ಲಿಸಿ, ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಅವರ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವನ್ನು ಶ್ಲಾಘಿಸಿದರು.

ಪೂರ್ವಿ ಸಾಧನೆಗೆ ಪ್ರಾಂಶುಪಾಲೆ ಶರ್ಲಿ ಶೀಬಾ ಕೂಡಾ ಹೆಮ್ಮೆ ವ್ಯಕ್ತಪಡಿಸಿ, ಹೆತ್ತವರನ್ನು ಹೆಮ್ಮೆ ಪಡುವಂತೆ ಮಾಡುವುದಲ್ಲದೆ, ನಮ್ಮ ಶಾಲೆಗೆ ದೊಡ್ಡ ಗೌರವನ್ನು ತಂದಿದ್ದಾಳೆ ಎಂದು ಬಣ್ಣಿಸಿದರು. ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಕೆರೆ ಗ್ರಾಮದಿಂದ ಪಾದಯಾತ್ರೆ ಆರಂಭ: ದತ್ತ
ವಿಶೇಷಚೇತನರಿಗೆ ತಕ್ಷಣ ಮನೆ ಮಂಜೂರು ಮಾಡಿ: ಸೂರ್ಯಕಾಂತ್ ನಾಗಮಾರಪಳ್ಳಿ