ವಿದ್ಯಾಭ್ಯಾಸದ ಮಹತ್ವ ಸಾರಿದ್ದ ನಾರಾಯಣ ಗುರು: ಅಶೋಕ್ ರೈ

KannadaprabhaNewsNetwork |  
Published : Sep 05, 2026, 02:45 AM IST
ಫೊಟೋ: ೨೮ಪಿಟಿಆರ್-ನಾರಾಯಣ ಗುರುಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದರು.  | Kannada Prabha

ಸಾರಾಂಶ

ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ಅವರ ಕೊಟ್ಟಿರುವ ಕೊಡುಗೆ ಅಪಾರ. ಗುಣಮಟ್ಟದ ಶಿಕ್ಷಣ ವ್ಯಕ್ತಿಗೆ ಸಿಕ್ಕಾಗ ಅಭಿವೃದ್ಧಿ ಸಾಧ್ಯ ಎಂಬುದನ್ನು ಒತ್ತಿ ಹೇಳಿದ ನಾರಾಯಣ ಗುರುಗಳ ಸಿದ್ಧಾಂತಗಳ ಪಾಲನೆ ಆಗಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ಅವರ ಕೊಟ್ಟಿರುವ ಕೊಡುಗೆ ಅಪಾರ. ಗುಣಮಟ್ಟದ ಶಿಕ್ಷಣ ವ್ಯಕ್ತಿಗೆ ಸಿಕ್ಕಾಗ ಅಭಿವೃದ್ಧಿ ಸಾಧ್ಯ ಎಂಬುದನ್ನು ಒತ್ತಿ ಹೇಳಿದ ನಾರಾಯಣ ಗುರುಗಳ ಸಿದ್ಧಾಂತಗಳ ಪಾಲನೆ ಆಗಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಪುತ್ತೂರು ಸಹಯೋಗದಲ್ಲಿ ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ ನೇ ಜಯಂತಿ ದಿನಾಚರಣೆಯನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾಜಿಕ ಕ್ರಾಂತಿಯ ದಾರ್ಶನಿಕ: ಗುರು ಸಂದೇಶ ನೀಡಿದ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಅವರು ರಾಜಾಡಳಿತ, ಧರ್ಮಾಡಳಿತದ ಸಮಯದಲ್ಲಿ ಸಾಮಾಜಿಕ ಅಸಮಾನತೆ ಇದ್ದ ಸಂದರ್ಭದಲ್ಲಿ ನಾರಾಯಣ ಗುರುಗಳೆಂಬ ಓರ್ವ ದಾರ್ಶನಿಕನ ಉದಯವಾಯಿತು ಎಂದರು.

ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ ನಾರಾಯಣ ಗುರುಗಳ ತತ್ವ, ಆದರ್ಶ ಜಗತ್ತು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಎಸ್.ಬಿ.ಕೂಡಲಗಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರಸಭಾ ಪೌರಾಯುಕ್ತೆ ವಿದ್ಯಾ ಕಾಳೆ ಉಪಸ್ಥಿತರಿದ್ದರು. ಬಿಲ್ಲವ ಸಮುದಾಯದ ಪ್ರಮುಖರಾದ ಆರ್.ಸಿ.ನಾರಾಯಣ, ಶಶಿಧರ್ ಕಿನ್ನಿಮಜಲು, ಡಾ. ರಾಜಾರಾಂ ಕೆ.ಬಿ. , ಜಯಂತ ನಡುಬೈಲು, ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಕೃಷ್ಣ ಪ್ರಸಾದ್ ಆಳ್ವ, ಮೌರಿಸ್ ಮಾಸ್ಕರೇನಸ್ ಪಾಲ್ಗೊಂಡಿದ್ದರು. ಉಪ ತಹಸೀಲ್ದಾರ್ ರವಿ ಕುಮಾರ್ ನಾಡಗೀತೆ ಹಾಡಿದರು. ಕಂದಾಯ ಇಲಾಖೆ ವಿಷಯ ನಿರ್ವಾಹಕ ಡಿ.ಟಿ. ದಯಾನಂದ ಸ್ವಾಗತಿಸಿದರು. ಶ್ರೀಕಲಾ ಕಾರಂತ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾತ್ಕಾಲಿಕ ಆಸ್ಪತ್ರೆ ತೆರೆಯಲು ತಾಲೂಕು ಆರೋಗ್ಯ ಅಧಿಕಾರಿಯವರ ನೇತೃತ್ವದಲ್ಲಿ ರಕ್ಷಾ ಸಮಿತಿ ಸಭೆ
ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಪ್ರೋತ್ಸಾಹ