ಸ್ನೇಹಿತೆ ವಿಚಾರವಾಗಿ ಗೆಳೆಯರ ಕಿತ್ತಾಟ : ಕಲ್ಲುಎತ್ತಿ ಹಾಕಿ ಒಬ್ಬ ಹತ್ಯೆ

KannadaprabhaNewsNetwork |  
Published : Apr 26, 2026, 03:00 AM IST
Crime

ಸಾರಾಂಶ

ತಮ್ಮ ಸ್ನೇಹಿತೆ ವಿಚಾರವಾಗಿ ಇಬ್ಬರು ಗೆಳೆಯರ ನಡುವಿನ ಕಿತ್ತಾಟವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟಾಲಮ್ಮ ಲೇಔಟ್ ನಿವಾಸಿ ರಾಮಚಂದ್ರ (46) ಕೊಲೆಯಾದ ದುರ್ದೈವಿ.

  ಬೆಂಗಳೂರು :  ತಮ್ಮ ಸ್ನೇಹಿತೆ ವಿಚಾರವಾಗಿ ಇಬ್ಬರು ಗೆಳೆಯರ ನಡುವಿನ ಕಿತ್ತಾಟವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟಾಲಮ್ಮ ಲೇಔಟ್ ನಿವಾಸಿ ರಾಮಚಂದ್ರ (46) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಕೂಲಿ ಕಾರ್ಮಿಕ ಹರೀಶ್‌ನನ್ನು ಬಂಧಿಸಲಾಗಿದೆ. ತಮ್ಮ ಮನೆ ಹತ್ತಿರದಲ್ಲಿರುವ ಸ್ನೇಹಿತೆ ಮನೆಗೆ ಶುಕ್ರವಾರ ರಾತ್ರಿ ರಾಮಚಂದ್ರ ತೆರಳಿದ್ದಾಗ ಈ ಹತ್ಯೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ರಾಮಚಂದ್ರ ಮೂಲತಃ ತಮಿಳುನಾಡು ರಾಜ್ಯದವ

ಮೃತ ರಾಮಚಂದ್ರ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ಹಲವು ವರ್ಷಗಳಿಂದ ಕಾಡುಗೋಡಿ ಹತ್ತಿರದ ಪಟಾಲಮ್ಮ ಲೇಔಟ್‌ನಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ವಾಸವಾಗಿದ್ದ. ಈರುಳ್ಳಿ ಮಾರಾಟ ಮಳಿಗೆಯಲ್ಲಿ ಲಾರಿ ಚಾಲಕನಾಗಿದ್ದ ಆತನಿಗೆ ಅದೇ ಮಳಿಗೆಯ ಕೆಲಸ ಮಾಡುತ್ತಿದ್ದ ಮಹಿಳೆ ಪರಿಚಯವಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತೊರೆದು ಆಕೆ ಏಕಾಂಗಿಯಾಗಿ ವಾಸವಾಗಿದ್ದಳು.

ಸ್ನೇಹವು ಅಕ್ರಮ ಸಂಬಂಧಕ್ಕೆ ತಿರುಗಿದೆ

ಈ ಸ್ನೇಹವು ಅಕ್ರಮ ಸಂಬಂಧಕ್ಕೆ ತಿರುಗಿದೆ. ಇನ್ನು ಹೊಸಕೋಟೆ ತಾಲೂಕಿನ ಹರೀಶ್ ಕೂಡ ಅದೇ ಏರಿಯಾದಲ್ಲಿ ವಾಸವಾಗಿದ್ದ. ಆತ ಸಹ ಪತ್ನಿಯಿಂದ ಪ್ರತ್ಯೇಕವಾಗಿದ್ದ. ಹಲವು ದಿನಗಳಿಂದ ಹರೀಶ್ ಜತೆ ಸಹ ಕೂಲಿ ಕಾರ್ಮಿಕ ಮಹಿಳೆಗೆ ಸ್ನೇಹವಾಗಿತ್ತು. ಈ ಗೆಳತಿ ವಿಚಾರವಾಗಿ ರಾಮಚಂದ್ರ ಹಾಗೂ ಹರೀಶ್ ಮಧ್ಯೆ ಮನಸ್ತಾಪವಾಗಿತ್ತು. ತನ್ನ ಗೆಳತಿ ಮನೆಗೆ ರಾಮಚಂದ್ರ ಬಂದು ಹೋಗುತ್ತಿದ್ದದ್ದು ಆತನಿಗೆ ಸಿಟ್ಟು ತರಿಸಿತ್ತು. ಇದೇ ವಿಷಯವಾಗಿ ಪರಸ್ಪರ ಜಗಳವಾಡಿದ್ದರು. ಅಂತೆಯೇ ಸ್ನೇಹಿತೆ ಮನೆಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಮರಳಿ ಬಂದು ದೇವಾಲಯದ ಬಳಿ ರಾಮಚಂದ್ರ ಮರಳಿದ್ದ. ಆಗ ಆತನ ಮೇಲೆ ಕಲ್ಲು ಎತ್ತಿ ಹಾಕಿ ಹರೀಶ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಭದ್ರಗಿರಿ ಬೆಟ್ಟದಲ್ಲಿ ಧರ್ಮಭೂಷಣ ಜಿನೈಕ್ಯ
ವಿದ್ಯುತ್ ಖಾಸಗೀಕರಣ: ತೀವ್ರಗೊಂಡ ವಿರೋಧ