ಮಳೆ: ಕೊಟ್ಟಿಗೆ ಬಿದ್ದು 20 ಕುರಿ ಸಾವು

KannadaprabhaNewsNetwork |  
Published : Nov 07, 2023, 01:30 AM IST
ಚಿಕ್ಕಮಗಳೂರು ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ತಮ್ಮೇಗೌಡ ಅವರಿಗೆ ಸೇರಿರುವ ಕುರಿ ಕೊಟ್ಟಿಗೆ ನಿರಂತರವಾಗಿ ಸುರಿದ ಮಳೆಗೆ ಕುಸಿದು ಬಿದ್ದು ಕುರಿಗಳು ಮೃತಪಟ್ಟಿರುವುದು. | Kannada Prabha

ಸಾರಾಂಶ

ಮಳೆ: ಕೊಟ್ಟಿಗೆ ಬಿದ್ದು 20 ಕುರಿ ಸಾವು

ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಭಾನುವಾರ ರಾತ್ರಿ ಮಳೆಯಾಗಿದ್ದು, ಕೊಟ್ಟಿಗೆ ಬಿದ್ದ ಪರಿಣಾಮ ಅದರೊಳಗಿದ್ದ 20 ಕುರಿಗಳು ಮೃತಪಟ್ಟಿರುವ ಘಟನೆ ಸಂಭವಿಸಿದೆ.ಚಿಕ್ಕಮಗಳೂರು ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿರುವ ತಮ್ಮೇಗೌಡ ಅವರಿಗೆ ಸೇರಿರುವ ಕುರಿ ಕೊಟ್ಟಿಗೆ ನಿರಂತರವಾಗಿ ಸುರಿದ ಮಳೆಗೆ ಕುಸಿದು ಬಿದ್ದಿದೆ. ಇದರೊಳಗೆ ಇದ್ದ 20 ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು ಸುಮಾರು 2 ಲಕ್ಷ ರು.ನಷ್ಟು ನಷ್ಟ ಸಂಭವಿಸಿದೆ. ಇದರ ಜತೆಗೆ ಕೊಟ್ಟಿಗೆಗೂ ಹಾನಿಯಾಗಿದೆ.ಸ್ಥಳಕ್ಕೆ ಜಿಲ್ಲಾ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್.ಮಹೇಶ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.ಸ್ಥಳದಲ್ಲೇ ಇದ್ದ ಕಂದಾಯ ಅಧಿಕಾರಿ ಸಂತೋಷ್‌ಕುಮಾರ್ ಹಾಗೂ ಕುರಿ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ವಿಶ್ವನಾಥ್ ಗೆ ಕಾನೂನು ಬದ್ಧವಾಗಿ ಕುರಿಗಾರರಿಗೆ ನೀಡಬೇಕಾದ ಪರಿಹಾರ ಹಣವನ್ನು ಕೂಡಲೇ ದೊರಕಿಸಿ ಕೊಡುವಂತೆ ಸೂಚಿಸಿದರು. 6 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ತಮ್ಮೇಗೌಡ ಅವರಿಗೆ ಸೇರಿರುವ ಕುರಿ ಕೊಟ್ಟಿಗೆ ನಿರಂತರವಾಗಿ ಸುರಿದ ಮಳೆಗೆ ಕುಸಿದು ಬಿದ್ದು ಕುರಿಗಳು ಮೃತಪಟ್ಟಿರುವುದು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ