ಕೊಪ್ಪಳ: ಜಿಲ್ಲಾದ್ಯಂತ ರಂಜಾನ್ ಮಾಸದ ಕೊನೆಯ ದಿನವಾದ ಸೋಮವಾರ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಈಸ್ ಉಲ್ ಫಿತ್ರ್ ಹಬ್ಬವನ್ನು ಆಚರಿಸಿದರು.
ಜಿಲ್ಲಾ ಕೇಂದ್ರ ಕೊಪ್ಪಳ ನಗರಸಭೆಯ ಈದ್ಗಾ ಮೈದಾನ, ಹುಲಿಕೆರೆಯ ದಡದ ಈದ್ಗಾ ಮೈದಾನ ಸೇರಿದಂತೆ ಹತ್ತಾರು ಕಡೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಬಳಿಕ ಪರಸ್ಪರ ಶುಭ ಕೋರಿದರು.ನಗರಸಭೆಯ ಬಳಿಯ ಈದ್ಗಾ ಮೈದಾನದಲ್ಲಿ ಖಾಜಿ ಅಬ್ಬಾಸ್ ಅಲಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿ ಪ್ರಾರ್ಥನೆ ಗೈದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಡಿ.ಆಶಿಫ್ ಕರ್ಕಿಹಳ್ಳಿ, ಕರ್ನಾಟಕ ಮುಸ್ಲಿಂ ಯುನಿಟಿ ಜಿಲ್ಲಾಧ್ಯಕ್ಷ ಎಂ.ಡಿ.ಜಿಲಾನ ಕಿಲ್ಲೆದಾರ್ (ಮೈಲೈಕ,), ಸೈಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ. ಸೈಯದ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ಹಿರಿಯ ನ್ಯಾಯವಾದಿ ಆಸಿಫ್ ಅಲಿ ಪೀರಾ ಹುಸೇನ್ ಹೊಸಳ್ಳಿ, ಯುವ ನಾಯಕ ಸೈಯದ್ ಮೆಹಮೂದ ಹುಸೇನಿ ಬಲ್ಲೆ, ಮಾನ್ವಿ ಪಾಷಾ ಸೇರಿದಂತೆ ಸಹಸ್ರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.ಮುಸ್ಲಿಂ ಬಾಂಧವರು ಸಣ್ಣ ಸಣ್ಣ ಮಕ್ಕಳೊಂದಿಗೆ ಹೊಸ ಬಟ್ಟೆ ಧರಿಸಿಕೊಂಡು ಬಂದಿದ್ದರಲ್ಲದೆ,ದಾರಿಯುದ್ದಕ್ಕೂ ಜಾತಿ,ಧರ್ಮ ಮೀರಿ ಎಲ್ಲರಿಗೂ ಶುಭ ಕೋರುತ್ತಿದ್ದರು. ಮುಸ್ಲಿಂ ಬಾಂಧವರನ್ನು ಇತರೇ ಸಮುದಾಯದವರು ರಂಜಾನ್ ನಿಮಿತ್ತ ಶುಭ ಕೋರುತ್ತಿರುವುದು ಕಂಡು ಬಂದಿತು.
ಸಂಸದ ಕೆ. ರಾಜಶೇಖರ್ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಜೆಡಿಎಸ್ ರಾಜ್ಯ ನಾಯಕ ಸಿ.ವಿ.ಚಂದ್ರಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಪಂ ಮಾಜಿ ಸದಸ್ಯ ಪ್ರಸನ್ನ ಗಡಾದ್ , ಅಮರೇಶ್ ಕರಡಿ, ಶರಣಪ್ಪ ಸಜ್ಜನ್, ವಿರೂಪಾಕ್ಷಪ್ಪ ನವೋದಯ ಸೇರಿದಂತೆ ಹಲವಾರು ಗಣ್ಯರು ಪ್ರಾರ್ಥನೆಯ ವೇಳೆಯಲ್ಲಿ ಇದ್ದು, ನಂತರ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು.ಹುಲಿಕೆರಿ ಬಳಿ ರಂಜಾನ್ ಆಚರಣೆ
ಕೊಪ್ಪಳ ನಗರದ ಹುಲಿಕೇರಿ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಮುಕ್ತಿ ನಜೀರ್ ಅಹಮ್ಮದ್ ಟಸ್ಕಿನ್ ಕುರಾನ್ ಪಠಾಣದ ಮೂಲಕ ನೇರವೇರಿಸಿದ ಬಳಿಕ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ ಶುಭ ಕೋರಿದರು.ಈ ಸಂದರ್ಭದಲ್ಲಿ ಎಸ್.ಬಿ. ನಾಗರಳ್ಳಿ, ಗವಿಸಿದ್ದಪ್ಪ ಮುದಗಲ್, ರಾಜಶೇಖರ ಆಡೂರು, ಯುವ ನಾಯಕ ಕೆ. ಸೋಮಶೇಖರ ಹಿಟ್ನಾಳ ಸಮಾಜದ ಮುಖಂಡರುಗಳಾದ ಪಾಷುಸಾಬ್ ಕತ್ತಿಬ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷ ಪಲ್ಟನ್, ಇಕ್ಬಲ್ ಸಿದ್ದಿಕಿ, ಇಬ್ರಾಹಿಮ್ ಅಡ್ಡೆವಾಲಿ,ಅಜುಮುದ್ದಿನ್ ಅತ್ತಾರ, ಜಾಫರ್ ಖಾನ್ ಹಾಗೂ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು.