ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಸ್ಥಳೀಯ ನಾಗರೀಕರ ಸಹಕಾರವನ್ನೂ ಕೋರಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಸ್ಥಳೀಯ ಗಣ್ಯರ ಸಭೆ ನಡೆಸಿ ಸಮಿತಿ ರಚಿಸ ಲಾಗಿದೆ. ಈ ಸಮಿತಿಗಳು ಜಾತ್ರಾ ಮಹೋತ್ಸವದಲ್ಲಿ ಕಾರ್ಯನಿರ್ವಹಿಸಬೇಕಿದ್ದು ವಿವಿಧ ಜವಾಬ್ದಾರಿ ಹಂಚಲಾಗಿದೆ.ಪ್ರಮುಖವಾಗಿ ಬಾಳೆಹೊನ್ನೂರು ಪಟ್ಟಣದ ವಿವಿಧೆಡೆ ಬ್ಯಾನರ್, ಎನ್.ಆರ್.ಪುರ ರಸ್ತೆ ಚೌಡೇಶ್ವರಿ ದೇವಸ್ಥಾನದ ಬಳಿಯಲ್ಲಿ ಮಹಾದ್ವಾರ ಅಲ್ಲಿಂದ ರಂಭಾಪುರಿ ಪೀಠದವರೆಗೆ ವಿದ್ಯುತ್ ದೀಪಾಲಂಕಾರ, ವಿವಿಧ ಕಡೆಗಳಲ್ಲಿ ಬಂಟಿಂಗ್ಸ್ ಅಳವಡಿಸಲು ತೀರ್ಮಾನಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,, ಪುಟಾಣಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ, ಜವಾಬ್ದಾರಿ ಯನ್ನು ಸಮಿತಿಯ ಯುವಕರಿಗೆ ನೀಡಲಿದೆ ಎಂದರು.ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಈಗಾಗಲೇ ರಚನೆಗೊಂಡ ಸಮಿತಿಗೆ ಊರಿನ ಪ್ರಮುಖರು ಕೈ ಜೋಡಿಸಬೇಕಿದೆ. ಆಹ್ವಾನಪತ್ರಿಕೆ, ಕರಪತ್ರಗಳನ್ನು ಮನೆ ಮನೆಗೆ ತಲುಪಿಸಲಾಗುವುದು ಎಂದರು.
ವ್ಯವಸ್ಥಾಪಕ ಚಂದ್ರಶೇಖರ್, ಎಚ್.ಆರ್.ಆನಂದ್, ಪ್ರಮುಖರಾದ ಬಿ.ಕೆ.ಮಧುಸೂದನ್, ಬಿ.ಜಗದೀಶ್ಚಂದ್ರ, ಹಿರಿಯಣ್ಣ, ಕೌಶಿಕ್ ಪಟೇಲ್, ಕೆ.ಕೆ.ವೆಂಕಟೇಶ್, ಎಂ.ಆರ್.ಬಾಲಕೃಷ್ಣ, ಸಿ.ವಿ.ಸುನೀಲ್, ಬಿ.ಎಸ್.ಸಾಗರ್, ಮಂಜುನಾಥ್ ತುಪ್ಪೂರು, ಕಾರ್ತಿಕ್ ಕಾರ್‌ಗದ್ದೆ, ಕೃಷ್ಣಭಟ್, ವಿ.ಅಶೋಕ, ಕೋಕಿಲಮ್ಮ, ಬಿ.ಎಸ್.ನಾಗರಾಜ್, ಮೋಹನ್ ಭಂಡಾರಿ, ವಿದ್ಯಾ ಎ.ಶೆಟ್ಟಿ, ಪಿಸಿಬಿ ಸಲೀಮ್, ಜ್ಯೋತಿ ಜಗದೀಶ್ ಮತ್ತಿತರರು ಹಾಜರಿದ್ದರು.೧೮ಬಿಹೆಚ್‌ಆರ್ ೨:ಬಾಳೆಹೊನ್ನೂರು ರಂಭಾಪುರಿ ಪೀಠದ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಸಮಿತಿ ಪ್ರಮುಖರ ಸಭೆ ನಡೆಯಿತು. ಎಂ.ಎಸ್.ಚನ್ನಕೇಶವ, ಆರ್.ಡಿ.ಮಹೇಂದ್ರ, ಚಂದ್ರಶೇಖರ್, ಎಚ್.ಆರ್.ಆನಂದ್, ಬಿ.ಕೆ.ಮಧುಸೂದನ್, ಜಗದೀಶ್ಚಂದ್ರ, ಹಿರಿಯಣ್ಣ ಇದ್ದರು.