)
ನ್ಯಾಯಾಧೀಶರ ನಿವಾಸಕ್ಕೆ ಆರೋಪಿಗಳ ಹಾಜರು
ಹಿಂದೂ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಸವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಹಿಂದೂ ಮತ್ತು ಎಸ್‌ಡಿಪಿಐ ಸಂಘಟನೆ, ಮುಖಂಡರ ವಿರುದ್ಧ ಪ್ರತ್ಯೇಕ ಎರಡು ಸೊಮೋಟೋ ಕೇಸ್ ದಾಖಲಾಗಿದೆ.
ಬಂಧಿತ ಆರೋಪಿಗಳಾದ ಯಾಸಿನ್, ಮೊಹಮದ್ ಮತೀನ್, ಅಯಾನ್, ಮುನ್ನಾವರ್ ಪಾಷಾ, ಆಕ್ಷದ್, ಹಸೇನ್ ಬಂಧಿಸಲಾಗಿದೆ. ಮಂಗಳವಾರ ತಡರಾತ್ರಿಯೇ 6 ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದ ಪೊಲೀಸರು, ನಾಲ್ವರು ಅಪ್ರಾಪ್ತ ಆರೋಪಿಗಳನ್ನು ಹಾಸನದ ರಿಮ್ಯಾಂಡ್ ಹೋಮ್‌ಗೆ ಸ್ಥಳಾಂತರಿಸಿದರು. ಉಳಿದ ಇಬ್ಬರನ್ನು ಚಿಕ್ಕಮಗಳೂರು ಜೈಲಿಗೆ ಕಳುಹಿಸಲಾಗಿದೆ.ಕಳೆದ ಸೋಮವಾರ ರಾತ್ರಿ ವಿಜಯಪುರದ ಸುಧಾ ಎಂಬ ಹಿಂದೂ ಮಹಿಳೆ ಮನೆ ಮೇಲೆ ಅಪರಿಚಿತ ಮುಸ್ಲಿಂ ಯುವಕರ ಗುಂಪಿನಿಂದ ಕಲ್ಲು ತೂರಾಟ ನಡೆದಿತ್ತು. ಈವೇಳೆ ಇಬ್ಬರು ಅಪ್ರಾಪ್ತ ಯುವಕರು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿ ದ್ದರು. ಅಪ್ರಾಪ್ತ ಯುವಕರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ವಿಷಯ ತಿಳಿಯುತ್ತಿದಂತೆ ನೂರಾರು ಮಂದಿ ಹಿಂದೂ ಮತ್ತು ಮುಸ್ಲಿಂ ಸಮು ದಾಯದವರು ಪೊಲೀಸ್ ಠಾಣೆ ಹಾಗೂ ಕಲ್ಲು ತೂರಾಟ ನಡೆದ ಸ್ಥಳದಲ್ಲಿ ಜಮಾಯಿಸಿದ್ದರಿಂದ ಇಡೀ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಲ್ಲು ತೂರಾಟಕ್ಕೆ ಸಂಬಂಧ ದೂರು ಹಾಗೂ ಪ್ರತಿ ದೂರು ಮಂಗಳವಾರ ದಾಖಲಾಗಿತ್ತು. ತನಿಖೆ ನಡೆಸುತ್ತಿರುವ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಸಂಘಟನೆಗಳ ಮೇಲೂ ಕೇಸ್: ಹಿಂದೂ ಮಹಿಳೆ ಮನೆ ಮೇಲೆ ಕಲ್ಲು ತೂರಾಟ ವೇಳೆ ಮುಸ್ಲಿಂ ಇಬ್ಬರು ಯುವಕರು ಸಿಕ್ಕಿ ಬಿದ್ದ ಕಾರಣಕ್ಕೆ ಪೊಲೀಸ್ ಠಾಣೆ ಬಳಿ ನೂರಾರು ಮಂದಿ ಜಮಾಯಿಸಿ ಉದ್ವಿಗ್ನ ಪರಿಸ್ಥಿತಿಗೆ ಕಾರಣರಾದ ಎಸ್‌ಡಿಪಿಐ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ಪೊಲೀಸರು ಸೊಮೋಟೋ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್, ಭಜರಂಗದಳ ಹಾಸನ ವಿಭಾಗದ ಸಂಚಾಲಕ ಶಾಮ್ ಗೌಡ, ಕೋಟೆ ಶಾಮ್, ಶಶಿ ಆಲ್ದೂರು, ಪುನೀತ್ ಸೇರಿ ದಂತೆ ಭಜರಂಗದಳ, ಹಿಂದೂಪರ ಸಂಘಟನೆ ಒಟ್ಟು 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿದರೆ, ಎಸ್‌ಡಿಪಿಐ ಮುಖಂಡ ಗೌಸ್ ಮುನೀರ್, ಜೀಶಾನ್, ಜಿಲಾನ್, ರಸೂಲ್ ಖಾನ್ , ಮುಸ್ಲಿಂ ಮುಖಂಡರು ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.