ರಂಗಂಪೇಟ: ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ

KannadaprabhaNewsNetwork |  
Published : Apr 27, 2024, 01:01 AM IST
 ಸುರಪುರ ನಗರಸಭೆ ವ್ಯಾಪ್ತಿಯ ರಂಗಂಪೇಟಯ ಪ್ರಿಯದರ್ಶಿನಿ ಪದವಿ ಮಹಾವಿದ್ಯಾಲಯ ಹಾಗೂ ಮೈಲಾರಲಿಂಗೇಶ್ವರ ಸ್ನಾತಕೋತ್ತರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರಾಯಚೂರು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳು ಜಾಥಾ ಕೈಗೊಳ್ಳುವ ಮೂಲಕ ಜನರದಲ್ಲಿ ಮತದಾರ ಜಾಗೃತಿ ಮೂಡಿಸಿದರು.  | Kannada Prabha

ಸಾರಾಂಶ

ಪ್ರಿಯದರ್ಶಿನಿ ಪದವಿ ಮಹಾವಿದ್ಯಾಲಯ ಹಾಗೂ ಮೈಲಾರಲಿಂಗೇಶ್ವರ ಸ್ನಾತಕೋತ್ತರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರಾಯಚೂರು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳು ಜಾಥಾ ಕೈಗೊಳ್ಳುವ ಮೂಲಕ ಜನರದಲ್ಲಿ ಮತದಾರ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ನಗರಸಭೆ ವ್ಯಾಪ್ತಿಯ ರಂಗಂಪೇಟಯ ಪ್ರಿಯದರ್ಶಿನಿ ಪದವಿ ಮಹಾವಿದ್ಯಾಲಯ ಹಾಗೂ ಮೈಲಾರಲಿಂಗೇಶ್ವರ ಸ್ನಾತಕೋತ್ತರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರಾಯಚೂರು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳು ಜಾಥಾ ಕೈಗೊಳ್ಳುವ ಮೂಲಕ ಜನರದಲ್ಲಿ ಮತದಾರ ಜಾಗೃತಿ ಮೂಡಿಸಿದರು. ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಂಶುಪಾಲ, ರಾಯಚೂರು ವಿಶ್ವವಿದ್ಯಾಲಯದ ಪರಿಷತ್ತು ಸದಸ್ಯ ಡಾ. ಮಲ್ಲಿಕಾರ್ಜುನ ಕುಲಕರ್ಣಿ ಮಾತನಾಡಿ, ಚುನಾವಣೆಗಳಲ್ಲಿ ಮತ ಚಲಾಯಿಸಿ ನಮಗೆ ಬೇಕಾದ ನಾಯಕನ ಆಯ್ಕೆ ಮಾಡಿಕೊಳ್ಳಲು ಸಂವಿಧಾನ ನಮಗೆ ಕೊಟ್ಟಿರುವ ಸುವರ್ಣ ಅವಕಾಶವಾಗಿದೆ. ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ. ಮೇ.7ರಂದು ನಡೆಯುವ ಲೋಕಸಭಾ ಮತ್ತು ಉಪ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡಬೇಕೆಂದರು. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಭೀಮಣ್ಣ ಬಿಲ್ಲವ್ ಉದ್ಘಾಟಿಸಿದರು. ಉಪನ್ಯಾಸಕ ಗುರುರಾಜ್ ಬಿಲ್ಲವ್ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ರಂಗಂಪೇಟೆಯ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಘೋಷ ವಾಕ್ಯಗಳನ್ನು ಕೂಗುತ್ತಾ ಮತದಾನದ ಜಾಗೃತಿ ಮೂಡಿಸಿದರು. ಈ ವೇಳೆ ಪ್ರಿಯದರ್ಶಿನಿ ಸ್ನಾತಕ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ನಿಂಗಣ್ಣ ಹೆಗ್ಗಣದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಮೌನೇಶ್ ಹಾವಿನಾಳ ನಿರೂಪಿಸಿದರು. ಉಪನ್ಯಾಸಕರಾದ ರಜಾಕ್ ಭಾಗವಾನ್, ಬಿ.ಜಿ. ನಾಯಕ, ಅಂಬ್ರೇಶ್ ನಾಯಕ, ಭರತ್ ಉದ್ದಾರ್, ಹನುಮಂತ್ರಾಯ ಭಜಂತ್ರಿ, ಶರಣು ಪತ್ತೇಪುರ, ಪರಮಣ್ಣ, ರಮೇಶ, ಶ್ರೀದೇವಿ ನಾಯಕ, ಅಭಿಷೇಕ್ ಬಡಗಾ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು