ಶಾರದಾ ಪಿಯು ಕಾಲೇಜಿಗೆ ದಾಖಲೆ ಫಲಿತಾಂಶ

KannadaprabhaNewsNetwork |  
Published : Apr 10, 2026, 02:00 AM IST
ಫೋಟೋಗಳು | Kannada Prabha

ಸಾರಾಂಶ

ವಿದ್ಯಾರ್ಥಿ,ಪೋಷಕರನ್ನು ಹಾಗೂ ಸಿಬ್ಬಂದಿ ವರ್ಗವನ್ನು ಶ್ರೀಶಾರದಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ವಿ.ಆರ್.ಪಾಟೀಲ ಹಾಗೂ ಕಾರ್ಯದರ್ಶಿ ಎಸ್.ಆರ್.ಪಾಟೀಲ ಶ್ಲಾಘಿಸಿದ್ದಾರೆ.

ಕೊಪ್ಪಳ: ಇಲ್ಲಿಯ ಶ್ರೀಶಾರದಾ ಪಿಯು ಕಾಲೇಜು ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತ ಸಾಧನೆ ಮಾಡಿದ್ದು, ಹಿಂದಿನ ಎಲ್ಲ ವರ್ಷಗಳಿಗಿಂತಲೂ ಅತ್ಯುತ್ತಮ ಫಲಿತಾಂಶ ಪಡೆಯುವಲ್ಲಿ ಯಸ್ವಿಯಾಗಿದೆ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ರಶ್ಮಿ 600ಕ್ಕೆ 590 ಅಂಕ ಪಡೆಯುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ.

ವಿಜ್ಞಾನ ವಿಭಾಗದಲ್ಲಿ 100% ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಕಾಲೇಜಿನ ಶೇ.50 ರಷ್ಟು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.

ಎಸ್. ಪಿ. ರಶ್ಮಿಶ್ರೀ: 590/600 (98.33%), ಮೈತ್ರಿ 97.33% , ವಿಕ್ರಮ್ ರಾಥೋಡ್ 97.33%, ಯರಗೊನೆಪ್ಪನವರ ರಂಗನಾಥ 97.00%, ಅಸ್ಮಾ ಇಲಕಲ್ 96.33% ,ತರುಣ್ ಬಿ. 95.67%

ವಿದ್ಯಾ, 95.17%, ರಿಜುಲಾ ಗಜೇಶ್ ಸಂಚೇತಿ 95.00% , ತರುಣ್ ಕುಮಾರ್ 95.00% ಫಲಿತಾಂಶ ಪಡೆದು ಸಾಧನೆಗೈದಿದ್ದಾರೆ.

ವಿಷಯವಾರು 100/100 ಸಾಧನೆ: ಗಣಿತ (6), ಗಣಕ ವಿಜ್ಞಾನ (3), ಭೌತಶಾಸ್ತ್ರ (2) ಮತ್ತು ಜೀವಶಾಸ್ತ್ರ (1) ವಿಷಯಗಳಲ್ಲಿ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ಈ ಅಮೋಘ ಸಾಧನೆಗೆ ಕಾರಣರಾದ ವಿದ್ಯಾರ್ಥಿ,ಪೋಷಕರನ್ನು ಹಾಗೂ ಸಿಬ್ಬಂದಿ ವರ್ಗವನ್ನು ಶ್ರೀಶಾರದಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ವಿ.ಆರ್.ಪಾಟೀಲ ಹಾಗೂ ಕಾರ್ಯದರ್ಶಿ ಎಸ್.ಆರ್.ಪಾಟೀಲ ಶ್ಲಾಘಿಸಿದ್ದಾರೆ.

ವಿದ್ಯಾರ್ಥಿಗಳು ನಿರೀಕ್ಷೆ ಮೀರಿ ಫಲಿತಾಂಶ ಪಡೆದಿದ್ದು, ಕಾಲೇಜಿನ ಕೀರ್ತಿ ಹೆಚ್ಚಿಸುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಲು ಶ್ರಮಿಸಿದ ಉಪನ್ಯಾಸಕ ವರ್ಗದವರ ಕಾರ್ಯವೂ ಶ್ಲಾಘನೀಯ ಎಂದು ಶಾರದಾ ಪಿಯು ಕಾಲೇಜು ಅಧ್ಯಕ್ಷ ವಿ.ಆರ್. ಪಾಟೀಲ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಫಲಿತಾಂಶ ಹೆಚ್ಚಳ ಮಾಡುತ್ತಲೇ ಇದ್ದು, ಇದು ಕಾಲೇಜಿನ ಬೆಳವಣಿಗೆಗೆ ಸಾಕ್ಷಿಯಾಗಿದೆ.ವಿದ್ಯಾರ್ಥಿಗಳ ಅತ್ಯುತ್ತಮ ಭವಿಷ್ಯರೂಪಿಸಿಕೊಳ್ಳುವಂತಾಗಲಿ ಎನ್ನುವುದೇ ನಮ್ಮ ಸಂಸ್ಥೆಯ ಸದಾಶಯ ಎಂದು ಕಾರ್ಯದರ್ಶಿ ಎಸ್. ಆರ್. ಪಾಟೀಲ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಡಪದ ಅಪ್ಪಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ
ಸಮತೋಲಿತ ಆಹಾರದಿಂದ ಉತ್ತಮ ಆರೋಗ್ಯ