- ಮಣ್ಣೆತ್ತಿನ ಅಮಾವಾಸ್ಯೆ ಪೂಜೆ ಕಾರ್ಯಕ್ರಮದಲ್ಲಿ ಸದ್ಗುರು ಶಿವಯೋಗಿ ಶ್ರೀ
ಕನ್ನಡಪ್ರಭ ವಾರ್ತೆ ನ್ಯಾಮತಿ
ಮಾನವ ಜೀವನದ ಅವಿಭಾಜ್ಯ ಅಂಗ ಧರ್ಮ. ಶಾಂತಿ- ನೆಮ್ಮದಿಯ ಬದುಕಿಗಾಗಿ ಧರ್ಮ ಆಚರಣೆ ಬೇಕು. ಪುಣ್ಯ, ಶಾಂತಿ, ನೆಮ್ಮದಿಯನ್ನು ಮಾರುಕಟ್ಟೆಗಳಲ್ಲಿ ಕೊಳ್ಳಲು ಸಾಧ್ಯವಿಲ್ಲ. ದೇಗುಲಗಳೇ ನಿಜವಾದ ನೆಮ್ಮದಿಯ ತಾಣಗಳು ಎಂದು ಗೋವಿನಕೋವಿ ಹಾಲಸ್ವಾಮೀಜಿ ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ನುಡಿದರು.ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಶ್ರೀ ಮಾತೆಂಗಮ್ಮದೇವಿ ದೇಗುಲದ ಶ್ರೀ ಮಾತೆಂಗಮ್ಮ ದೇವಿಯ ಶಿಲಾಮೂರ್ತಿಗೆ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸಿ ಅವರು ಮಾತನಾಡಿದರು.
ನಿಸರ್ಗಕ್ಕೆ ಹುಟ್ಟಿ ಬಂದಾಗ ಭೂಮಿಯ ಮೇಲಿನ ಮರವೊಂದರಿಂದ ತೊಟ್ಟಿಲು ಮನುಷ್ಯ ತಯಾರಿಸಿದರೆ, ಮರಣದ ವೇಳೆಗೆ ದೇವರು ಮರವೊಂದರಿಂದ ಚಟ್ಟ ತಯಾರು ಮಾಡಿ ಇಟ್ಟಿರುತ್ತಾನೆ. ಆದಾಯ ಸಂಪತ್ತಿನ ಭರದಲ್ಲಿ ಆರೋಗ್ಯ ಆನಂದ ಕಣ್ಮರೆಯಾಗುತ್ತಿದೆ. ಮನುಷ್ಯ ಎಲ್ಲ ಗಳಿಸುತ್ತಿದ್ದಾನೆ, ಎಲ್ಲ ಪಡೆದುಕೊಳ್ಳುತ್ತಿದ್ದಾನೆ. ಬದುಕಿನಲ್ಲಿ ನಮ್ಮ ಪಾತ್ರ ಸರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು.
- - -
ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಶ್ರೀ ಮಾತೆಂಗಮ್ಮ ದೇವಿಗೆ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಆಶೀರ್ವಚನ ನೀಡಿದರು.