ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಅಭಿವೃದ್ಧಿಗೆ ಸಹಕರಿಸಿ:ಶ್ರೀಧರ್

KannadaprabhaNewsNetwork |  
Published : Aug 11, 2025, 12:30 AM IST
10ಕೆಎಂಎನ್ ಡಿ12 | Kannada Prabha

ಸಾರಾಂಶ

ಸಹಕಾರ ಸಂಘದ ಸದಸ್ಯರು ಸಾಲ ಪಡೆದು ತಮ್ಮ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿದ ನಂತರ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಸಹಕಾರ ಸಂಘದ ಸದಸ್ಯರು ಸಾಲ ಪಡೆದು ತಮ್ಮ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿದ ನಂತರ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಡಿ.ಹಲಸಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಾಣಸಮುದ್ರ ಶ್ರೀಧರ್ ಕರೆ ನೀಡಿದರು.

ಡಿ.ಹಲಸಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ 2551 ಸದಸ್ಯರಿದ್ದು, 1768 ಮಂದಿ ಬೆಳೆ ಸಾಲ ಮತ್ತು 200 ಸದಸ್ಯರು ಎಂ.ಟಿ.ಎಲ್. ಸಾಲವನ್ನು ಪಡೆದುಕೊಂಡಿದ್ದಾರೆ. ಸಂಘವು ಪ್ರಸ್ತುತ 15 ಲಕ್ಷ ಲಾಭ ಗಳಿಸಿದೆ. ಪ್ರಸ್ತುತ ಸಾಲಿನಲ್ಲಿ 30 ಲಕ್ಷ ಬಜೆಟ್ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

2024-25 ನೇ ಸಾಲಿನ ಸಂಘದ ಆಡಿಟ್ ವರದಿ, ಪರಿಶೋಧಿಸಲ್ಪಟ್ಟಿರುವ ಸಂಘದ ಜಮಾ, ಖರ್ಚು, ಲಾಭ, ನಷ್ಟ ಮತ್ತು ಮತ್ತು ಆಸ್ತಿ-ಜವಾಬ್ದಾರಿ ತಖ್ತೆಗಳನ್ನು ಪರಿಶೀಲಿಸಿ ಅಂಗೀಕರಿಸಲಾಯಿತು. ಸಂಘದ ನಿರ್ದೇಶಕರಾದ ಡಿ.ಎಫ್.ಫಾರೂಕ್ ಪಾಷಾ, ಬಿ.ಎಂ.ರಾಮಚಂದ್ರ, ಸಿ.ದೊಡ್ಡಸ್ವಾಮಿ, ಎಚ್.ಸಿದ್ದಾಚಾರಿ, ಪುಟ್ಟಸ್ವಾಮಿ, ಜಯರಾಮೇಗೌಡ, ಎಸ್.ಸಿದ್ದಲಿಂಗೇಗೌಡ, ಮೇಲ್ವಿಚಾರಕ ಪುಟ್ಟರಾಜು, ಕಾರ್ಯದರ್ಶಿ ರವಿಚಂದ್ರ ಮತ್ತು ಶಿವಮಾದೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಎಸ್‌ಡಿಎಂಸಿ ಅಧ್ಯಕ್ಷರಾಗಿ ಬಿ.ಶಂಕರ್ ಬಾಬು ಆಯ್ಕೆ

ಶ್ರೀರಂಗಪಟ್ಟಣ:

ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಬಿ.ಶಂಕರ್ ಬಾಬು ಅವಿರೋಧವಾಗಿ ಆಯ್ಕೆಯಾದರು.

ಶಾಲೆ ಸಭಾಂಗಣದಲ್ಲಿ ಶಾಲೆ ಮುಖ್ಯ ಶಿಕ್ಷಕ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಪೋಷಕರ ಸಮ್ಮುಖದಲ್ಲಿ ಮೊದಲಿಗೆ ಶಾಲಾ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿ ನಂತರ ಸರ್ವ ಸದಸ್ಯರ ಸಭೆಯಲ್ಲಿ ಬಿ.ಶಂಕರ್ ಬಾಬು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಮುಖ್ಯ ಶಿಕ್ಷಕರು ಹಾಗೂ ಸಮಿತಿ ಸದಸ್ಯರು ಅಭಿನಂದಿಸಿದರು.

ಬಿ.ಶಂಕರ್ ಬಾಬು ಮಂಡ್ಯ ರಕ್ಷಣಾ ವೇದಿಕೆ ಸ್ಥಾಪಿಸಿ ಸಾಮಾಜಿಕ ವಾಗಿ ಕನ್ನಡಪರ ಸಂಘಟನೆಗಳ ಮೂಲಕ ಕಾವೇರಿ ನೀರು, ನೆಲ, ಭಾಷೆಗಳ ಹೋರಾಟಗಳಲ್ಲಿ ಭಾಗವಹಿಸಿ ಬಡವರು, ಹಿಂದುಳಿದವರ ಪರ ನಿಂತು ಸೇವೆ ಮಾಡಿ ತಮ್ಮ ಕೈಲಾದ ಸಹಾಯ ಮಾಡಿಕೊಂಡು ಬಂದಿದ್ದಾರೆ. ಇದೀಗ ಅವರನ್ನೇ ಈ ಶಾಲೆಗೆ ಅಧಕ್ಷರನ್ನಾಗಿ ಮಾಡಿದರೆ ಇನ್ನಷ್ಟು ಶಾಲಾಭಿವೃದ್ಧಿಗೆ ನೆರವಾಗಲಿದೆ ಎಂದು ಸದಸ್ಯ ಸುಬ್ರಮಣ್ಯ ತಿಳಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ