ಕನಕಪುರ: ಸಂಕಷ್ಟದಲ್ಲಿರುವ ಸಂತ್ರಸ್ತರರಿಗೆ ನೆರವಾಗುವುದು ಮನುಷ್ಯ ಧರ್ಮ, ಭೀಕರ ಮಳೆ ಮತ್ತು ಭೂಕುಸಿತದಿಂದ ತತ್ತರಿಸುತ್ತಿರುವ ವಯನಾಡಿನ ಸಂತ್ರಸ್ತರಿಗೆ ತಾಲೂಕಿನ ಸಾರ್ವಜನಿಕರು ಸಹಾಯ ಹಸ್ತ ಚಾಚಬೇಕು ಎಂದು ಆರ್‌ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮನವಿ ಮಾಡಿದರು.
ಸಂಸ್ಥೆಯ ವಿದ್ಯಾರ್ಥಿಗಳು, ಉಪನ್ಯಾಸಕರು ನಗರಾದ್ಯಂತ ಸಂಚರಿಸಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದೇವೆ. ತಾಲೂಕಿನ ಜನರು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕೊಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಂಸ್ಥೆ ಕಾರ್ಯದರ್ಶಿ ಪುಟ್ಟಸ್ವಾಮಿ, ಪ್ರಾಂಶುಪಾಲ ಬಾಲಕೃಷ್ಣ, ತಮ್ಮಣ್ಣಗೌಡ , ಎಸ್.ಕೆ. ಸ್ನಾತಕೋತ್ತರ ಪದವಿ ಕೇಂದ್ರದ ಎಚ್.ಸಿ.ಪಾರ್ಥಸಾರಥಿ, ಉಪನ್ಯಾಸಕ ಕಬ್ಬಾಳೇಗೌಡ, ಎನ್‌ಎಸ್‌ಎಸ್ ಅಧಿಕಾರಿ ಪ್ರಕಾಶ್, ಪತ್ರಿಕೋದ್ಯಮ ವಿಭಾಗದ ಮೋಹನ್ ಕುಮಾರ್ ಉಪಸ್ಥಿತರಿದ್ದರು.(ಫೋಟೋ ಕ್ಯಾಫ್ಷನ್)
ಕನಕಪುರದ ರೂರಲ್ ಕಾಲೇಜು ಆವರಣದಲ್ಲಿ ಕೇರಳದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತು ಸಂಗ್ರಹಿಸುವ ಜಾಗೃತಿ ಜಾಥಾಕ್ಕೆ ಆರ್‌ಇಎಸ್ ಅಧ್ಯಕ್ಷ ಶ್ರೀಕಂಠು ಚಾಲನೆ ನೀಡಿದರು.